ಯಾರ ಬಳಿಯಾದರೂ ಈದ್ಗಾ ಮೈದಾನದ ಅಧಿಕೃತ ದಾಖಲೆ ಇದ್ದರೆ ಕೊಡಿ”

ಚಾಮರಾಜೇಟೆಯ ಈದ್ಗಾ ಮೈದಾನ ವಿವಾದ ಸಂಬಂಧ ಯಾರ ಬಳಿಯಾದರೂ ಅಧಿಕೃತ ದಾಖಲೆ ಇದ್ದರೆ, ಸಾಬೀತುಪಡಿಸಲಿ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸವಾಲು ಹಾಕಿದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈದ್ಗಾ ಮೈದಾನವೂ ಆಟದ ಮೈದಾನವಾಗಿದೆ. ಇದು ನಮ್ಮ ಸ್ವಾೀಧಿನ ದಲ್ಲೇ ಇದೆ. ಆದರೂ, ಕೆಲವರು ಇದು ನಮ್ಮದು ಎಂದು ವಾದ ಮಾಡುತ್ತಿದ್ದು, ಅಂತವರು ದಾಖಲೆಗಳನ್ನು ನಮ್ಮ ಮುಂದೆ ಸಾಬೀತುಪಡಿಸಲಿ ಎಂದರು.ಒಂದು ಕಡೆ ವ್ಯಕ್ತಿಯೊಬ್ಬರು ಈ ಜಾಗ ನಮ್ಮೊಂದು ಎಂದು ಕೋರ್ಟ್ ಗೆ ಹೋಗಿದ್ದರು.
ಇದಾದ ಬಳಿಕ ಸಿಎಂಎ, ವಕ್ ಮಂಡಳಿ ಈದ್ಗಾ ಮೈದಾನ ನಮ್ಮದೆಂದು ತಿಳಿಸಿದೆ. ಆದರೆ, ಅವರು ಯಾವ ಆಧಾರದ ಮೇಲೆ ಹೇಳುತ್ತಿದ್ದಾರೆ ಎನ್ನುವುದು ಮುಖ್ಯ ಎಂದ ಅವರು, 1974ನೇ ಸಾಲಿನಲ್ಲಿ ಈ ಪ್ರದೇಶವನ್ನು ಸರ್ವೇ ಮಾಡಲಾಗಿದೆ.
ಅದರಂತೆ, ಇದು ಆಟದ ಮೈದಾಮ ಜಾಗವೇ ಆಗಿದೆ ಎಂದು ಪ್ರತಿಪಾದಿಸಿದರು.ನಾವು ನಮ್ಮ ದಾಖಲೆಯನ್ನ ಅವರಿಗೆ ನೀಡಲಾಗುವುದು. ಇನ್ನೂ, 1962ನೇ ಸಾಲಿನಲ್ಲಿ ಸುಪ್ರಿಂ ಕೋರ್ಟ್ ಆದೇಶ ಕೊಟ್ಟಿದೆ.
ಸುಪ್ರಿಂ ಕೋರ್ಟ್ ನ ದಾಖಲೆ ಇದ್ದರೂ ಅದರಲ್ಲಿ ಒಂದು ಪುಟ ಕಾಣುತ್ತಿಲ್ಲ. ಮತ್ತೊಂದೆಡೆ ಖಾತಾ ನೋಂದಣಿಯಲ್ಲಿ ಈದ್ಗಾ, ದರ್ಗಾ ಎಂದೂ ಉಲ್ಲೇಖಿಸಲಾಗಿದೆ. ಆದರೆ, ಯಾವ ಆಧಾರದ ಮೇಲೆ ಈದ್ಗಾ ಮೈದಾನ ಆಗಿದೆ ಎನ್ನುವುದು ಗೊತ್ತಾಗಿಲ್ಲ.
ಸುಪ್ರಿಂ ಆದೇಶವನ್ನ ಅಕೃತವಾಗಿ ತರಿಸಿಕೊಂಡು ಮುಂದಿನ ಕ್ರಮ ಕಾನೂನು ಘಟಕದ ಸಲಹೆ ಪಡೆದು ಮುಂದಿನ ತೀರ್ಮಾನ ಮಾಡಲಾಗುವುದು ಎಂದು ಆಯುಕ್ತರು ನುಡಿದರು.
ಮೈದಾನದಲ್ಲಿ ಕಾರ್ಯಕ್ರಮಕ್ಕೆ ಕೆಲ ಹಿಂದೂ ಸಂಘಟನೆಗಳ ಮನವಿ ವಿಚಾರ ಸಂಬಂಧ ಅನುಮತಿ ನೀಡುವುದು ಬಿಡುವುದು ಜಂಟಿ ಆಯುಕ್ತರ ವಿವೇಚನೆಗೆ ಬಿಟ್ಟಿದ್ದು, ಅಗತ್ಯ ಬಿದ್ದರೆ ಪೊಲೀಸರ ಸಲಹೆ ಪಡೆದು ಮುಂದಿನ ತೀರ್ಮಾನ ಮಾಡಲಾಗುವುದು ಎಂದರು.