ಮೊದಲ ಹಂತದ ಜೆಡಿಎಸ್ ಪಂಚರತ್ನ ರಥಯಾತ್ರೆಗೆ ತೆರೆ

ಮುಂಬರುವ ವಿಧಾನಸಭೆ ಚುನಾವಣೆಗೆ ಇಟ್ಟುಕೊಂಡಿ ರುವ ಗುರಿ ತಲುಪುವುದರಲ್ಲಿ ಸಂಶಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪಷ್ಟ ಬಹುಮತ ಗಳಿಸುವ ಗುರಿಯಿಟ್ಟು ಹೋಗುತ್ತಿದ್ದು, ಅದನ್ನು ತಲುಪುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಿದರು.ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿಂದು ಮೊದಲನೆಯ ಹಂತದ ಪಂಚರತ್ನ ಯಾತ್ರೆ ಮುಕ್ತಾಯವಾಗಲಿದೆ.
ಬೇರೆ ಬೇರೆ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ನಾಲ್ಕು ದಿನ ಪಂಚರತ್ನ ಯಾತ್ರೆಗೆ ಬಿಡುವು ನೀದಲಾಗುವುದು. ಡಿ.11 ರಿಂದ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಮತ್ತೆ ಪಂಚರತ್ನ ರಥಯಾತ್ರೆ ಆರಂಭವಾಗಲಿದೆ ಎಂದರು.ಉತ್ತರ ಕರ್ನಾಟಕದಲ್ಲಿ ಪಂಚರತ್ನ ರಥಯಾತ್ರೆಯನ್ನು ಜನವರಿ 3 ರಂದು ಪ್ರಾರಂಭ ಮಾಡಲಾಗುವುದು.
ಅಲ್ಲಿಯೂ ಇದೇ ರೀತಿ ಜೆಡಿಎಸ್ಪರ ಅಲೆ ಇದ್ದರೆ, ಟೀಕೆಗಳಿಗೆ ಉತ್ತರ ಸಿಗುತ್ತದೆ. ಬಹುಶಃ ನಮ್ಮನ್ನು 20, 30 ಸ್ಥಾನಕ್ಕೆ ಲೆಕ್ಕ ಇಟ್ಟುಕೊಂಡಿದ್ದಾರೆ. ನಾವು ಈ ವಿಚಾರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಹೋಗುವ ಅವಶ್ಯಕತೆ ಇಲ್ಲ ಎಂದು ಹೇಳಿದರು.ಕಳೆದ ಉಪ ಚುನಾವಣೆಯಲ್ಲಿ ಜೆಡಿಎಸ್ಗೆ ಹಿನ್ನಡೆಯಾಗಿದ್ದ ಶಿರಾ ಕ್ಷೇತ್ರದಲ್ಲಿ ಜನರು ಪಂಚರತ್ನ ರಥಯಾತ್ರೆಗೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ.
ಕಳೆದ ಬಾರಿ ಬಿಜೆಪಿಗೆ ಮತ ಕೊಟ್ಟು ಮನೆ ಹಾಳಾಗಿದೆ ಎಂಬುದು ಬಹುತೇಕ ಗ್ರಾಮಗಳಲ್ಲಿ ಹೆಣ್ಣು ಮಕ್ಕಳು ನೀಡಿದ ಪ್ರತಿಕ್ರಿಯೆಯಾಗಿದ್ದು, ಈ ಬಾರಿ ಜೆಡಿಎಸ್ಗೆ ಬೆಂಬಲ ನೀಡಲು ಮಾನಸಿಕ ಸಿದ್ಧವಿರುವುದಾಗಿ ಹೇಳಿದ್ದಾರೆ ಎಂದರು.ವಿಶೇಷವೆಂದರೆ ಸಣ್ಣ ಮಕ್ಕಳು ಸಹ ನಾವು ಕುಮಾರಣ್ಣನನ್ನು ನೋಡಬೇಕು ಅಂತ ಕಾಯುತ್ತಿರುವುದನ್ನು ನೋಡಿ ನನ್ನ ಮನ ಕಲಕಿತ್ತು.
ಯಾತ್ರೆಗೆ ಜನತೆ ಸ್ವಯಂ ಪ್ರೇರಿತವಾಗಿ ಬರುತ್ತಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಇಬ್ರಾಹಿಂ ಹೇಳಿದಂತೆ ಬದಲಾವಣೆ ಕಾಣುತ್ತಿದೆ.ಐದು ತಿಂಗಳ ಮುನ್ನವೇ ಕಾರ್ಯಕರ್ತರು ಚುನಾವಣೆಗೆ ಸಿದ್ಧವಾಗಿದ್ದಾರೆ ಎಂದು ಹೇಳಿದರು. ಶಿರಾ ಕ್ಷೇತ್ರಕ್ಕೆ ಬಹಳ ಜನ ಸಾರಥಿಗಳಿದ್ದು ಅವರನ್ನು ಒಗ್ಗೂಡಿಸಿ ಒಬ್ಬ ಸಾರಥಿ ಕೂರಿಸಬೇಕು.
ಎಲ್ಲ ಕಡೆ ಆಶೀರ್ವಾದ ಮಾಡಲು ಜನರು ಬರುತ್ತಿದ್ದಾರೆ ಎಂದರು.ಗುಬ್ಬಿ ಕ್ಷೇತ್ರದ ಶಾಸಕ ಶ್ರೀನಿವಾಸ್ ಆಹ್ವಾನದ ವಿಚಾರಕ್ಕೆ ಪ್ರತಿಕ್ರಿಯಿಸಿ ನಾನು ಯಾರ ಪಂಥಾಹ್ವಾನ ಸ್ವೀಕರಿಸುವುದು ಅನವಶ್ಯಕ. ನನಗೆ ಪಂಚರತ್ನ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕು.
ನಾಡಿನ ಜನತೆಯ ಸಮಸ್ಯೆ ಬಗೆಹರಿಸಬೇಕ್ಕೆನ್ನುವುದು ನನ್ನ ಗುರಿ. ಅದಕ್ಕೆ ಸ್ವಷ್ಪ ಬಹುಮತ ಪಡೆಯಬೇಕು ಎಂಬ ಗುರಿ ಇದೆ. ನನಗೆ ಯಾರ ಆಹ್ವಾನ ಕಟ್ಟಿಕೊಂಡು ಏನು ಮಾಡಬೇಕು ಇದೇನು ಶಾಶ್ವತವಾ? ಇದೇನು ಕುರುಕ್ಷೇತ್ರವಾ ಎಂದು ಪ್ರಶ್ನಿಸಿದರು.