ಯೋಗ ವೇದಿಕೆಯಿಂದ MLA ರಾಮದಾಸ್, MP ಪ್ರತಾಪ್ ಸಿಂಹಗೆ ಗೇಟ್ ಪಾಸ್..!
mla ramdas mp pratap simha mysore yoga day

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿರುವ ಯೋಗ ಕಾರ್ಯಕ್ರಮದಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಎಸ್.ಎ.ರಾಮದಾಸ್ ಇಬ್ಬರಿಗೂ ವೇದಿಕೆಯಿಂದ ಗೇಟ್ ಪಾಸ್ ನೀಡಲಾಗಿದೆ. ಯೋಗ ಕಾರ್ಯಕ್ರಮದ ಮೈಲೇಜ್ ವಾರ್‍ನಲ್ಲಿ ಈ ಮೂಲಕ ಇಬ್ಬರಿಗೂ ತೀವ್ರ ಮುಖಭಂಗವಾಗಿದೆ.
ಕ್ಷೇತ್ರದ ಶಾಸಕ ರಾಮದಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಬೇಕಿತ್ತು. ಆದರೆ ವೇದಿಕೆಗೆ ಅವಕಾಶ ನೀಡಿಲ್ಲ ಎಂದು ಹೇಳಲಾಗುತ್ತಿದೆ. ಸ್ಥಳೀಯ ಸಂಸದನಾಗಿ ವೇದಿಕೆ ಅಲಂಕರಿಸಲು ಪ್ರತಾಪ್ ಸಿಂಹನಿಗೂ ಅವಕಾಶವಿತ್ತು. ಆದರೆ ಅವರಿಗೂ ಕೂಡ ಕಾರ್ಯಕ್ರಮಕ್ಕೆ ಗೇಟ್ ಪಾಸ್ ನೀಡಲಾಗಿದೆ.
ಇಬ್ಬರೂ ಕ್ರೆಡಿಟ್‍ಗಾಗಿ ಹಾದಿ ಬೀದಿ ರಂಪಾಟ ಮಾಡಿದ ಹಿನ್ನೆಲೆ ಮುಜುಗರ ತಪ್ಪಿಸಲು ಪ್ರಧಾನಿ ಕಾರ್ಯಾಲಯ ಈ ತೀರ್ಮಾನ ಮಾಡಿದೆ ಎಂದು ಹೇಳಲಾಗಿದೆ.
ಕೇವಲ ಐದು ಮಂದಿಗೆ ಮಾತ್ರ ಪ್ರಧಾನಿ ಜೊತೆ ವೇದಿಕೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಸಿಎಂ, ರಾಜ್ಯಪಾಲ, ಜಿಲ್ಲಾ ಉಸ್ತುವಾರಿ ಸಚಿವ, ಆಯುಷ್ ಇಲಾಖೆ ಸಚಿವರಿಗೆ ಮಾತ್ರ ಅವಕಾಶ ನೀಡಲಾಗಿದೆ.