ಮೆಡಿಸಿನ್ ಫ್ರಮ್ ದಿ ಸೈ’ ಯಶಸ್ವೀ ಪ್ರಯೋಗ, ಕುಗ್ರಾಮಗಳಿಗೂ ತಲುಪಲಿದೆ ಔಷಧಿ ಕಿಟ್

ಡ್ರೋನ್‌ಗಳ ಮೂಲಕ ಶೀಘ್ರದಲ್ಲೇ ದೇಶಕ್ಕೆ ಔಷದಿ ಪೂರೈಕೆಯಾಗಲಿದೆ. ಡ್ರೋನ್‌ಗಳ ಮೂಲಕ ಗ್ರಾಮೀಣ ಪ್ರದೇಶಗಳಿಗೆ ಔಷಧಿಗಳನ್ನು ತಲುಪಿಸಬಹುದು ಎಂಬುದನ್ನು ವರ್ಲ್ಡ್ ಎಕನಾಮಿಕ್ ಫೋರಮ್ (WEF) ಸಾಬೀತುಪಡಿಸಿದೆ.
ತೆಲಂಗಾಣದಲ್ಲಿ 45 ದಿನಗಳ ಪ್ರಯೋಗಗಳು ಉತ್ತಮ ಫಲಿತಾಂಶ ನೀಡಿರುವುದರಿಂದ ಈ ಸೇವೆಗಳು ಸಂಪೂರ್ಣವಾಗಿ ಲಭ್ಯವಾಗುವ ಸಾಧ್ಯತೆಯಿದೆ. ಡಬ್ಲ್ಯುಇಎಫ್ ಆಶ್ರಯದಲ್ಲಿ ತೆಲಂಗಾಣ ಸರ್ಕಾರ, ಅಪೊಲೊ ಆಸ್ಪತ್ರೆ ಮತ್ತು ನೀತಿ ಆಯೋಗವು 45 ದಿನಗಳ ಕಾಲ ಪ್ರಾಯೋಗಿಕವಾಗಿ ತೆಲಂಗಾಣದ ವಿವಿಧ ಭಾಗಗಳಿಗೆ ಡ್ರೋನ್‌ಗಳ ಮೂಲಕ ‘ಮೆಡಿಸಿನ್ ಫ್ರಮ್ ದಿ ಸ್ಕೈ’ ಎಂಬ ಯೋಜನೆಯಡಿ ಕೋವಿಡ್ ವಿವಿಧ ಆರೋಗ್ಯ ಕೇಂದ್ರಗಳಿಗೆ ಡ್ರೋನ್‌ಗಳ ಮೂಲಕ ಲಸಿಕೆಗಳು, ಪರೀಕ್ಷೆಯ ಮಾದರಿಗಳು ಮತ್ತು ಇತರ ವೈದ್ಯಕೀಯ ಉಪಕರಣಗಳನ್ನು ಪೂರೈಸಿದರು.
ಈ ಯೊಜನೆಯ ಮೂಲಕ ಸುಮಾರು ಮೂರು ಲಕ್ಷ ಜನರು ಇದರ ಸೇವೆಯನ್ನು ಪಡೆದರು. ಇದು ಏಷ್ಯಾದಲ್ಲೇ ಅತಿ ದೊಡ್ಡ ಪ್ರಾಯೋಗಿಕ ಯೋಜನೆಯಾಗಿದ್ದು, ಇದಕ್ಕಾಗಿ ಸುಮಾರು 300 ಡ್ರೋನ್‌ಗಳನ್ನು ಬಳಸಲಾಗಿದೆ.
2021 ರ ಡ್ರೋನ್ ನಿಯಮಗಳಿಗೆ ಅನುಸಾರವಾಗಿ ಔಷಧಗಳನ್ನು ಪೂರೈಕೆ ಮಾಡಲಾಯಿತು. ಈ ಪ್ರಯೋಗವು ಉತ್ತಮ ಫಲಿತಾಂಶಗಳನ್ನು ನೀಡಿದ್ದು, ಶೀಘ್ರದಲ್ಲೇ ಈ ಸೇವೆಗಳು ಸಂಪೂರ್ಣವಾಗಿ ಲಭ್ಯವಾಗುವ ಸಾಧ್ಯತೆಯಿದೆ.