ರಾಜ್ಯ

ಮೈಸೂರಿನಲ್ಲಿ ಇ ತ್ಯಾಜ್ಯ ಅಭಿಯಾನಕ್ಕೆ ಗುಡ್‌ ರೆಸ್ಪಾನ್ಸ್‌; ವಾರದಲ್ಲಿ 3 ಕ್ವಿಂಟಾಲ್‌ ಸಂಗ್ರಹ

ಮೈಸೂರು: ಇ-ತ್ಯಾಜ್ಯ ಮುಕ್ತ ನಗರವನ್ನಾಗಿಸಲು ಮಹಾನಗರ ಪಾಲಿಕೆ ನಡೆಸಿದ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಕೇವಲ ಒಂದು ವಾರದಲ್ಲಿ ಮೂರು ಕ್ವಿಂಟಾಲ್‌ ಇ-ತ್ಯಾಜ್ಯ ಸಂಗ್ರಹವಾಗಿದ್ದು, ಇ-ತ್ಯಾಜ್ಯ ಮುಕ್ತ ನಗರ ಎಂಬ ಕೀರ್ತಿ ಪಡೆಯಲು ಪಾಲಿಕೆ ಮೊದಲ ಹೆಜ್ಜೆ ಇಟ್ಟಿದೆ.

ನಗರದಲ್ಲಿ ಆ. 8ರಿಂದ 15ರವರೆಗೆ ನಡೆಸಿದ ಇ-ತ್ಯಾಜ್ಯ ಸಂಗ್ರಹಣಾ ಅಭಿಯಾನದಲ್ಲಿ 325 ಕೆಜಿ ಇ-ತ್ಯಾಜ್ಯ ಸಂಗ್ರಹವಾಗಿದೆ. ನಗರದ ಹೃದಯ ಭಾಗದಲ್ಲಿರುವ ವಾರ್ಡ್‌ಗಳನ್ನು ಹೊಂದಿರುವ ವಲಯ ಕಚೇರಿ 1ರಲ್ಲಿಯೇ ಒಂದು ಕ್ವಿಂಟಾಲ್‌ವರೆಗೂ ಇ-ತ್ಯಾಜ್ಯ ಸಂಗ್ರಹವಾಗಿದೆ.

ಉಳಿದಂತೆ ಬೇರೆ ವಲಯ ಕಚೇರಿಗಳಲ್ಲಿ 50 ಕೆಜಿಯಿಂದ 100 ಕೆಜಿವರೆಗೆ ಇ-ತ್ಯಾಜ್ಯ ಸಂಗ್ರಹವಾಗಿದೆ ಎನ್ನುತ್ತಾರೆ ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜು.9 ಸ್ಥಳ ನಿಗದಿಸಾರ್ವಜನಿಕರಿಂದ ಇ-ತ್ಯಾಜ್ಯ ಸಂಗ್ರಹಣೆಗೆ ನಗರದ 9 ವಲಯ ಕಚೇರಿಗಳಲ್ಲಿ ಸ್ಥಳಗಳನ್ನು ಗುರುತಿಸಲಾಗಿತ್ತು.

ಸಂಗ್ರಹಣೆ ಬಗ್ಗೆ ವ್ಯಾಪಕ ಪ್ರಚಾರ ನಡೆಸಿದ ಪರಿಣಾಮ ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ತಮ್ಮ ಮನೆಯಲ್ಲಿದ್ದ ಅನುಪಯುಕ್ತ ಎಲೆಕ್ಟ್ರಾನಿಕ್‌ ವಸ್ತುಗಳನ್ನು ನೀಡುವ ಮೂಲಕ ಸಮರ್ಪಕ ವಿಲೇವಾರಿಗೆ ನೆರವಾದರು.

ಸಾಕಷ್ಟು ವಾರ್ಡ್‌ಗಳಲ್ಲಿ ಪೌರ ಕಾರ್ಮಿಕರು ಮನೆ ಮನೆಯಿಂದಲೂ ಇ ತ್ಯಾಜ್ಯವನ್ನು ಸಂಗ್ರಹಿಸಿ, ಕಸ ಸಾಗಾಣಿಕೆ ವಾಹನದಲ್ಲಿ ವಿಲೇವಾರಿ ಮಾಡಿದ್ದರು.ಯಶಸ್ವಿ ವಿಲೇವಾರಿ9 ವಲಯ ಕಚೇರಿಗಳಲ್ಲಿ ಸಂಗ್ರಹವಾದ ಇ-ತ್ಯಾಜ್ಯವನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರಿಂದ ನೋಂದಾಯಿತಗೊಂಡಿರುವ ಮರು ಬಳಕೆ ಮಾಡುವವರಿಗೆ ನೀಡಲಾಯಿತು.

ಬ್ಯಾಟರಿಗಳು, ಸಿಡಿಗಳು, ಥರ್ಮೋಮೀಟರ್‌ಗಳು, ಚಾರ್ಜರ್‌ಗಳು, ಅಡಾಪ್ಟರ್‌, ಮೊಬೈಲ್‌ ಫೋನ್‌, ಬಲ್ಬ್ಗಳು, ಟ್ಯೂಬ್‌ ಲೈಟ್‌ಗಳು, ಸಿಎಫ್‌ಎಲ್‌ಗಳು ಹಾಗೂ ಇತರೆ ಗೃಹೋಪಯೋಗಿ ವಿದ್ಯುನ್ಮಾನ ಉಪಕರಣಗಳನ್ನು ಕಲೆಹಾಕಲಾಗಿತ್ತು.ಕಸ ಆಯುವವರ ನೆರವುಇ- ತ್ಯಾಜ್ಯ ಸಂಗ್ರಹಕ್ಕೆ ಪಾಲಿಕೆ ನಡೆಸುತ್ತಿರುವ ಅಭಿಯಾನಕ್ಕೆ ಕಸ ಆಯುವವರು ನಿರಂತರವಾಗಿ ಕೈ ಜೋಡಿಸಿದ್ದಾರೆ.

ರಸ್ತೆ ಬದಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸಿಗುವ ಪೇಪರ್‌, ಪ್ಲಾಸ್ಟಿಕ್‌, ಕಬ್ಬಿಣ, ಬಾಟಲ್‌ಗಳೊಂದಿಗೆ ಇ- ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡುತ್ತಿದ್ದಾರೆ.

ಹಸಿರು ದಳ ಸಂಸ್ಥೆ ನೇತೃತ್ವದಲ್ಲಿ 450 ಮಂದಿ ತ್ಯಾಜ್ಯ ಸಂಗ್ರಹ ಮಾಡುವವರು ನಗರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ನಗರದ ಸ್ವಚ್ಛತೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ ಎನ್ನುತ್ತಾರೆ ಸಂಸ್ಥೆಯ ಮೈಸೂರು ವಿಭಾಗದ ನಿರ್ದೇಶಕ ಅನಿಲ್‌ ಕುಮಾರ್‌.ನ

ಗರದಲ್ಲಿ ವಾರದಲ್ಲಿ ನಡೆದ ಇ ತ್ಯಾಜ್ಯ ಸಂಗ್ರಹ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಾಲಿಕೆ ಗುರುತಿಸಿದ್ದ 9 ಸ್ಥಳಗಳಲ್ಲಿ ಸಾರ್ವಜನಿಕರು, ತಮ್ಮ ಮನೆಯಲ್ಲಿರುವ ಅನುಪಯುಕ್ತ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳನ್ನು ನೀಡುವ ಮೂಲಕ ಸಮರ್ಪಕ ವಿಲೇವಾರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.

ಸಾರ್ವಜನಿಕರು ಎಲ್ಲೆಂದರೆಲ್ಲಿ ಇ ತ್ಯಾಜ್ಯವನ್ನು ಎಸೆಯಬಾರದು ಎಂಬ ಉದ್ದೇಶದಿಂದ ಈ ವಿಶೇಷ ಅಭಿಯಾನ ನಡೆಸಲಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಅಭಿಯಾನವನ್ನು ನಿರಂತರವಾಗಿ ನಡೆಸುವ ಮೂಲಕ ಮೈಸೂರನ್ನು ಇ ತ್ಯಾಜ್ಯ ಮುಕ್ತ ನಗರವನ್ನಾಗಿಸಲಾಗುವುದು.

ವಲಯವಾರು ಸಂಗ್ರಹವಲಯ 1-100 ಕೆಜಿವಲಯ 2-45 ಕೆಜಿವಲಯ 3-15 ಕೆಜಿವಲಯ 4- 35 ಕೆಜಿವಲಯ 5- 50 ಕೆಜಿವಲಯ 6-30 ಕೆಜಿವಲಯ 7-10 ಕೆಜಿವಲಯ 8- 10 ಕೆಜಿವಲಯ 9-30 ಕೆಜಿಒಟ್ಟು ಸಂಗ್ರಹ 325 ಕೆಜಿ

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button