ಮೊಬೈಲ್ ಕ್ಯಾಂಟೀನ್ ಲೋಕಾರ್ಪಣೆ

ಬಸವನಗುಡಿ ಪ್ರದೇಶದ ಬಡವರ ಹಸಿವು ನೀಗಿಸುವ ರಾಧಕೃಷ್ಣ ಫುಡ್ ಮೂರು ಮೊಬೈಲ್ ಕ್ಯಾಂಟೀನ್ ಲೋಕಾರ್ಪಣೆ ಸಮಾರಂಭ ಶಾಸಕರಾದ ರವಿಸುಬ್ರಮಣ್ಯ ಉದ್ಘಾಟಿಸಿ ದರು.
ಮಾಜಿ ಉಪಮಹಾಪೌರರಾದ ಲಕ್ಷ್ಮೀನಾರಾಯಣ್ ಮತ್ತು ರಾಧಾಕೃಷ್ಣ ಫುಡ್ ಕ್ಯಾಂಟೀನ್ ಮಾಲೀಕರಾದ ಗಿರೀಶ್, ಲೋಕೇಶ್ ರವರು ಮೊಬೈಲ್ ಕ್ಯಾಂಟೀನ್ ರಾಧಕೃಷ್ಣ ಫುಡ್ ಮೊಬೈಲ್ ಕ್ಯಾಂಟೀನ್ ಉದ್ಘಾಟನೆಗೆ ಕೈ ಜೋಡಿಸಿದರು. ಬಡವರ ಹಸಿವು ನೀಗಿಸುವ ಮತ್ತು ಸ್ವಾರ್ದಿಷ್ಟ, ಉತ್ತಮ ಗುಣಮಟ್ಟದ ಆಹಾರವನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಬಡವರಿಗೆ ಊಣ ಬಡಿಸಲು ಉದ್ದೇಶದಿಂದ ಇಂದಿನಿಂದ ಈ ಆರಂಭಿಸಿರುವುದಾಗಿ ಅವರು ತಿಳಿಸಿದರು.
ನಗರ ಪ್ರದೇಶದಲ್ಲಿ ಯಾವುದೇ ಹೋಟೆಲ್‌ಗೆ ಹೋದರೆ ತಿಂಡಿ ತಿನ್ನಲು ಅಂದಾಜು ೭೦ರಿಂದ ೧೦೦ರೂಪಾಯಿ ಬೇಕು ಅದರೆ ರಾಧಕೃಷ್ಣ ಪುಡ್ ಮೊಬೈಲ್ ಕ್ಯಾಂಟೀನ್ ೧೦ರೂಪಾಯಿಗೆ ಹೊಟ್ಟೆ ತುಂಬುವಷ್ಟು ತಿಂಡಿ ನೀಡಲಾಗುತ್ತದೆ. ಇಂದಿನಿಂದ ಮೂರು ಮೊಬೈಲ್ ಕ್ಯಾಂಟೀನ್‌ಗಳನ್ನು ಬಡವರು ಇರುವ ಕಡೆಗಳಲ್ಲಿ ನಮ್ಮ ಮೊಬೈಲ್ ಕ್ಯಾಂಟೀನ್ ನಿಲ್ಲುತ್ತದೆ.
ಮುಂಬರುವ ದಿನಗಳಲ್ಲಿ ೧೫ಕ್ಕೂ ಹೆಚ್ಚು ಮೊಬೈಲ್ ಪುಟ್ ಕ್ಯಾಂಟೀನ್ ತೆರೆಯಲಿದ್ದಾರೆ .ಇಡ್ಲಿ, ಚಿತ್ರಾನ್ನ, ಪಲಾವ್,ಮೊಸರನ್ನ, ತರಕಾರಿ ಬಾತ್, ಉಪ್ಪಿಟ್ಟು ಕೇಸರಿಬಾತು ಕಾರ ಬಾತು ನಮ್ಮಲ್ಲಿ ವಿಶೇಷ.
ಬಡವರ ಹೊಟ್ಟೆ ಹಸಿವು ನೀಗಿಸಬೇಕು ಎಂಬ ಉದ್ದೇಶದಿಂದ ಆರಂಭಿಸಲಾಗಿದೆ.ನಗರ ಪ್ರದೇಶದಲ್ಲಿ ಬೇಡಿಕೆ ಹೆಚ್ಚಿದಂತೆ ಮತ್ತು ಬಡವರು ವಾಸಿಸುವ ಪ್ರದೇಶಗಳಲ್ಲಿ ಮೊಬೈಲ್ ಕ್ಯಾಂಟೀನ್ ಪ್ರಾರಂಭಿಸಲಾಗುವುದು.
ರಾಧಕೃಷ್ಣ ಫುಡ್ ಕ್ಯಾಂಟೀನ್ ವತಿಯಿಂದ ೫ಕ್ಕೂ ಹೆಚ್ಚು ಅನಾಥ ಮಕ್ಕಳ ಶಾಲೆಯ ನೂರಾರು ವಿದ್ಯಾರ್ಥಿಗಳಿಗೆ ಹಾಗೂ ವೃದ್ದಶ್ರಾಮಕ್ಕೆ ಉಚಿತವಾಗಿ ಪ್ರತಿದಿನ ತಿಂಡಿ ವಿತರಿಸಲಾಗುತ್ತಿದೆ.