ರಾಜ್ಯ

ಮೈಸೂರು ನಗರದ 20 ವರ್ಷದ ಕಸ ವಿಲೇವಾರಿ ಸಮಸ್ಯೆಗೆ ಸಿಗಲಿದೆ ಮುಕ್ತಿ!

ಕಳೆದ 20 ವರ್ಷಗಳಿಂದ ಕಾಡುತ್ತಿರುವ ಕಸ ವಿಲೇವಾರಿ ಸಮಸ್ಯೆ ಮುಂದಿನ ನಾಲ್ಕು ತಿಂಗಳಲ್ಲಿ ದೂರವಾಗಲಿದೆ ಎಂದು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಲಕ್ಷ್ಮೇಕಾಂತ ರೆಡ್ಡಿ ತಿಳಿಸಿದ್ದಾರೆ. ನಿತ್ಯವೂ 450 ರಿಂದ 500 ಟನ್‌ ಕಸ ಉತ್ಪತ್ತಿಯಾಗುತ್ತದೆ.

ಆದರೆ, ವಿದ್ಯಾರಣ್ಯಪುರಂನ ಸೂಯೆಜ್‌ ಫಾರಂನಲ್ಲಿರುವ ಘನ ತ್ಯಾಜ್ಯವಿಲೇವಾರಿ ಘಟಕದಲ್ಲಿಕೇವಲ 200 ಟನ್‌ ಕಸವನ್ನು ವಿಲೇವಾರಿ ಮಾಡುವ ವ್ಯವಸ್ಥೆ ಇದೆ. ಹೀಗಾಗಿ ಪ್ರತಿದಿನ 300 ಟನ್‌ ಕಸ ಉಳಿಯುತ್ತಿದೆ. 2001ರಿಂದ ಸುಮಾರು 6 ಲಕ್ಷ ಟನ್‌ ಕಸ ವಿಲೇವಾರಿಯಾಗದೇ ಉಳಿದಿದೆ.

ಈ ಸಮಸ್ಯೆ ಸದ್ಯದಲ್ಲೇ ನಿವಾರಣೆಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ.ಕೆಸರೆಯಲ್ಲಿ 22 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ 200 ಟನ್‌ ಸಾಮರ್ಥ್ಯದ ಘನ ತ್ಯಾಜ್ಯ ವಿಲೇವಾರಿ ಹಾಗೂ ಪುನರ್‌ ಬಳಕೆ ಘಟಕ ಡಿ.15ರಿಂದ ಕಾರ್ಯಾರಂಭಿಸಲಿದೆ. ಇದಲ್ಲದೇ 9.2ಕೋಟಿ ರೂ.

ವೆಚ್ಚದಲ್ಲಿ ರಾಯನಕೆರೆ ಬಳಿ ನಿರ್ಮಿಸಿರುವ 150 ಟನ್‌ ಕಸ ವಿಲೇವಾರಿ ಘಟಕ ಮಾರ್ಚ್ನಲ್ಲಿಕಾರ್ಯಾರಂಭಿಸಲಿದೆ. ವಿದ್ಯಾರಣ್ಯ ಪುರಂನಲ್ಲಿ ಸದ್ಯ ಈಗಾಗಲೇ 150 ಟನ್‌ ಕಸ ವಿಲೇವಾರಿಯಾಗುತ್ತಿದೆ. ಈ ಘಟಕವನ್ನು ಮೇಲ್ದರ್ಜೆಗೇರಿಸಿ 200 ಟನ್‌ ವಿಲೇವಾರಿ ಘಟಕ ಸಿದ್ಧಪಡಿಸಲಾಗುವುದು. ಹೀಗಾಗಿ ಒಟ್ಟಾರೆ ನಗರದಲ್ಲಿ ನಿತ್ಯವೂ ಉತ್ಪತ್ತಿಯಾಗುವ 5 ಟನ್‌ ಕಸ ಸಂಪೂರ್ಣ ವಿಲೇವಾರಿಯಾಗಲಿದೆ.

ಈ ಮೂಲಕ ನಗರವನ್ನು ಕಾಡುತ್ತಿದ್ದ ಬಹುದೊಡ್ಡ ಸಮಸ್ಯೆಗೆ ಶೀಘ್ರವೇ ಪರಿಹಾರ ದೊರೆಯಲಿದೆ”ಎಂದರು.ಸೂಯೆಜ್‌ ಫಾರಂನಲ್ಲಿ ವಿಲೇವಾರಿಯಾಗದೇ ರಾಶಿ ಹಾಕಲಾಗಿರುವ ಸುಮಾರು 6 ಲಕ್ಷ ಟನ್‌ ಕಸವನ್ನು (ಲೆಗಸಿ ವೇಸ್ಟ್‌)ಬಯೋ ಮೈನಿಂಗ್‌ ವಿಧಾನದಲ್ಲಿ ವಿಲೇವಾರಿ ಮಾಡಲು 14 ಕೋಟಿ ರೂ. ವೆಚ್ಚದಲ್ಲಿ ಡಿಪಿಆರ್‌ ಸಿದ್ಧಪಡಿಸಲಾಗಿದೆ. ಶೀಘ್ರವೇ ಕೆಲಸ ಆರಂಭವಾಗಲಿದೆ.

ತ್ಯಾಜ್ಯದಲ್ಲಿರುವ ಪ್ಲಾಸ್ಟಿಕ್‌, ಮಣ್ಣನ್ನು ವಿಂಗಡಿಸಿ ಪ್ಲಾಸ್ಟಿಕ್‌ ಅನ್ನು ಪುನರ್‌ ಬಳಕೆ ಮಾಡಿಕೊಳ್ಳಲಾಗುವುದು. ಈ ಮೂಲಕ ಕಸದ ರಾಶಿ ತೆರವುಗೊಳಿಸಿ 15 ಎಕರೆ ಜಾಗವನ್ನು ಮರುಬಳಕೆ ಮಾಡಿಕೊಳ್ಳಲಾಗುವುದು.ಯಾವುದೇ ದೊಡ್ಡ ನಗರಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ನಗರದಿಂದ ಹೊರ ಭಾಗದಲ್ಲಿ ವಿಲೇವಾರಿ ಮಾಡಲಾಗುತ್ತದೆ.

ಆದರೆ, ಮೈಸೂರಿನಲ್ಲಿರಾಜರ ಆಳ್ವಿಕೆ ಕಾಲದಲ್ಲಿ ನಗರ ಚಿಕ್ಕದಾಗಿದ್ದರಿಂದ ಇಲ್ಲಿನ ಕಸವನ್ನು ವಿದ್ಯಾರಣ್ಯಪುರಂನಲ್ಲಿ ವಿಲೇವಾರಿ ಮಾಡಲಾಗುತ್ತಿತ್ತು. ಆದರೆ, ಕಾಲಾನಂತರ ನಗರ ಬೆಳೆದಂತೆ ಪೂರಕ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಇದೀಗ ಆರಂಭವಾಗುತ್ತಿರುವ ಎರಡೂ ಘಟಕ ನಗರದಿಂದ ಹೊರಭಾಗದಲ್ಲಿದ್ದು, ನಗರದ ಕಸವೆಲ್ಲನಗರದಿಂದ ಹೊರಕ್ಕೆ ಹೋಗಲಿದೆ.

2030ರವರೆಗೆ ನಗರದಲ್ಲಿಉತ್ಪತ್ತಿಯಾಗುವ ಅಂದಿನ ಕಸವನ್ನು ಅಂದೇ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ದೂರದೃಷ್ಟಿಯಿಂದ ರಾಯನಕೆರೆ ಹಾಗೂ ಕೆಸರೆ ಘನತ್ಯಾಜ್ಯ ವಿಲೇವಾರಿ ಘಟಕ ಆರಂಭಿಸಲಾಗಿದೆ.

ಕಸದ ವಿಲೇವಾರಿ ಕಾರಣಕ್ಕೆ ಸ್ವಚ್ಛನಗರಿ ಪಟ್ಟ ಪಡೆದುಕೊಂಡಿರುವ ಮೈಸೂರು ಕಳೆದ ಹಲವು ವರ್ಷಗಳಿಂದ ಸ್ವಚ್ಛ ಸರ್ವೇಕ್ಷಣೆ ಅಭಿಯಾನದಲ್ಲಿ ಹಿಂದೆ ಬೀಳುವಂತಾಗಿದೆ. ಆದರೆ, ಇದೀಗ ಕಸ ವಿಲೇವಾರಿ ಸಮಸ್ಯೆ ಬಗೆಹರಿದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮತ್ತೆ ಸ್ವಚ್ಛನಗರಿ ಪಟ್ಟ ಪಡೆಯುವ ಆಶಾಕಿರಣ ಮೂಡಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button