ರಾಜ್ಯ

ಮೈಸೂರಿನಲ್ಲಿ ಹರಡುತ್ತಿದೆ ಎಚ್‌1ಎನ್‌1: ಗಾಬರಿ ಬೇಡ, ಮುನ್ನೆಚ್ಚರಿಕೆ ಅಗತ್ಯ ಎಂದ ವೈದ್ಯರು

ಮೈಸೂರು: ಮಳೆಗಾಲವಾದ್ದರಿಂದ ಕಳೆದ 15 ದಿನಗಳಿಂದ ಮೈಸೂರಿನಲ್ಲಿ ನಿರಂತರವಾಗಿ ಎಚ್‌1ಎನ್‌1(ಹಂದಿಜ್ವರ) ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಹಾಗೆಂದು ನಾಗರಿಕರು ಗಾಬರಿಗೊಳ್ಳುವ ಅಗತ್ಯವಿಲ್ಲ. ಕೇವಲ ಸಣ್ಣ ಪ್ರಮಾಣದ ತೊಂದರೆ(ಮೈಲ್ಡ್‌) ಕಾಣಿಸಿಕೊಳ್ಳುತ್ತಿದ್ದು, ಚಿಕಿತ್ಸೆಯ ನಂತರ ಎಲ್ಲರೂ ಗುಣಮುಖರಾಗುತ್ತಿದ್ದಾರೆ.

ಮುಂಜಾಗ್ರತೆ ವಹಿಸಿದರೆ ಕಾಯಿಲೆಯಿಂದ ದೂರವಿರಬಹುದು.ಎಚ್‌1ಎನ್‌1 ಕಾಣಿಸಿಕೊಂಡ ಮಂದಿ ಕಳೆದ 15 ದಿನದಿಂದ ಮೈಸೂರಿನ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಈವರೆಗೆ ಅಂದಾಜು 40 ರಿಂದ 50 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸದ್ಯ 6 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಳೆಗಾಲವಾದ್ದರಿಂದ ಹಾಗೂ ಸದ್ಯ ಶೀತ ವಾತಾವರಣವಿರುವುದರಿಂದ ಈ ರೀತಿ ಕಾಯಿಲೆಗಳು ಹರಡುತ್ತವೆ. ಇದು ಸೆಪ್ಟೆಂಬರ್‌ವರೆಗೆ ಮುಂದುವರಿಯುತ್ತದೆ ಎನ್ನುತ್ತಾರೆ ವೈದ್ಯರು.6 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ, 50 ರಿಂದ 60 ವರ್ಷದ ಮೇಲ್ಪಟ್ಟವರು, ಕೊಮಾರ್ಬಿಡಿಟಿಸ್‌ಗಳು, ಗರ್ಭಿಣಿಯರು ಸೇರಿದಂತೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಈ ಕಾಯಿಲೆ ಬೇಗ ಹರಡುತ್ತದೆ.

ಸೋಂಕು ಕಾಣಿಸಿಕೊಂಡ ಶೇ.80ರಷ್ಟು ಮಂದಿಗೆ ಅಲ್ಪ ಪ್ರಮಾಣದ ಸೋಂಕು ಇರುತ್ತದೆ. ನಾಲ್ಕೈದು ದಿನ ಜ್ವರ, ಶೀತ, ನೆಗಡಿ, ಕೆಮ್ಮು, ಮೈ ಕೈ ನೋವು, ತಲೆನೋವು ಇರುತ್ತದೆ. ಈ ಲಕ್ಷಣ ಕಂಡುಬರುವ ಮುನ್ನ ಅವರು ಯಾರೊಂದಿಗೆ ಸಂಪರ್ಕದಲ್ಲಿದ್ದರು ಆವರಿಗೂ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಹಾಗಾಗಿ ಸೋಂಕಿಗೆ ಒಳಗಾದವರು ಹಾಗೂ ಅವರ ಸಂಪರ್ಕದಲ್ಲಿರುವವವರು ಒಂದೆರಡು ದಿನ ಐಸೋಲೇಟ್‌ ಆಗಬೇಕೆಂದು ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಕ್ಲಿನಿಕಲ್‌ ಡೈರೆಕ್ಟರ್‌ ಡಾ.ಎಂ.ಎನ್‌.ರವಿ ತಿಳಿಸಿದ್ದಾರೆ.ಶೇ.80 ಮಂದಿ ಆಸ್ಪತ್ರೆಗೆ ಬರಬೇಕಿಲ್ಲ: ಕೆ.ಆರ್‌.ಆಸ್ಪತ್ರೆಗೂ ಶೀತ, ನೆಗಡಿ, ಜ್ವರ, ಮೈಕೈ ನೋವು, ತಲೆನೋವಿನ ಲಕ್ಷಣಗಳಿರುವ ಸಾಕಷ್ಟು ಮಂದಿ ಹಾಜರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಾರ್ವಜನಿಕರು ಬಿಸಿಯಾದ ಆಹಾರ ಹಾಗೂ ದ್ರವಾಹಾರ ಸೇವಿಸುವುದು ಸೂಕ್ತ. ಗಮನಾರ್ಹ ವಿಚಾರವೆಂದರೆ ಸೋಂಕು ಕಾಣಿಸಿಕೊಳ್ಳುವ ಶೇ.80 ರಷ್ಟು ಮಂದಿಗೆ ಆಸ್ಪತ್ರೆ ಚಿಕಿತ್ಸೆ ಅಗತ್ಯವಿಲ್ಲ. ಕೊಮಾರ್ಬಿಡಿಟಿಸ್‌ಗಳು ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಮಾತ್ರ ಐಸಿಯು ಚಿಕಿತ್ಸೆ ಅಗತ್ಯವಿದೆ.

ಇಂತಹ ಪ್ರಕರಣಗಳು ತೀರಾ ವಿರಳ ಎಂದು ಡಾ.ಎಂ.ಎನ್‌.ರವಿ ತಿಳಿಸಿದರು.ಕೊಮಾರ್ಬಿಡಿಟಿಸ್‌ಗಳಿಗೆ ಚುಚ್ಚುಮದ್ದು ಅಗತ್ಯಇದು ಮೊದಲು ಹಂದಿಯಂತಹ ಪ್ರಾಣಿಗಳಲ್ಲಿ, ನಂತರ ಮನುಷ್ಯನಲ್ಲಿ ಕಾಣಿಸಿಕೊಂಡಿತು.

ಈ ವೈರಾಣು ರೂಪಾಂತರವಾಗುತ್ತಿರುವುದರಿಂದ ಪ್ರತಿ ವರ್ಷ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಈ ಕಾಯಿಲೆಗೂ 6 ವರ್ಷಕ್ಕಿಂತ ಮೇಲ್ಪಟ್ಟವರು ವ್ಯಾಕ್ಸಿನ್‌ ಪಡೆದುಕೊಳ್ಳಬಹುದು. ಫ್ಲ್ಯೂ ವ್ಯಾಕ್‌ ಎಂಬ ಚುಚ್ಚುಮದ್ದು ಪಡೆದುಕೊಳ್ಳಬಹುದು. ಇ

ದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಸೋಂಕು ಮನುಷ್ಯನ ದೇಹ ಪ್ರವೇಶಿಸುವುದು ನಿಯಂತ್ರಣವಾಗುತ್ತದೆ. ಮೊದಲಿಗೆ ವೈದ್ಯರು, ನರ್ಸ್‌ಗಳು ಇತರೆ ಫ್ರಂಟ್‌ಲೈನ್‌ ವರ್ಕರ್ಸ್ಗಳು ಈ ರೀತಿಯ ಚುಚ್ಚುಮದ್ದು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಕೋವಿಡ್‌, ಎಚ್‌1ಎನ್‌1, ಫ್ಲೂ ನಂತಹ ಕಾಯಿಲೆಗಳು ಒಂದೇ ರೀತಿಯ ರೋಗ ಲಕ್ಷಣವಿರುವುದರಿಂದ ಕೂಡಲೇ ಐಸೋಲೇಟ್‌ ಆಗುವುದಲ್ಲದೇ ಸ್ವಾಬ್‌ ಟೆಸ್ಟ್‌ ಮಾಡಿಸಿಕೊಂಡು ಕರಾರುವಕ್ಕಾದ ಚಿಕಿತ್ಸೆ ಪಡೆಯಬೇಕು.

ಮೂರರಿಂದ ಐದು ದಿನಗಳವರೆಗೆ ಕಾಯಿಲೆ ನಿಯಂತ್ರಣಕ್ಕೆ ಬಾರದಿದ್ದಲ್ಲಿ ಕೂಡಲೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕು ಎಂದು ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕ್ಲಿನಿಕಲ್‌ ಡೈರೆಕ್ಟರ್‌ ಡಾ.ಎಂ.ಎನ್‌.ರವಿ ಹೇಳಿದ್ರು.ಎಚ್‌1ಎನ್‌1 ನಂತಹ ಪ್ರಕರಣಗಳಿಗೆ ಸಂಬಂಧಿಸಿದ ಮಾದರಿಯನ್ನು ಸಂಗ್ರಹಿಸಿ ಪುಣೆಯಲ್ಲಿರುವ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗುತ್ತದೆ.

ಅಲ್ಲಿ ಪರೀಕ್ಷಿಸಿ ಅದು ಎಚ್‌1ಎನ್‌1 ಪ್ರಕರಣವೇ, ಇಲ್ಲವೇ ಎಂದು ತೀರ್ಮಾನಿಸಲಾಗುತ್ತದೆ. ಇದನ್ನು ಗೋಲ್ಡ್‌ ಸ್ಟ್ಯಾಂಡರ್ಡ್ ಟೆಸ್ಟ್‌ ಎನ್ನಲಾಗುತ್ತದೆ. ಆದರೆ ಈವರೆಗೆ ಆ ರೀತಿಯ ಯಾವುದೇ ಸ್ಯಾಂಪಲ್‌ಗಳನ್ನು ನಾವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕಳುಹಿಸಿಕೊಟ್ಟಿಲ್ಲ.

ಕೆಲವೊಂದು ಖಾಸಗಿ ಆಸ್ಪತ್ರೆಗಳವರು ತಮ್ಮಲ್ಲಿಯೇ ಇರುವ ಕಿಟ್‌ಗಳಲ್ಲಿ ಪರೀಕ್ಷಿಸಿಕೊಂಡು ಅದರಲ್ಲಿ ಪಾಸಿಟಿವ್‌ ಬಂದಲ್ಲಿ ಅದಕ್ಕೆ ಚಿಕಿತ್ಸೆ ನೀಡುತ್ತಾರೆ.ಕೆಲವು ವೈರಲ್‌ ಡಿಸೀಸ್‌ಗಳು ಬೇರೆ ಬೇರೆ ರೀತಿ ಕಾಣಿಸಿಕೊಳ್ಳುತ್ತವೆ.

ಅದನ್ನು ಪಾಸಿಟಿವ್‌ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಚ್‌.ಪ್ರಸಾದ್‌ ಹೇಳಿದ್ರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button