ರಾಷ್ಟ್ರಿಯ

ಯೋಗಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

emergency landing,UP CM,Yogi Adityanath

ಪಕ್ಷಿಯೊಂದು ಡಿಕ್ಕಿ ಹೊಡೆದ ಪರಿಣಾಮ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ವಾರಣಾಸಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಲಕ್ನೋದಿಂದ ಹೆಲಿಕಾಪ್ಟರ್ ಹೊರಡುತ್ತಿದ್ದಂತೆ ಈ ಘಟನೆ ಸಂಭವಿಸಿದೆ, ನಂತರ ತುರ್ತು ಭೂಸ್ಪರ್ಶ ಮಾಡಬೇಕಾಯಿತು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲರಾಜ್ ಶರ್ಮಾ ಹೇಳಿದ್ದಾರೆ ನಂತರ ಸ್ವಲ್ಪ ಸಮಯ ಕಳೆದು ಹೆಲಿಕಾಪ್ಟರ್ ಸುರಕ್ಷತೆ ಖಚಿತ ಪಡಿಸಿದ ನಂತರ ಲಖನೌಗೆ ಸುಮಾರು 2 ತಾಸು ತಡವಾಗಿ ತೆರಳಿದರು.

ಶನಿವಾರ ವಾರಾಣಸಿಗೆ ಆಗಮಿಸಿದ್ದ ಸಿಎಂ, ಕಾಶಿ ವಿಶ್ವನಾಥ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದರಲ್ಲದೆ, ಅಭಿವೃದ್ಧಿ ಕಾಮಗಾರಿ ಹಾಗೂ ಕಾನೂನು ಸುವ್ಯವಸ್ಥೆ ಪರಿಶೀಲನೆ ನಡೆಸಿದರು. ವಾರಣಾಸಿಯಲ್ಲಿ ರಾತ್ರಿ ತಂಗಿದ್ದ ಅವರು ಇಂದು ಬೆಳಗ್ಗೆ ಲಖನೌಗೆ ತೆರಳಬೇಕಾಗಿದ್ದಾಗ ಈ ಘಟನೆ ನಡೆದಿದೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button