ಮೋರಿಗೆ ಬಿದ್ದ ಸ್ಕೂಟರ್ ಮಹಿಳೆ ಸಾವು

ಬೆಂಗಳೂರು,ಸೆ.೧೨-ನಗರದ ಪೂರ್ವ ವಿಭಾಗದ ಬಾಣಸವಾಡಿ ಹಾಗೂ ವೈಟ್ ಫೀಲ್ಡ್ ನಲ್ಲಿ ನಿನ್ನೆ ಮಧ್ಯರಾತ್ರಿ ಸಂಭವಿಸಿದ ಸ್ಕೂಟರ್ ಅಪಘಾತದಲ್ಲಿ ಕಂಪನಿಯೊಂದರ ಸಹಾಯಕ ನಿರ್ದೇಶಕ ಸೇರಿ ಇಬ್ಬರು ಮೃತಪಟ್ಟು ಇನ್ನಿತರು ಗಾಯಗೊಂಡಿದ್ದಾರೆ.
ವೈಟ್ ಫೀಲ್ಡ್ ಯ ತೂಬರಿಹಳ್ಳಿಯ ರಂಜನ್ ರಾಯ್(೫೦)ಹಾಗೂ ಬಾಣಸವಾಡಿಯ ಸವರಳುತಾರಾ ಬಡಾಯಿಕ್(೨೩)
ಮೃತಪಟ್ಟವರು ಎಂದು ಡಿಸಿಪಿ ಕಲಾ ಕೃಷ್ಣಸ್ವಾಮಿ ಅವರು ತಿಳಿಸಿದ್ದಾರೆ.
ಗಾಯಗೊಂಡಿರುವ ದಿಲೀಪ್ ಹಾಗೂ ಕೃತಿಕಾ ಸಿಂಗ್(೨೩)ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ವರ್ತೂರು ಮುಖ್ಯರಸ್ತೆಯಲ್ಲಿ ಕುಂದಲಹಳ್ಳಿ ಅಂಡರ್‌ಪಾಸ್‌ನಿಂದ ತೂಬರಹಳ್ಳಿ ಕಡೆಗೆ ಬರುತ್ತಿದ್ದಾಗ ವರ್ತೂರು ಮುಖ್ಯರಸ್ತೆಯಲ್ಲಿ ರಾತ್ರಿ ೧೨.೩೦ರ ವೇಳೆ ನಿಯಂತ್ರಣ ತಪ್ಪಿ ಸ್ಕೂಟರ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ವಿದ್ಯುತ್ ಕಂಬಕ್ಕೆ ಅಪ್ಪಳಿಸಿ ರಂಜನ್ ರಾಯ್ ಮೃತಪಟ್ಟಿದ್ದಾರೆ.ವೈಟ್ ಫೀಲ್ಡ್ ನ ಎಂಎಫ್ ಸಿ ಕಂಪನಿಯಲ್ಲಿ ಸಹಾಯಕ ನಿರ್ದೇಶಕರಾಗಿದ್ದ ರಾಜಸ್ಥಾನ ಮೂಲದ ರಂಜನ್ ರಾಯ್ ಅವರನ್ನು ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಗಾಯಗೊಂಡಿರುವ ಕೃತಿಕಾ ಸಿಂಗ್ ಸ್ಕೂಟರ್ ನಲ್ಲಿ ಹಿಂದೆ ಕೂರಿಸಿಕೊಂಡು ಕರೆದೊಯ್ಯುವಾಗ ಈ ದುರ್ಘಟನೆ ಸಂಭವಿಸಿದೆ.
ಗಾಯಗೊಂಡ ಕೃತಿಕಾ ಸಿಂಗ್ ರನ್ನು ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ವೈಟ್ ಫೀಲ್ಡ್ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಮೋರಿಗೆ ಬಿದ್ದು ಸಾವು: ಬಾಣಸವಾಡಿಯಅಶ್ವತನಗರದ ಹೆಚ್ ಬಿ ಆರ್ ಲೇಔಟ್ ಮುಖ್ಯ ರಸ್ತೆಯಲ್ಲಿ ರಾತ್ರಿ ೧೨.೩೦ರ ವೇಳೆ ಸಾರಾಯಿ ಪಾಳ್ಯ ಕಡೆಯಿಂದ ಹೆಣ್ಣೂರ್ ಕಡೆಗೆ ಹೋಂಡಾ ಡಿಯೋ ಸ್ಕೂಟರ್ ನಲ್ಲಿ ಹಿಂದೆ ಸವರಳುತಾರಾ ಬಡಾಯಿಕ್ ಕೂರಿಸಿಕೊಂಡು ದಿಲೀಪ್ ಹೋಗುತ್ತಿರುವಗ್ಗೆ ಖಾಸ ಗ್ರಾಂಡ್ ಬರೆಲಾ ಅಪಾರ್ಟ್ ಮೆಂಟ್ ಹತ್ತಿರ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿದ್ದ ಮೋರಿ ಗೆ ಬಿದ್ದ ಪರಿಣಾಮ ಸವರಳ ತೊಡೆಯ ಬಳಿ ತೀವ್ರ ವಾದ ರಕ್ತ ಗಾಯ ವಾಗಿ ರಿಗಲ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯದಲ್ಲಿ ಪಟ್ಟಿದ್ದಾರೆ.
ದಿಲೀಪ್ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಈ ಸಂಬಂಧಿಸಿದಂತೆ ಬಾಣಸವಾಡಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.