ಸಿನಿಮಾ

ರಜನಿಕಾಂತ್-ಶಿವಣ್ಣ ಸಂಗಮ ; ಅಭಿಮಾನಿಗಳಲ್ಲಿ ಹೆಚ್ಚಿದ ಕಾತರ

Shivarajkumar to play pivotal role in Rajinikanth

ಮಲ್ಟಿಸ್ಟಾರ್ ಚಿತ್ರಗಳು ಸೆಟ್ಟೇರುತ್ತದೆ ಎಂದರೆ ಆ ನಟರುಗಳ ಅಭಿಮಾನಿಗಳಲ್ಲಿ ಸಹಜವಾಗಿಯೇ ಕುತೂಹಲ ಮೂಡುತ್ತದೆ. ಅದರಲ್ಲೂ ಪರಭಾಷಾ ಸ್ಟಾರ್ ನಟಕರುಗಳು ಒಂದೇ ಸಿನಿಮಾದಲ್ಲಿ ನಟಿಸುತ್ತಾರೆ ಎಂದರೆ ಅದರ ಬಗ್ಗೆ ಅಭಿಮಾನಿಗಳಲ್ಲಿ ಎಷ್ಟು ಕ್ರೇಜ್ ಇರಬೇಕಲ್ಲವೇ..?ಇಂತಹ ಕ್ರೇಜ್ ಹುಟ್ಟಿಸುವ ಸಿನಿಮಾವೊಂದು ತಮಿಳಿನಲ್ಲಿ ನಿರ್ಮಾಣವಾಗುತ್ತಿದೆ. ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 169 ಚಿತ್ರವು ಈಗಾಗಲೇ ಚಿತ್ರರಂಗದಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಈ ಸಿನಿಮಾವನ್ನು ಫ್ಯಾನ್ ಇಂಡಿಯಾ ಚಿತ್ರವಾಗಿಸುವ ಉದ್ದೇಶ ಹೊಂದಿರುವುದರಿಂದ ನಿರ್ದೇಶಕ ನೆಲ್ಸನ್ ದಿಲೀಪ್‍ಕುಮಾರ್ ಅವರು ಸ್ಯಾಂಡಲ್‍ವುಡ್‍ನ ಸೆಂಚುರಿ ಸ್ಟಾರ್ ಶಿವರಾಜ್‍ಕುಮಾರ್ ಅವರ ಕಾಲ್‍ಶೀಟ್ ಅನ್ನು ಪಡೆದುಕೊಂಡಿದ್ದಾರೆ.

ರಜನಿಕಾಂತ್‍ರೊಂದಿಗೆ ಈಗಾಗಲೇ ಐಶ್ವರ್ಯರೈ ನಟಿಸುತ್ತಿದ್ದು ಈಗ ಶಿವಣ್ಣನ ಎಂಟ್ರಿ ಆಗಿರುವುದರಿಂದ ಆ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಮತ್ತಷ್ಟು ಕ್ರೇಜ್ ಹುಟ್ಟುಕೊಂಡಿದೆ.

ಕಮರ್ಷಿಯಲ್ ಸಿನಿಮಾವಾಗಿ ರುವ ರಜನಿಯ 169ನೇ ಸಿನಿಮಾದ ಚಿತ್ರೀಕರಣವು ಆಗಸ್ಟ್‍ನಿಂದ ಶುರುವಾಗಲಿದ್ದು, ಸೂಪರ್‍ಸ್ಟಾರ್ ರಜನಿಕಾಂತ್ ಹಾಗೂ ಸೆಂಚುರಿ ಸ್ಟಾರ್ ಶಿವರಾಜ್‍ಕುಮಾರ್ ಕಾಂಬಿನೇಷನ್‍ನ ಚಿತ್ರೀಕರಣವನ್ನು ಸೆಪ್ಟೆಂಬರ್‍ನಲ್ಲಿ ನಡೆಸಲಾಗುವುದು ಎಂದು ಚಿತ್ರತಂಡವು ತಿಳಿಸಿದೆ.

ಶಿವಣ್ಣ ಸಂತಸ:ಸೂಪರ್ ಸ್ಟಾರ್ ರಜನಿಕಾಂತ್‍ರೊಂದಿಗೆ ನಟಿಸುವ ಬಯಕೆ ಎಲ್ಲರಲ್ಲೂ ಇರುತ್ತದೆ, ಆ ಅವಕಾಶ ನನಗೆ ಬಂದಿರುವುದು ತುಂಬಾ ಸಂತಸವಾಗುತ್ತಿದೆ, ರಜನಿಕಾಂತ್ ಅವರು ನನ್ನನ್ನು ಚಿಕ್ಕ ವಯಸ್ಸಿನಿಂದ ತುಂಬಾ ಚೆನ್ನಾಗಿ ಅರಿತಿದ್ದಾರೆ, ನಾನು ಕೂಡ ನನ್ನ ಸಿನಿಮಾದ ಅನೇಕ ವಿಚಾರಗಳನ್ನು ಅವರೊಂದಿಗೆ ಹಂಚಿಕೊಂಡಿದ್ದೇನೆ, ನಮ್ಮಿಬ್ಬರ ಸಿನಿಮಾವು ಅಭಿಮಾನಿಗಳಿಗೆ ಸಂತಸ ಮೂಡಿಸಲಿದೆ ಎಂದು ಹೇಳಿದರು.

ಬೆಂಗಳೂರು/ ಮೈಸೂರಿನಲ್ಲಿ ಚಿತ್ರೀಕರಣ:ನನ್ನ ಹಾಗೂ ರಜನಿಕಾಂತ್ ಕಾಂಬಿನೇಷನ್‍ನ ಸಿನಿಮಾದ ಚಿತ್ರೀಕರಣವು ಆಗಸ್ಟ್‍ನಲ್ಲಿ ಸೆಟ್ಟೇರಲಿದ್ದು, ಸೆಪ್ಟೆಂಬರ್‍ನಲ್ಲಿ ನಮ್ಮ ಭಾಗದ ಚಿತ್ರೀಕರಣ ನಡೆಯಲಿದ್ದು, ಶೂಟಿಂಗ್ ಅನ್ನು ಬೆಂಗಳೂರು ಅಥವಾ ಮೈಸೂರಿನಲ್ಲಿ ನಡೆಸುವ ಸೂಚನೆಗಳಿವೆ ಎಂದು ಶಿವಣ್ಣ ತಮ್ಮ ಸಂತಸ ಹಂಚಿಕೊಂಡರು.

ರಜನಿಕಾಂತ್- ಐಶ್ವರ್ಯಾ ಮೋಡಿ:ಚಿತ್ರರಂಗದಲ್ಲಿ ಯಶಸ್ವಿ ಜೋಡಿ ಎನಿಸಿಕೊಂಡಿರುವ ಸೂಪರ್‍ಸ್ಟಾರ್ ರಜನಿಕಾಂತ್ ಹಾಗೂ ಐಶ್ವರ್ಯ ರೈ ಅವರು ರೋಬೋ ಸಿನಿಮಾದ ನಂತರ ಮತ್ತೊಮ್ಮೆ ಜೋಡಿಯಾಗಿದ್ದು ಈ ಚಿತ್ರದಲ್ಲಿ ಅವರು ರಜನಿಕಾಂತ್‍ನ ಮಡದಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ `ಅಣ್ಣಾತೈ’ ಸಿನಿಮಾದ ನಂತರ ನಿರ್ಮಾಣವಾಗುತ್ತಿರುವ ತಲೈವಾರ್ 169ನೆ ಚಿತ್ರವನ್ನು ನಲ್ಸನ್ ದಿಲೀಪ್‍ಕುಮಾರ್ ಅವರು ನಿರ್ದೇಶಿಸುತ್ತಿದ್ದು, ಅನಿರುದ್ಧ್ ರವಿಚಂದ್ರನ್ ಸಂಗೀತವಿದ್ದು ಸಿನಿಮಾವನ್ನು 2023ರ ಮಾರ್ಚ್ ಅಥವಾ ಏಪ್ರಿಲ್‍ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಹಾಕಿಕೊಂಡಿದೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button