ಯುವತಿ ಬಾಳು ನರಕ. ಆ್ಯಸಿಡ್ ನಾಗನ ಬಗ್ಗೆ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗ..!

ಬರೋಬ್ಬರಿ 9 ಲೀಟರ್ HCL ಆ್ಯಸಿಡ್ ಸಂಗ್ರಹಿಸಿಟ್ಟಿದ್ದ ಯುವತಿಯ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿರೋ ನಾಗ, ಆ್ಯಸಿಡ್ ದಾಳಿಗೂ ಮುನ್ನ ಕ್ಯಾನಲ್ಲಿ ನೀರು ತಂದಂತೆ ಲೀಟರ್‌ಗಟ್ಟಲೆ ಆ್ಯಸಿಡ್ ತಂದು ಇಡ್ಕೊಂಡಿದ್ದು ತನಿಖೆಯಿಂದ ಗೊತ್ತಾಗಿದೆ.
ಗಾರ್ಮೆಂಟ್ಸ್‌ನಲ್ಲಿ ಬಟ್ಟೆ ತೊಳೆಯೋ ನೆಪದಲ್ಲಿದ್ದ ಪಾಪಿ ಬರೋಬ್ಬರಿ 9 ಲೀಟರ್ HCL ಆ್ಯಸಿಡ್ ಸಂಗ್ರಹಿಸಿಟ್ಟಿದ್ದ. ನಾಗೇಶ ಯುವತಿ ಮೇಲೆ ಆ್ಯಸಿಡ್ ಹಾಕುವ ಒಂದು ವಾರ ಮೊದಲು ಮಾರಾಟಗಾರರಿಂದ ಟೆಕ್ಸ್ ಟೈಲ್ ವಾಶ್ಗಾಗಿ ಬೇಕಾಗಿದೆ ಅಂತ 9 ಲೀಟರ್ ಆ್ಯಸಿಡ್ ಖರೀದಿಸಿ ತಂದಿರಿಸಿದ್ದ. ಅದರಲ್ಲಿ 1 ಲೀಟರ್ ಆ್ಯಸಿಡ್‌ನ್ನು ಸ್ಟ್ರಾಂಗ್ ಆ್ಯಂಡ್ ಥಿಕ್ ಸೇಫ್ ಗೌಸ್ ಒಳಗೆ ಬಾಟಲ್ ಇಟ್ಟು ತುಂಬಿಸಿದ್ದ. ಏಪ್ರಿಲ್ 28 ರಂದು ಬೆಳಗ್ಗೆ 1 ಲೀಟರ್‌ನಷ್ಟು ಆ್ಯಸಿಡ್‌ನ್ನು ತಂದು ಯುವತಿ ಮೇಲೆ ಸುರಿದು ಉಳಿದ 8 ಲೀಟರ್ ಆ್ಯಸಿಡ್ ಹಾಗೆಯೇ ಇಟ್ಟಿದ್ದ.
ಸದ್ಯ 8 ಲೀಟರ್ ಆ್ಯಸಿಡ್ ಸೀಜ್ ಮಾಡಿರೋ ಕಾಮಾಕ್ಷಿಪಾಳ್ಯ ಪೊಲೀಸರು ಆ್ಯಸಿಡ್ ಕೊಟ್ಟವರನ್ನು ಕರೆತಂದು ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಆ್ಯಸಿಡ್ ಕುರಿತ ವರದಿಗಾಗಿ FSL ಮಾದರಿ ರವಾನಿಸಿದ್ದು ಖಾಸಗಿ ಲ್ಯಾಬ್ ನಲ್ಲೂ ಆ್ಯಸಿಡ್ ಪರೀಕ್ಷೆ ನಡೆಸಿದ್ದಾರೆ.ಆ್ಯಸಿಡ್ ನಾಗ.. ಯುವತಿ ಯೊಬ್ಬಳ ಜೀವನ ವನ್ನೇ ನರಕ ಮಾಡಿ ಪರಾರಿಯಾಗಿರುವ ಪಾಪಿ, ಈ ಪಾಪಿಗಾಗಿ ಪೊಲೀಸರು ಹಗಲು ರಾತ್ರಿ ಎನ್ನದೇ ತಲಾಶ್ ನಡೆಸುತ್ತಿದ್ದರೂ ಆರೋಪಿ ಮಾತ್ರ ಸಿಗುವ ಲಕ್ಷಣ ಕಾಣಿಲ್ಲ.
ಈ ನಡುವೆ ಆ್ಯಸಿಡ್ ನಾಗನ ಕುರಿತು ಮತ್ತೊಂದು ರಹಸ್ಯ ಬಯಲಾಗಿದೆ.ಬರೋಬ್ಬರಿ 9 ದಿನ ಆಯ್ತು. ಆ್ಯಸಿಡ್ ನಾಗ ಆ್ಯಸಿಡ್ ಎರಚಿ ಯುವತಿಯ ಬಾಳನ್ನೇ ನರಕ ಮಾಡಿ. ಎಲ್ಲಿ ಹೋದ ಅಂತ ಗೊತ್ತಿಲ್ಲ. ಪೊಲೀಸರು ಹಲವು ಟೀಂ ಮಾಡಿ ರಾಜ್ಯ ಬಿಟ್ಟು ರಾಜ್ಯದಲ್ಲಿ ಟೆಂಟ್ ಹಾಕಿ ದುರ್ಬಿನ್ ಹಿಡಿದು ಹುಡುಕಿದ್ರೂ ನಾಗ ಸೇರಿದ ಬಿಲ ಪತ್ತೆ ಆಗ್ತಿಲ್ಲ. ಈ ನಡುವೆ ನಾಗ ಇಡ್ಕೊಂಡಿದ್ದ ಆ್ಯಸಿಡ್ ಬಗ್ಗೆ ಪೊಲೀಸರ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲಾಗಿದೆ.