ಮೈಸೂರು ಬೆಂಗಳೂರು ನಡುವಿನ ರೈಲ್ವೇ ಸಂಚಾರ ರದ್ದು ಮಾಡಲಾಗಿದೆ.

ಬೆಂಗಳೂರು : ರಾಜ್ಯಾದ್ಯಂತ ವರುಣನ ಆರ್ಭಟ ಮುಂದುವರೆದಿದ್ದು, ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ಮಳೆಯ ಅವಾಂತರ ಹಿನ್ನಲೆ ಮೈಸೂರು ಬೆಂಗಳೂರು ನಡುವಿನ ರೈಲ್ವೇ ಸಂಚಾರ ರದ್ದು ಮಾಡಲಾಗಿದೆ.
ನೃಋತ್ಯ ರೈಲ್ವೆ ಮೈಸೂರು ವಿಭಾಗ ಈ ಕುರಿತು ಮಾಹಿತಿ ನೀಡಿದ್ದು, ಸೇತುವೆ ಸಂಖ್ಯೆ 627 ಮದ್ದುರು ಹನ್ನಕೆರೆ ನಡುವೆ ಪ್ರವಾಹದ ಹಿನ್ನಲೆ ಮೈಸೂರಿನಿಂದ ಬೆಂಗಳೂರು ಮುಖ್ಯ ನಿಲ್ದಾಣಕ್ಕೆ ಬರುವ 8 ರೈಲುಗಳನ್ನು ರದ್ದು ಮಾಡಲಾಗಿದೆ. ರೈಲ್ವೇ ಸಂಖ್ಯೆ ಎಸ್ ಎಂ ವಿ ಬೈಯಪನಹಳ್ಳಿ ನಿಂದ ಮೈಸೂರು ಎಕ್ಸ್ ಪ್ರಸ್ ರೈಲ್ವೆ, ಮೆಮು ರೈಲ್ವೇ ಸಂಖ್ಯೆ 06525 ಬೆಂಗಳೂರು ದಿಂದ ಮೈಸೂರು, ಮೆಮು ರೈಲ್ವೇ ಸಂಖ್ಯೆ 06526 ಮೈಸೂರು ದಿಂದ ಬೆಂಗಳೂರು, ಮೆಮು ರೈಲ್ವೇ ಸಂಖ್ಯೆ 06255 ಬೆಂಗಳೂರು ದಿಂದ ಮೈಸೂರು, ರೈಲ್ವೇ ಸಂಖ್ಯೆ 07328 ಚಾಮರಾಜನಗರ ದಿಂದ ಮೈಸೂರು, ರೈಲ್ವೇ ಸಂಖ್ಯೆ ಮೈಸೂರಿನಿಂದ ಎಸ್ ಎಂ ವಿ ಬೈಯಪನಹಳ್ಳಿ ಎಕ್ಸ್ ಪ್ರಸ್ ರೈಲ್ವೆ, ರೈಲ್ವೇ ಸಂಖ್ಯೆ 06560 ಮೈಸೂರು ನಿಂದ ಬೆಂಗಳೂರು, ಮೆಮು ರೈಲ್ವೇ ಸಂಖ್ಯೆ 06255 ಬೆಂಗಳೂರು ನಿಂದ ಮೈಸೂರು ಸಂಪೂರ್ಣ ರದ್ದು ಮಾಡಲಾಗಿದೆ.
ರೈಲ್ವೇ ಸಂಖ್ಯೆ 07346 ತುಮಕೂರು-ಚಾಮರಾಜನಗರ ಪ್ಯಾಸೇಂಜರ್ ರದ್ದು ಮಾಡಲಾಗಿದೆ. ರೈಲ್ವೇ ಸಂಖ್ಯೆ 07346 ರಾಮನಗರ-ಚಾಮರಾಜನಗರ ಪ್ಯಾಸೇಂಜರ್ ರೈಲು ರದ್ದಾಗಿದೆ ಎಂದು ನೃಋತ್ಯ ರೈಲ್ವೆ ಮೈಸೂರು ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.