ರಾಜ್ಯ

ಯುವಜನರಲ್ಲಿ ಹೆಚ್ಚಿದ ಖಿನ್ನತೆ: ಆತ್ಮಹತ್ಯೆ ಪಟ್ಟಿಯಲ್ಲಿ ರಾಜ್ಯಕ್ಕೆ 5ನೇ ಸ್ಥಾನ!

ಬೆಂಗಳೂರು ಗ್ರಾಮಾಂತರ: ದೇಶದ ಯುವಜನರ ಮಾನಸಿಕ ಆರೋಗ್ಯ ಕುಸಿಯುತ್ತಿದ್ದು, ಆತ್ಮಹತ್ಯೆಗಳ ಸಂಖ್ಯೆ ಗಣನೀಯ ಏರಿಕೆ ಕಾಣುತ್ತಿದೆ.

ಕಳೆದ ವರ್ಷ ದೇಶಾದ್ಯಂತ 1.64 ಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪೈಕಿ 13089 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಹೆಚ್ಚು ಆತ್ಮಹತ್ಯೆಗಳ ಪಟ್ಟಿಯಲ್ಲಿ ಕರ್ನಾಟಕ 5ನೇ ಸ್ಥಾನದಲ್ಲಿದ್ದು, ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮೊದಲ 4 ಸ್ಥಾನದಲ್ಲಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ತನ್ನ ವರದಿಯಲ್ಲಿ ಪ್ರಕಟಿಸಿದೆ.

ವಿದ್ಯಾವಂತ ಯುವಜನತೆ ಹೆಚ್ಚಾಗಿ ಆತ್ಮಹತ್ಯೆ ತೀರ್ಮಾನಕ್ಕೆ ಮುಂದಾಗುತ್ತಿರುವುದು ವರದಿಯಲ್ಲಿ ದಾಖಲಾಗಿದೆ.2021ರಲ್ಲಿ 18 ವರ್ಷದೊಳಗಿನ ಬಾಲಕರು 5075 ಮಂದಿ ಆತ್ಮಹತ್ಯೆ ಮಾಡಿಕೊಂಡರೆ, ಬಾಲಕಿಯರು 5655 ಮಂದಿ ಆತ್ಮಹತ್ಯೆ ಗೈದಿದ್ದಾರೆ.

18ರಿಂದ 30 ವರ್ಷದೊಳಗಿನ 37941 ಯುವಕರು ಆತ್ಮಹತ್ಯೆ ಮಾಡಿಕೊಂಡರೆ, 18,588 ಯುವತಿಯರು ಸಾವಿಗೆ ಶರಣಾಗಿದ್ದಾರೆ.ಆತ್ಮಹತ್ಯೆ ಕಾರಣವಾಗುವ ಸಮಸ್ಯೆಕುಟುಂಬ: 33.2%ಮಾನಸಿಕ ಖಿನ್ನತೆ: 18.6%ಬೆಂಗಳೂರಿಗೆ 3ನೇ ಸ್ಥಾನರಾಜ್ಯದಲ್ಲಿ ಕಳೆದ ವರ್ಷ 13056 ಆತ್ಮಹತ್ಯೆಗಳಾಗಿದ್ದು, ರಾಷ್ಟ್ರೀಯ ಸರಾಸರಿ ಆತ್ಮಹತ್ಯೆ ದರ ಶೇ.19.50ಕ್ಕೆ ಏರಿಕೆ ಕಂಡಿದೆ.

ದೇಶದ 53 ಪ್ರಮುಖ ನಗರಗಳಲ್ಲಿ ಹೆಚ್ಚು ಆತ್ಮಹತ್ಯೆ ವರದಿಯಾಗುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು (2292) 3ನೇ ಸ್ಥಾನದಲ್ಲಿದೆ. ಹೊಸದಿಲ್ಲಿ 2760, ಚೆನ್ನೈ 2699 ಆತ್ಮಹತ್ಯೆಗಳ ವರದಿಯಿಂದ ಮೊದಲೆರಡು ಸ್ಥಾನದಲ್ಲಿವೆ.

2020ರಲ್ಲಿ ಬೆಂಗಳೂರಿನಲ್ಲಿ 2196ರಲ್ಲಿದ್ದ ಆತ್ಮಹತ್ಯೆ ಸಂಖ್ಯೆ 2292ಕ್ಕೆ ಏರಿಕೆ ಕಂಡಿದ್ದು, ದೇಶದ ಸರಾಸರಿಯಲ್ಲಿ ಶೇ.4.4ರಷ್ಟು ಏರಿಕೆಯಾಗಿದೆ.ಖಿನ್ನತೆ ಏರಿಕೆ ಏಕೆ?ಯುವಕರು ಹೆಚ್ಚು ಅಂತರ್ಮುಖಿ ಚಿಂತನೆಪರಸ್ಪರ ವಿಚಾರ ವಿನಿಮಯ ಪ್ರಮಾಣ ಕುಸಿತಜೀವನಕ್ಕೆ ಸಲಹೆಗಳನ್ನು ಕೊಡೋರಿಲ್ಲ.

ಕೊಟ್ಟರೆ ಕೇಳೋರಿಲ್ಲಔದ್ಯೋಗಿಕ, ಪ್ರೇಮ ವೈಫಲ್ಯ, ಬದುಕಿನಲ್ಲಿ ದೃಢತೆಯಿಲ್ಲದಿರುವುದುಪರಿಹಾರೋಪಾಯಗಳುಶಾಲಾ ಹಂತದಿಂದಲೇ ಮಾನಸಿಕ ಆರೋಗ್ಯ ಬಗ್ಗೆ ವಿಶೇಷ ಕಾಳಜಿಪೋಷಕರು ಮಕ್ಕಳತ್ತ ವಿಶೇಷ ಗಮನಹರಿಸಬೇಕಿದೆಖಿನ್ನತೆಗೊಳಗಾದ ಯುವಕರಿಗೆ ಬದುಕಿನ ಬಗ್ಗೆ ಉತ್ಸಾಹ ಮೂಡಿಸಬೇಕಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button