
ಎಪಿಎಂಸಿ ಏಜೆಂಟ್ ಒಬ್ಬರನ್ನು ಬರ್ಭರವಾಗಿ ಕೊಲೆ ಮಾಡಿರುವ ಘಟನೆ ಇಲ್ಲಿನ ಬಂಡಿಪಾಳ್ಯದ ಎಪಿಎಂಸಿ ಮಾರುಕಟ್ಟೆಯಯಲ್ಲಿ ನಡೆದಿದೆ. ಎಂ.ಜೆ.ರವಿ (35) ಕೊಲೆಗೀಡಾಗಿರುವ ವ್ಯಕ್ತಿ.
ಎಪಿಎಂಸಿ ಏಜೆಂಟ್ ಆಗಿರುವ ಈತನನ್ನು ಎಪಿಎಂಸಿ ಮಳಿಗೆಯಲ್ಲಿ ಕರ್ತವ್ಯ ನಿರತರಾಗಿದ್ದಾಗಲೇ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಮೂಲತಃ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ನಿವಾಸಿಯಾದ ಎಂ.ಜೆ.ರವಿ ಉತ್ತನಹಳ್ಳಿಯಲ್ಲಿ ವಾಸವಾಗಿದ್ದರು. ಮೃತರಿಗೆ ತಂದೆ-ತಾಯಿ, ಪತ್ನಿ, ಮೂವರು ಮಕ್ಕಳು, ಸಹೋದರಿ ಇದ್ದಾರೆ.
ಎಎಸ್‍ಪಿ ಶಿವಕುಮಾರ್ ಆರ್.ದಂಡಿನ, ದಕ್ಷಿಣ ಪೊಲೀಸ್ ಠಾಣೆ ಇನ್‍ಸ್ಪೆಕ್ಟರ್, ಸಿಬ್ಬಂದಿ ಸ್ಥಳ ಮಹಜರು ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.