
ಮೂಳೆಗಳು ದುರ್ಬಲವಾಗಿದ್ದವರು ತಮ್ಮ ಆಹಾರ ಪಟ್ಟಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಂಡು ಆರೋಗ್ಯಕರ ಆಹಾರ ಪದ್ಧತಿ ಅನುಸರಿಸಬೇಕು.ಡ್ರೈ ಫ್ರೂಟ್ಸ್ ತಿನ್ನುವುದರಿಂದ ಮೂಳೆಗಳ ಸವೆತ ಕಡಿಮೆಯಾಗುತ್ತದೆ.
ಏಕೆಂದರೆ ಇವುಗಳಲ್ಲಿ ಆಲ್ಫಾ ಲೆನೋಲೆನಿಕ್ ಆಮ್ಲ, ಒಮೆಗಾ 3 ಫ್ಯಾಟಿ ಆಸಿಡ್, ಮೆಗ್ನೀಷಿಯಂ ಹೆಚ್ಚಾಗಿ ಸಿಗುತ್ತದೆ. ಆರೋಗ್ಯಕರವಾದ ಮೂಳೆಗಳಿಗೆ ಇವು ನೆರವಾಗವುದು.
ಅಗಸೆ ಬೀಜದ ಎಣ್ಣೆ, ವಾಲ್ನಟ್, ಸೋಯಾಬೀನ್ ಇವೆಲ್ಲವೂ ಮೂಳೆಗಳ ಆರೋಗ್ಯ ಕಾಪಾಡುವಲ್ಲಿ ಪ್ರಯೋಜನಕಾರಿ.ಹಸಿರು ಎಲೆ ತರಕಾರಿಗಳಲ್ಲಿ ಕ್ಯಾಲ್ಸಿಯಂ, ಮೆಗ್ನೀಷಿಯಂ, ವಿಟಮಿನ್ ಹೆಚ್ಚಿದ್ದು, ಮೂಳೆಗಳ ಬೆಳವಣಿಗೆಗೆ ಅಗತ್ಯವಾಗಿ ಬೇಕಾದ ಪ್ರೋಟೀನ್ ಕೂಡ ದೊರೆಯುವುದು.
ಅಪ್ಪಟ ಹಸುವಿನ ಗಟ್ಟಿ ಮೊಸರು ವಿಟಮಿನ್ ಡಿ ಪ್ರಮಾಣವನ್ನು ಹೆಚ್ಚಾಗಿ ಹೊಂದಿದ್ದು, ಮೂಳೆಗಳಿಗೆ ಅತ್ಯುತ್ತಮ. ದುರ್ಬಲ ಮೂಳೆಗಳ ಸರಿಪಡಿಸುವುದರಿಂದ ಹಿಡಿದು ಮುಂಬರುವ ದಿನಗಳಲ್ಲಿ ಮೂಳೆಗಳು ಹಾಗೂ ಕೀಲುಗಳ ತೊಂದರೆ ಎದುರಾಗದಂತೆ ನೋಡಿಕೊಳ್ಳುತ್ತದೆ.
ಸಮುದ್ರಹಾರವಾದ ಸಾಲ್ಮನ್ ಹೃದಯ ಸ್ನೇಹಿ ಒಮೆಗಾ 3 ಫ್ಯಾಟಿ ಆಮ್ಲಗಳನ್ನು ಮತ್ತು ವಿಟಮಿನ್ ಅಂಶಗಳನ್ನು ಹೊಂದಿದ್ದು, ಮೂಳೆಗಳಿಗೆ ತುಂಬಾ ಪ್ರಯೋಜನವಿದೆ. ಸದಾ ಫಿಟ್ ಆಗಿರಲು ಅನುಕೂಲ ಮಾಡಿಕೊಡುತ್ತದೆ.