ಯುವತಿ ಮೇಲೆ ಆ್ಯಸಿಡ್ ದಾಳಿ: ನಾಳೆ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆ

ಸಿಲಿಕಾನ್ ಸಿಟಿಯಲ್ಲಿ ಬೆಚ್ಚಿಬೀಳಿಸುವಂತೆ ಮಾಡಿದ್ದ ಆ್ಯಸಿಡ್ ದಾಳಿ ಪ್ರಕರಣದ ಚಾರ್ಜ್ ಶೀಟನ್ನು ನಾಳೆ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ.
ಮೂರು ತಿಂಗಳ ಸುದೀರ್ಘ ತನಿಖೆಯ ಬಳಿಕ ಪೊಲೀಸರು 13 ನೇ ಎಸಿಎಂಎಂ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ. ಇನ್ನು 770 ಪುಟಗಳ ಪ್ರಾಥಮಿಕ ಚಾರ್ಜ್ ಶೀಟ್ ಇದಾಗಿದ್ದು, 92 ಸಾಕ್ಷಿಗಳನ್ನ ಉಲ್ಲೇಖಿಸಲಾಗಿದೆ. ಹಾಗೆಯೇ ಇಬ್ಬರು ಐ ವಿಟ್ನೆಸ್ ಗಳ 164 ಸ್ಟೇಟ್ಮೆಂಟ್ ಗಳನ್ನೂ ದಾಖಲಿಸಿಕೊಳ್ಳಲಾಗಿದೆ.
ಇದಲ್ಲದೆ, ನಾಗೇಶ್ ಯುವತಿ ಮೇಲೆ ಆ್ಯಸಿಡ್ ಎರಚಿದ ಮೇಲೆ ತನ್ನ ಸಹೋದರನಿಗೆ ಕರೆ ಮಾಡಿದ್ದ ಆಡಿಯೋ ಸೇರಿ ಹಲವು ವಾಯ್ಸ್ ರೆಕಾರ್ಡ್ ಗಳನ್ನ ಎಫ್ ಎಸ್ ಎಲ್ ಗೆ ರವಾನೆ ಮಾಡಲಾಗಿತ್ತು. ಈಗ ಅದು ನಾಗೇಶನ ಧ್ವನಿ ಎಂದು ಕನ್ಪರ್ಮ್ ಆಗಿದೆ.
ಈ ಹಿಂದೆ ನಾಗೇಶ್ ಹಾಗೂ ಸಂತ್ರಸ್ತೆಯ ಕನ್ಪೇಷನ್ ಕಾಪಿಯಲ್ಲಿ ಹೇಳಿಕೆ ನೀಡಿರುವ ಅಂಶಗಳು ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿವೆ. ಇದೇ ವೇಳೆ ಸಾಕಷ್ಟು ಸಿಸಿಟಿವಿಗಳನ್ನೂ ಕೂಡ ಸೀಜ್ ಮಾಡಲಾಗಿದ್ದು, ಆ ಸಾಕ್ಷಿಗಳನ್ನ ಕೋರ್ಟ್ ಗೆ ಸಲ್ಲಿಸಲಾಗುತ್ತದೆ ಎಂದು ತಿಳಿದುಬಂದಿದೆ.