ಬೆಂಗಳೂರು

ಮೋದಿ ಬೆಂಗಳೂರಿನಲ್ಲಿ ಇದ್ದ ನಾಲ್ಕೂವರೆ ತಾಸಿಗೆ ಖರ್ಚಾಗಿದ್ದು ಎಷ್ಟು ಗೊತ್ತೇ..?

pm modi Bangalore bbmp 24 crore

ಪ್ರಧಾನಮಂತ್ರಿ ನರೇಂದ್ರ ಮೋದಿ ನಗರದಲ್ಲಿ ಇದ್ದಿದ್ದು, ಕೇವಲ ನಾಲ್ಕೂವರೆ ತಾಸು. ಇಷ್ಟಕ್ಕೆ ಬಿಬಿಎಂಪಿ ಖರ್ಚು ಮಾಡಿದ ಹಣವೆಷ್ಟು ಗೊತ್ತಾ…ಬರೊಬ್ಬರಿ 24 ಕೋಟಿ ರೂಪಾಯಿ..! ಯಾಕಪ್ಪ ಅಷ್ಟೊಂದು ಹಣ ಖರ್ಚು ಮಾಡಿರಬಹುದು ಅನ್ಕೋತ್ತಿರಾ. ಮೋದಿ ಆಗಮನದ ಹಿನ್ನೆಲೆಯಲ್ಲಿ ರಸ್ತೆ ಅಭಿವೃದ್ಧಿಗಾಗಿ ಬಿಬಿಎಂಪಿ ಬರೋಬ್ಬರಿ 14 ಕೋಟಿ ರೂ.ಗಳನ್ನು ಖರ್ಚು ಮಾಡಿದೆ.

ನಿನ್ನೆ ನಗರಕ್ಕೆ ಆಗಮಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಲ್ಲಿ ಇದ್ದದ್ದು, ಕೇವಲ ನಾಲ್ಕೂವರೆ ತಾಸು ಮಾತ್ರ. ನಾಲ್ಕೂವರೆ ತಾಸಿಗೆ ಬಿಬಿಎಂಪಿ 14 ಕೋಟಿ ರೂ.ಗಳನ್ನು ವ್ಯಯಿಸಿದೆ ಎಂದರೆ, ಪ್ರತಿ ಗಂಟೆ ಹಾಗೂ ನಿಮಿಷಕ್ಕೆ ಎಷ್ಟು ಹಣವಾಗಬಹುದು ಎಂದು ನೀವೇ ಲೆಕ್ಕ ಹಾಕಿ.

ಮೋದಿ ಅವರು ನಗರದಲ್ಲಿ ಇದ್ದ ಪ್ರತಿ ನಿಮಿಷಕ್ಕೆ 5.518 ಲಕ್ಷ ಹಾಗೂ ಪ್ರತಿ ಗಂಟೆಗೆ 3 ಕೋಟಿ 11 ಲಕ್ಷದ 11 ಸಾವಿರ ರೂ.ಗಳನ್ನು ಬಿಬಿಎಂಪಿ ಖರ್ಚು ಮಾಡಿದೆ. 14 ಕೋಟಿ ರೂ.ಗಳನ್ನು ಬಿಬಿಎಂಪಿಯಲ್ಲಿರುವ ಮುಖ್ಯ ಆಯುಕ್ತರ ನಿಧಿ, ಆಡಳಿತಗಾರರ ನಿಧಿ ಹಾಗೂ ಇನ್ನಿತರ ನಿಧಿಗಳಿಂದ ಖರ್ಚು ಮಾಡಲಾಗಿದೆ.

14 ಕೋಟಿ ರೂ. ಖರ್ಚು ಮಾಡಿರುವುದು ಕೇವಲ ಡಾಂಬರು ಹಾಕುವುದಕ್ಕೆ ಮಾತ್ರ ಉಳಿದಂತೆ ಬೀದಿ ದೀಪ, ಮೀಡಿಯನ್ ನಿರ್ವಹಣೆ, ಚರಂಡಿ ದುರಸ್ತಿ, ಬಣ್ಣ ಬಳಿಯಲು 10 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಮೋದಿ ಅವರು ಬಿಬಿಎಂಪಿ ವ್ಯಾಪ್ತಿಯಲ್ಲಿನ ಕಾರ್ಯಕ್ರಮಗಳಲ್ಲಿ ಭಾಗಿಯಾದ ಹಿನ್ನಲೆಯಲ್ಲಿ ಎಲ್ಲಾ ಖರ್ಚು ವೆಚ್ಚಗಳನ್ನು ಪಾಲಿಕೆ ವತಿಯಿಂದಲೇ ಭರಿಸಲಾಗಿದೆ.

ಕೊಮ್ಮಘಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಹೆಬ್ಬಾಳ ಮೇಲ್ಸೇತುವೆ, ಬೆಂಗಳೂರು ವಿವಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಡಾಂಬರು ಹಾಕಲು 14 ಕೋಟಿ ರೂ. ಸೇರಿದಂತೆ ಬಿಬಿಎಂಪಿಯಿಂದ ಒಟ್ಟಾರೆ, 24 ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ ಎಂದು ವಿಶೇಷ ಆಯುಕ್ತ ರವೀಂದ್ರ ತಿಳಿಸಿದ್ದಾರೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button