
ರಾಜ್ಯ ಸರ್ಕಾರ ಮೂವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಜಿಪಿ ಡಾ.ಪಿ.ರವೀಂದ್ರನಾಥ್, ಹುದ್ದೆಯ ನಿರೀಕ್ಷೆಯಲ್ಲಿದ್ದ ಎಡಿಜಿಪಿ ಅರುಣ್ ಚಕ್ರವರ್ತಿ, ತರಬೇತಿ ವಿಭಾಗದ ಎಡಿಜಿಪಿ ಹರಿಶೇಖರನ್.ಪಿ ಅವರುಗಳನ್ನು ಇಂದು ವರ್ಗಾವಣೆಗೊಳಿಸಲಾಗಿದೆ.ವರ್ಗಾವಣೆಗೊಂಡ ಅಧಿಕಾರಿಗಳು :
ಡಾ.ಪಿ.ರವೀಂದ್ರನಾಥ್ -ಡಿಜಿಪಿ, ತರಬೇತಿ ವಿಭಾಗ, ಬೆಂಗಳೂರು.ಅರುಣ್ ಚಕ್ರವರ್ತಿ – ಎಡಿಜಿಪಿ, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ.ಹರಿಶೇಖರನ್.ಪಿ – ಎಡಿಜಿಪಿ, ಅಗ್ನಿಶಾಮಕ ಮತ್ತು ತುರ್ತು ಸೇವೆ.