ರಾಜ್ಯ

ಮೃತಪಟ್ಟ ಪೊಲೀಸ್‌ ಇಲಾಖೆಯ ನಾಯಿಗೆ ಸಮಾಧಿ: ನೂರಾರು ಪ್ರಕರಣ ಬೇಧಿಸಿದ ‘ಲೇಡಿ ಸಿಂಗಂ’ಗೆ ಗೌರವ

ದಾವಣಗೆರೆ: ಸಾಮಾನ್ಯವಾಗಿ ಪ್ರೀತಿ ಪಾತ್ರರಾಗಿರುವ ವ್ಯಕ್ತಿಗಳು ಮೃತಪಟ್ಟರೆ ಅವರ ನೆನಪಿಗಾಗಿ ಸಮಾಧಿ ಕಟ್ಟುತ್ತಾರೆ. ಆದರೆ, ಮೃತಪಟ್ಟ ಶ್ವಾನಕ್ಕೆ ಪೊಲೀಸ್‌ ಇಲಾಖೆ ಸಮಾಧಿ ಕಟ್ಟುವ ಮೂಲಕ ಗೌರವ ಸಲ್ಲಿಸುವ ಕಾರ್ಯಕ್ಕೆ ಮುಂದಾಗಿದೆ.ದಾವಣಗೆರೆ ಜಿಲ್ಲಾ ಪೊಲೀಸ್‌ನಲ್ಲಿ ಲೇಡಿ ಸಿಗಂ ಎಂದೇ ಖ್ಯಾತಿ ಪಡೆದಿದ್ದ ಡಿಕ್ಟೇಟಿವ್‌ ತುಂಗಾ ಎರಡ್ಮೂರು ತಿಂಗಳ ಹಿಂದೆ ಮೃತಪಟ್ಟಿತ್ತು.

ಪ್ರೀತಿಯ ಶ್ವಾನಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಿಷ್ಯಂತ್‌ ನೇತೃತ್ವದಲ್ಲಿ ಸಮಾಧಿ ಕಟ್ಟಲಾಗುತ್ತಿದ್ದು, ಇಲಾಖೆಯಿಂದ ಸಲ್ಲಬೇಕಾದ ಎಲ್ಲಾ ಸ್ಥಾನಮಾನ ತುಂಗಾಗೆ ಸಿಗುತ್ತಿದೆ.ಸಾಮಾನ್ಯವಾಗಿ ನಾಯಿಗಳು ಹತ್ತು ವರ್ಷ ಮಾತ್ರ ಬದುಕುತ್ತವೆ. ಆದರೆ, ತುಂಗಾ 12 ವರ್ಷವಿದ್ದಾಗ ‘ಶ್ವಾನ ದಿನಾಚರಣೆ’ ದಿನವೇ ಮೃತಪಟ್ಟಿತ್ತು.

ಪೊಲೀಸ್‌ ಇಲಾಖೆ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ತುಂಗಾಗೆ ಭಾವಪೂರ್ಣ ವಿದಾಯ ಹೇಳಿದ್ದರು. ಇದಾದ ಬಳಿಕ ಎಸ್ಪಿ ರಿಷ್ಯಂತ್‌ ಮುತುರ್ವಜಿ ವಹಿಸಿ ತುಂಗಾಗೋಸ್ಕರ ಸಮಾಧಿ ಕಟ್ಟಲು ಸೂಚಿಸಿದರು. ಅದರಂತೆ ನಗರದ ಡಿಆರ್‌ ಗ್ರೌಂಡ್‌ನಲ್ಲಿ ತುಂಗಾಗೆ ಸಮಾಧಿ ಕಟ್ಟಲಾಗುತ್ತಿದೆ.

ಈಗಾಗಲೇ ಸಮಾಧಿ ಕೆಲಸ ನಡೆಯುತ್ತಿದ್ದು, ಸಮಾಧಿ 3 ಅಡಿ ಅಗಲ ಮತ್ತು 4 ಅಡಿ ಉದ್ದವಿದೆ.ತುಂಗಾ ರಾಷ್ಟ್ರಮಟ್ಟದಲ್ಲಿಹೆಸರು ಮಾಡಿದ್ದು, ಗೂಗಲ್‌ನಲ್ಲಿ ತುಂಗಾ ತನ್ನದೇ ಆದ ಸ್ಥಾನ ಪಡೆದಿದ್ದಳು. ಸಮಾಧಿ ಮುಗಿದ ನಂತರ ತುಂಗಾ ಹುಟ್ಟಿದ ದಿನ, ಮರಣ ಸೇರಿದಂತೆ ಅವಳ ಚಿತ್ರವನ್ನು ಸಮಾಧಿ ಮೇಲೆ ಹಾಕಲು ಪೊಲೀಸ್‌ ಇಲಾಖೆ ಸಿದ್ಧತೆ ನಡೆಸಿದೆ.

ಕಾಮಗಾರಿ ಚುರುಕಾಗಿ ನಡೆಯುತ್ತಿದೆ. ಒಟ್ಟಾರೆ ತುಂಗಾಳು ಇಲ್ಲದ ಮನೆಯಲ್ಲಿಈಗ ನೀರವ ಮೌನ ಇದ್ದರೂ, ಅವಳ ನೆನಪಿಗಾಗಿ ಕಟ್ಟಿಸುತ್ತಿರುವ ಸಮಾಧಿ ಬಗ್ಗೆ ಪೊಲೀಸ್‌ ಸಿಬ್ಬಂದಿಗಳಲ್ಲಿಖುಷಿ ತಂದಿದೆ.ತುಂಗಾಳನ್ನು ನೋಡಿಕೊಳ್ಳುತ್ತಿದ್ದ ಪೊಲೀಸ್‌ ಸಿಬ್ಬಂದಿ ಡಿಎಸ್ಪಿ ಪ್ರಕಾಶ್‌, ರಾಘವೇಂದ್ರ, ಟ್ರೈನರ್‌ ಶಫಿ ಇತರರಿಗೆ ಸಂತಸವಾಗಿದೆ.

ತುಂಗಾ 650 ಕ್ಕೂ ಹೆಚ್ಚು ಪ್ರಕರಣಗಳನ್ನು ಬೇಧಿಸಿದೆ. ಅದರಲ್ಲಿ71 ಕೊಲೆ ಪ್ರಕರಣಗಳು, 35 ಕಳ್ಳತನ ಹಾಗೂ ದರೋಡೆ ಪ್ರಕರಣಗಳನ್ನು ಭೇದಿಸಿದ್ದು, ಇಬ್ಬರಿಗೆ ಗಲ್ಲುಶಿಕ್ಷೆ, ನಾಲ್ವರಿಗೆ ಜೀವಾವಧಿ ಶಿಕ್ಷೆ ಕೊಡಿಸಿದ್ದು ಅದರ ಚಾಕಚಕ್ಯತೆ ಚಾಣಾಕ್ಷತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಪೊಲೀಸ್‌ ಇಲಾಖೆ ತಿಳಿಸಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button