ರಷ್ಯಾ ಹಿಮ್ಮೆಟ್ಟಿಸಲು ಉಕ್ರೇನ್‌ಗೆ ಯುಎಸ್ ಸಾಥ್: ಅತ್ಯಾಧುನಿಕ ರಾಕೆಟ್ ವ್ಯವಸ್ಥೆಯ ಸಹಕಾರ

ರಷ್ಯಾ ಉಕ್ರೇನ್‌ನ ಮೇಲೆ ಯುದ್ಧವನ್ನು ಮುಂದುವರೆಸುತ್ತಿರುವಾಗ, ಯುಎಸ್ ಅಧ್ಯಕ್ಷ ಜೋ ಬೈಡನ್ ಕೀವ್‌ಗೆ ಸುಧಾರಿತ ರಾಕೆಟ್ ವ್ಯವಸ್ಥೆಗಳನ್ನು ಒದಗಿಸಲು ಸಿದ್ಧರಾಗಿದ್ದಾರೆ. 700 ಮಿಲಿಯನ್ ಡಾಲರ್ ಶಸ್ತ್ರಾಸ್ತ್ರಗಳ ಪ್ಯಾಕೇಜ್ ಇದಾಗಿದೆ. ಉಕ್ರೇನ್‌ಗೆ ಅತ್ಯಾಧುನಿಕ ರಾಕೆಟ್ ವ್ಯವಸ್ಥೆಯ ಸಹಕಾರ ನೀಡುತ್ತಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮಂಗಳವಾರ ಖಚಿತಪಡಿಸಿದ್ದಾರೆ. ರಷ್ಯಾದ ಆಕ್ರಮಣ ಪಡೆಗಳ ಪ್ರಮುಖ ಗುರಿಗಳತ್ತ ನುಗ್ಗುವ ಸಾಮರ್ಥ್ಯವನ್ನು ಅಮೆರಿಕದ ಈ ರಾಕೆಟ್ ಲಾಂಚರ್‌ಗಳು ಹೊಂದಿವೆ. ಇದು ಉಕ್ರೇನ್‌ಗೆ ರಷ್ಯಾವನ್ನು ಹಿಮ್ಮೆಟ್ಟಿಸುವಲ್ಲಿ ಸಹಕರಿಸಬಹುದು.
ಹೈಮರ್ಸ್‌ಗಳನ್ನು ಅಥವಾ ಹೈ ಮೊಬಿಲಿಟಿ ಆರ್ಟಿಲರಿ ರಾಕೆಟ್ ಸಿಸ್ಟಮ್ ಅನ್ನು ಉಕ್ರೇನ್‌ಗೆ ಕಳುಹಿಸುತ್ತಿರುವುದಾಗಿ ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ಚಲನಶೀಲ ಫಿರಂಗಿ ರಾಕೆಟ್ ವ್ಯವಸ್ಥೆಗಳನ್ನು ಹೊಂದಿದ್ದು ಅದು 80 ಕಿಮೀ (50 ಮೈಲುಗಳಷ್ಟು) ದೂರದಲ್ಲಿರುವ ಗುರಿಗಳನ್ನು ಹೊಡೆಯಬಲ್ಲದು ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.