Weather

ರಣಮಳೆಗೆ ಚಿಕ್ಕಬಳ್ಳಾಪುರ ತತ್ತರ, ನೆಲೆಕಚ್ಚಿದ ಬೆಳೆ, ಸಂಕಷ್ಟಕ್ಕೆ ಸಿಲುಕಿದ ಅನ್ನದಾತ

Chikkabalpura rain

ರಾತ್ರಿಯಿಡಿ ಜಿಲ್ಲಾಯಾದ್ಯಂತ ಸುರಿದ ಧಾರಾಕಾರ ಮಳೆಗೆ ದ್ರಾಕ್ಷಿ, ಹೂವು, ತರಕಾರಿ ಸೇರಿದಂತೆ ಹಲವು ಬೆಳೆಗಳು ನಾಶವಾಗಿವೆ. ಬಿರುಗಾಳಿ ಸಹಿತ ಬಿದ್ದ ಮಳೆಗೆ ತಾಲ್ಲೂಕಿನ ಚಿಕ್ಕಕಾಡಿಗಾನಹಳ್ಳಿ ಗ್ರಾಮದ ವೆಂಕಟರೆಡ್ಡಿ ಎಂಬುವವರ ಒಂದು ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ, ಕಟಾವಿಗೆ ಬಂದಿದ್ದ ದ್ರಾಕ್ಷಿ ನೆಲಸಮವಾದರೆ ಗಂಗರೇ ಕಾಲುವೆ, ರೇಣುಮಾಕಲಹಳ್ಳಿ, ಗಂಡ್ಲಹಳ್ಳಿ ಈ ಭಾಗದ ಹಲವು ರೈತರುಗಳ ತೋಟಗಳತ್ತ ನುಗ್ಗಿ ಬಂದ ಮಳೆ ನೀರಿನಿಂದಾಗಿ ಹೂವಿನ ತೋಟಗಳೇ ಕೊಚ್ಚಿ ಹೋದವು.ಇನ್ನು ಈ ಭಾಗದಲ್ಲಿನ ಕಾಲುವೆಗಳು ತುಂಬಿ ಹೊಲಗದ್ದೆಗಳತ್ತ ನುಗ್ಗಿದ ನೀರಿನಿಂದಾಗಿ ಹೊಲಗಳೆಲ್ಲಾ ಕೆರೆ-ಕುಂಟೆಗಳಂತೆ ಕಂಡವು. ರೇಣು ಮಾಕನಹಳ್ಳಿ ನಾರಾಯಣಪ್ಪ ಎಂಬುವವರ ಜಮೀನಿನಲ್ಲಿ ಬೆಳೆದಿದ್ದ ಮಾರಿಗೋಲ್ಡ್ ಹೂವಿನ ಗಿಡಗಳು ಸಂಪೂರ್ಣವಾಗಿ ನೀರಿಗೆ ಕೊಚ್ಚಿಕೊಂಡು ಹೋಗಿವೆ. ಅವರದೇ ದಾಕ್ಷಿ ತೋಟದಲ್ಲಿ ಕಟಾವಿಗೆ ಬಂದಿರುವ ದ್ರಾಕ್ಷಿ ಚಪ್ಪರವೂ ಕಲ್ಲುಕೂಚಗಳು ತೇವಾಂಶ ಜಾಸ್ತಿಯಾಗಿ ಬೀಳುವ ಸ್ಥಿತಿಯಲ್ಲಿದ್ದು , ರೈತ ನಾರಾಯಣಪ್ಪ ಭಯಭೀತಿಗೊಂಡಿದ್ದಾರೆ.

ಗಂಡ್ಲಹಳ್ಳಿ ಗ್ರಾಮದ ವೆಂಕಟೇಶ್ ಎಂಬುವರ ತೋಟದಲ್ಲಿ ಹೂವಿನ ಗಿಡ ಮಳೆನೀರಿನಲ್ಲಿ ಮುಳುಗಡೆಯಾಗಿದೆ. ಇದೇ ಗ್ರಾಮದ ಬೈರೆಡ್ಡಿ ಎಂಬುವವರ ಹೂವಿನ ಗಿಡದಲ್ಲಿ ಸಹ ಇದೇ ಪರಿಸ್ಥಿತಿ ಇದ್ದು ಸಾಲಸೊಲ ಮಾಡಿ ಬೆಳೆದ ಬೆಳೆಯೆಲ್ಲ ನೀರು ಪಾಲಾಯ್ತು ಎಂದು ತಮ್ಮ ದುಗುಡವನ್ನು ಪತ್ರಿಕೆಯೊಂದಿಗೆ ತೋಡಿಕೊಂಡರು.

ಒಟ್ಟಾರೆ ಕುಂಭದ್ರೋಣ ಮಳೆಗೆ ಹಲವರ ತೋಟದ ಬೆಳೆಗಳು ಸರ್ವನಾಶವಾಗಿ ರೈತ ತಿಕ್ಕುದೋಚದಾಗಿ ತಲೆ ಮೇಲೆ ಕೈಇಟ್ಟು ಕೂತಿದ್ದಾನೆ. ಮತ್ತೊಂದೆಡೆ ನಗರದ ತಗ್ಗು ಪ್ರದೇಶದ ವಸತಿ ಇರುವವರು ಮನೆಗಳಿಗೆ ಎಲ್ಲಿ ನೀರು ನುಗ್ಗುವುದೋ ಎಂದು ಪರಿತಪಿಸುತ್ತಿದ್ದಾರೆ.

ರಸ್ತೆಗಳೂ ಜಲಾವೃತ: ರಾತ್ರಿಯಿಡೀ ಸುರಿದ ಮಳೆಗೆ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಹಲವೆಡೆ ರಸ್ತೆಗಳು ಅವಾಂತರ ಸೃಷ್ಟಿಸಿದೆ. ಅಲ್ಲದೆ, ಲಕ್ಷಾಂತರ ರೂ. ನಷ್ಟವುಂಟಾಗಿದೆ. ನಗರದ ಹಲವು ರಸ್ತೆಗಳು ಕೆರೆಯಂತಾಗಿವೆ. ರಸ್ತೆಯಲ್ಲಿ ನೀರು ನಿಂತು ಸಂಚಾರ ಅಸ್ತವ್ಯಸ್ತಗೊಂಡಿದ್ದು, ತಗ್ಗುಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದೆ. ಗುಡುಗು ಸಹಿತ ಧಾರಾಕಾರ ಮಳೆಯಾಗಿ ನಗರದ ಜೈಭೀಮ್ ನಗರ, ದರ್ಗಾಮೊಹಲ್ಲ, ರೇಷ್ಮೆಗೂಡಿನ ಮಾರುಕಟ್ಟೆ ತಗ್ಗು ಜಾಗಗಳೂ ಸೇರಿದಂತೆ ಇನ್ನಿತರ ತಗ್ಗು ಪ್ರದೇಶದ ಜನತೆ ರಾತ್ರಿಯಿಡೀ ಜೀವಭಯದಿಂದಲೇ ಕಾಲ ಕಳೆಯುವಂತಾಗಿದೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button