ಮೋಸ ಮಾಡಿದಳೆಂದು ಗೆಳತಿಯ ಕತ್ತು ಸೀಳಿ ಹತ್ಯೆ

ಗೆಳತಿ ತನಗೆ ಮೋಸ ಮಾಡಿದಳೆಂದು ಮಧ್ಯಪ್ರದೇಶದ ಜಬಲ್ಪುರದ ವ್ಯಕ್ತಿಯೊಬ್ಬ ಆಕೆಯನ್ನು ಕತ್ತು ಸೀಳಿ ಕೊಂದಿದ್ದಾನೆ. ಈ ಕೊಲೆ ನಡೆದು ಹಲವು ದಿನಗಳು ಕಳೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಜಬಲ್‌ಪುರ ಮೂಲದ ಮೇಖ್ಲಾ ರೆಸಾರ್ಟ್‌ನಲ್ಲಿ ಆರೋಪಿಯು ಗೆಳತಿ ಶಿಲ್ಪಾ ಝಾರಿಯಾಳನ್ನು ಕೊಂದು ಆಕೆ ಸಾಯುವ ಮುನ್ನ ರಕ್ತಸಿಕ್ತ ದೇಹದ ವೀಡಿಯೊ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾನೆ.
ಪೋಸ್ಟ್ ಮಡಿರುವ ವೀಡಿಯೊದಲ್ಲಿ ಆತ ನಂಬಿಕೆಗೆ ದ್ರೋಹ ಮಾಡಬೇಡಿ, ಸ್ವರ್ಗದಲ್ಲಿ ಮತ್ತೆ ಸಿಗೋಣ ಎಂದೂ ಹೇಳಿದ್ದಾನೆ. ಹಾಸಿಗೆಯಲ್ಲಿ ಮಲಗಿರುವ ರಕ್ತಸಿಕ್ತ ಮಹಿಳೆಯನ್ನು ತೋರಿಸಿದ್ದು, ಗಂಟಲು ಸೀಳಿ ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ.
ಪಾಟ್ನಾದ ವ್ಯಾಪಾರಿ ಎಂದು ಗುರುತಿಸಿಕೊಂಡಿರುವ ಆರೋಪಿಯನ್ನು ಅಭಿಜಿತ್ ಎಂದು ಹೇಳಲಾಗಿದ್ದು, ಆತ ಜಿತೇಂದ್ರ ಕುಮಾರ್‌ನನ್ನು ತನ್ನ ಬ್ಯುಸಿನೆಸ್ ಪಾರ್ಟ್‌ನರ್ ಎಂದು ಹೇಳಿದ್ದಾನೆ. ಕೊಲೆಯಾದ ಮಹಿಳೆ ಆತನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿದ್ದಾನೆ.
ಜಿತೇಂದ್ರ ಅವರಿಂದ 12 ಲಕ್ಷ ಸಾಲ ಪಡೆದು ಜಬಲ್‌ಪುರಕ್ಕೆ ಮಹಿಳೆ ಪರಾರಿಯಾಗಿದ್ದಾಳೆ, ಜಿತೇಂದ್ರ ಕುಮಾರ್ ಸೂಚನೆಯಂತೆ ಹತ್ಯೆ ಮಾಡಿದ್ದೇನೆ ಎಂದೂ ಆತ ಹೇಳಿದ್ದಾನೆ.
ಜಿತೇಂದ್ರ ಅವರ ಸಹಾಯಕ ಸುಮಿತ್ ಪಟೇಲ್ ಎಂಬಾತನ ಹೆಸರನ್ನೂ ಹೇಳಿದ್ದಾನೆ.ಜಿತೇಂದ್ರ ಮತ್ತು ಸುಮಿತ್ ಇಬ್ಬರನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಯ ವಿವರಗಳನ್ನು ಹಂಚಿಕೊಂಡ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವೇಶ್ ಬಘೇಲ್, ಆರೋಪಿ ನವೆಂಬರ್ 6 ರಂದು ಮೇಖ್ಲಾ ರೆಸಾರ್ಟ್‌ನಲ್ಲಿ ಕೊಠಡಿಯನ್ನು ಕಾಯ್ದಿರಿಸಿದ್ದ.
ಆ ರಾತ್ರಿ ಅವನು ತನ್ನ ಕೋಣೆಯಲ್ಲಿ ಒಬ್ಬನೇ ಇದ್ದನು. ಮರುದಿನ ಮಹಿಳೆ ಮಧ್ಯಾಹ್ನ ಅವನನ್ನು ರೆಸಾರ್ಟ್‌ಗೆ ಭೇಟಿಯಾಗಲು ಬಂದಳು ಮತ್ತು ಊಟಕ್ಕೆ ಆರ್ಡರ್ ಮಾಡಿದ್ದರು.
ಒಂದು ಗಂಟೆಯ ನಂತರ ಆರೋಪಿ ಒಬ್ಬನೇ ಹೋಟೆಲ್ ಕೋಣೆಯಿಂದ ಬೀಗ ಹಾಕಿ ಹೊರ ಹೋಗಿದ್ದಾನೆ. ಆರೋಪಿ ಪಾಟ್ನಾದವನು ಅಲ್ಲ, ಗುಜರಾತ್ ಮೂಲದವನು ಎಂದು ತಿಳಿಸಿದ್ದಾರೆ.