
ಸಿಎಂ ಬಸವರಾಜ ಬೊಮ್ಮಾಯಿ ಅವರೇ ಮೋದಿ ಮುಂದೆ ನೀವು ನಾಯಿಮರಿ ತರ ಇರುತ್ತೀರಿ. ಧಮ್ ಇದ್ದರೇ ತಾಕತ್ ಇದ್ದರೇ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಹಣ ತೆಗೆದುಕೊಂಡು ಬನ್ನಿ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಸವಾಲು ಹಾಕಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಬಿಜೆಪಿ ಅಧಿಕಾರಕ್ಕೆ ಬಂದು 3ವರೆ ವರ್ಷ ಆಗಿದೆ. ಒಂದಾದರೂ ಭರವಸೆ ಈಡೇರಿಸಿದೆಯಾ. ಬಿಜೆಪಿಯವರು ಧಮ್ ಬಗ್ಗೆ ಪ್ರಶ್ನೆ ಮಾಡುತ್ತಾರೆ.
ಅಪರಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದರು. ತಾಕತ್ತಿದ್ದರೇ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿ. ಧಮ್ಮಿದ್ರೆ ಕೇಂದ್ರದಿಂದ ಹಣ ತೆಗೆದುಕೊಂಡು ಬನ್ನಿ. ಕೇಂದ್ರ ಸಚಿವರ ಮುಂದೆ ನಿಮ್ಮ ತಾಕತ್ತು ತೋರಿಸಿ ಎಂದು ಗುಡುಗಿದರು.
ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ಅಧಿಕಾರಕ್ಕೆ ಬಂದರೇ ಎಲ್ಲಾ ಕೆರೆಗಳನ್ನ ತುಂಬಿಸುತ್ತೇವೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ನುಡಿದರು.