ಮ್ಯೂಸಿಕ್ ಶೂಟಿಂಗ್ ವೇಳೆ ನುಗ್ಗಿದ ಗನ್ ಹಿಡಿದಿದ್ದ ಗ್ಯಾಂಗ್ 8 ಯುವ ರೂಪದರ್ಶಿಗಳ ಮೇಲೆ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ದಕ್ಷಿಣ ಆಫ್ರಿಕಾದ ಜೊಹಾನ್ಸ್ ಬರ್ಗ್ ಬಳಿ ನಡೆದಿದೆ.

ಮ್ಯೂಸಿಕ್ ಶೂಟಿಂಗ್ ವೇಳೆ ನುಗ್ಗಿದ ಗನ್ ಹಿಡಿದಿದ್ದ ಗ್ಯಾಂಗ್ 8 ಯುವ ರೂಪದರ್ಶಿಗಳ ಮೇಲೆ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ದಕ್ಷಿಣ ಆಫ್ರಿಕಾದ ಜೊಹಾನ್ಸ್ ಬರ್ಗ್ ಬಳಿ ನಡೆದಿದೆ.
ಜೊಹಾನ್ಸ್ ಬರ್ಗ್ ಹೊರವಲಯದಲ್ಲಿ ಕ್ರುಗೆಡ್ರೊಪ್ ಎಂಬ ಸಣ್ಣ ಪಟ್ಟಣದಲ್ಲಿ ಸುಮಾರು 20 ಜನರಿದ್ದ ಗ್ಯಾಂಗ್ ಮ್ಯೂಸಿಕ್ ಆಲ್ಬಂ ಶೂಟಿಂಗ್ ವೇಳೆ ದಾಳಿ ಮಾಡಿದೆ.
ಚಿತ್ರೀಕರಣಕ್ಕೆ ಸಿದ್ಧತೆ ನಡೆಸುವ ವೇಳೆ ದಾಳಿ ಮಾಡಿದ ಗ್ಯಾಂಗ್ 8 ಯುವ ರೂಪದರ್ಶಿಗಳ ಮೇಲೆ ಅತ್ಯಾಚಾರ ಎಸಗಿದೆ. ಘಟನೆಯಲ್ಲಿ ಮೂವರನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಶೋಧ ಕಾರ್ಯ ನಡೆದಿದೆ ಎಂದು ಜೊಹಾನ್ಸ್ ಬರ್ಗ್ ಪೊಲೀಸರು ತಿಳಿಸಿದ್ದಾರೆ.
18ರಿಂದ 35 ವರ್ಷದ ರೂಪದರ್ಶಿಯರ ಮೇಲೆ ಅತ್ಯಾಚಾರ ಆಗಿದ್ದು, ಒಬ್ಬಾಕೆಯ ಮೇಲೆ 10 ಮಂದಿ ಹಾಗೂ ಮತ್ತೊಬ್ಬಾಕೆಯ ಮೇಲೆ 8 ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.
ಅತ್ಯಾಚಾರ ಎಸಗಿದ ನಂತರ ರೂಪದರ್ಶಿಯರನ್ನು ಬೆತ್ತಲೆ ನಿಲ್ಲಿಸಿ ಅವರ ಬಳಿಯಿದ್ದ ವಸ್ತುಗಳನ್ನು ಕೂಡ ದೋಚಿದ್ದಾರೆ ಎನ್ನಲಾಗಿದೆ. ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಆದರೆ ದಕ್ಷಿಣ ಆಫ್ರಿಕಾದಲ್ಲಿ ಪ್ರತಿ 12 ನಿಮಿಷಕ್ಕೆ ಒಂದು ಅತ್ಯಾಚಾರ ಪ್ರಕರಣ ನಡೆಯುತ್ತಿರುತ್ತದೆ ಎಂದು ಹೇಳಲಾಗಿದೆ.