ಆರೋಗ್ಯ

ಮೂಳೆಗಳ ಆರೋಗ್ಯಕ್ಕೆ ಮತ್ತು ಸದೃಢತೆಗೆ ಎಳ್ಳು ಸೇವಿಸಿ!

ಚಳಿಗಾಲದಲ್ಲಿ ಮೈ ಬೆಚ್ಚಗೆ ಇರಬೇಕು. ಇದಕ್ಕಾಗಿ ನಾವು ಸಾಧ್ಯವಾದಷ್ಟು ಉಷ್ಣಾಂಶ ನೀಡುವ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು. ಎಳ್ಳು ಅದರಲ್ಲೊಂದು.

ಎಳ್ಳಿನ ಆಹಾರಗಳನ್ನು ಮತ್ತು ಎಳ್ಳೆಣ್ಣೆ ಈ ಸಮಯದಲ್ಲಿ ಆಹಾರ ಪದ್ಧತಿಯಲ್ಲಿ ಬಳಸುವುದರಿಂದ ಸಾಕಷ್ಟು ಉಪಯೋಗವಿದೆ.ಚಳಿಗಾಲದಲ್ಲಿ ಮೂಳೆಗಳು ಹಿಡಿದು ಕೊಳ್ಳುವುದು, ಮೈ ಕೈ ನೋವು, ಕೀಲು ನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದಕ್ಕಾಗಿ ಪರಿಹಾರದ ರೂಪದಲ್ಲಿ ಎಳ್ಳು ಕೆಲಸ ಮಾಡುತ್ತದೆ.

ವೈದ್ಯರು ಸಹ ಚಳಿಗಾಲದಲ್ಲಿ ಎಳ್ಳಿನ ಬಳಕೆಯ ಬಗ್ಗೆ ಸಲಹೆಗಳನ್ನು ನೀಡಿದ್ದಾರೆ….ಮೂಳೆಗಳ ಆರೋಗ್ಯಕ್ಕೆ ಎಳ್ಳು ಅಥವಾ ಎಳ್ಳೆಣ್ಣೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ. ಆಸ್ತಿಯೋಪೋರೋಸಿಸ್ ವಿಚಾರದಲ್ಲಿ ನಡೆದ ಒಂದು ಸಂಶೋಧನೆಯಲ್ಲಿ ಹಿರಿಯ ಆಯುರ್ವೇದ ತಜ್ಞರುಗಳಾದ ಡಾ. ಶಿಲ್ಪ ಕಪೂರ್ ಮತ್ತು ಡಾ. ಶಿಖಾ ರವರು ಹೇಳಿರುವ ಪ್ರಕಾರ ದೇಹದಲ್ಲಿ ವಾತ ದೋಷದ ಸಮತೋಲನ ಕಾಯ್ದುಕೊಂಡರೆ ಮತ್ತು ಆಹಾರ ಪದ್ಧತಿಯಲ್ಲಿ ಕ್ಯಾಲ್ಸಿಯಂ ಹೆಚ್ಚಾಗಿರುವ ಆಹಾರಗಳನ್ನು ಸೇರಿಸಿಕೊಂಡರೆ ಈ ರೀತಿಯ ಮೂಳೆಗಳಿಗೆ ಸಂಬಂಧಪಟ್ಟ ತೊಂದರೆಗಳು ಬರುವುದಿಲ್ಲ.

ಎಳ್ಳು ಕ್ಯಾಲ್ಸಿಯಂ ತನ್ನಲ್ಲಿ ಹೆಚ್ಚಾಗಿ ಒಳಗೊಂಡಿರುವುದರಿಂದ ಈ ವಿಚಾರದಲ್ಲಿ ನಮಗೆ ಸಹಾಯಕ ಎಂದು ಹೇಳಿದ್ದಾರೆ.ಕ್ಯಾಲೋರಿಗಳ ವಿಚಾರಕ್ಕೆ ಬರುವುದಾದರೆ ಕಾಲು ಕಪ್ ಅಂದರೆ ಸುಮಾರು 36 ಗ್ರಾಂ ಎಳ್ಳು ತನ್ನಲ್ಲಿ 200 ಕ್ಯಾಲೋರಿಗಳನ್ನು ಹೊಂದಿರುತ್ತದೆ ಮತ್ತು 350 ಮಿಲಿ ಗ್ರಾಂ ಕ್ಯಾಲ್ಸಿಯಂ ಪಡೆದಿರುತ್ತದೆ.

ಅಷ್ಟೇ ಅಲ್ಲದೆ ಎಳ್ಳು ಸಿಹಿ ಸೂಚ್ಯಂಕ ಸಹ ಕಡಿಮೆ ಹೊಂದಿದ್ದು, ಸಕ್ಕರೆ ಕಾಯಿಲೆ ಇರುವ ವರಿಗೆ ತುಂಬಾ ಒಳ್ಳೆಯದು. ವಾತ ದೋಷ ನಿವಾರಣೆಯಲ್ಲಿ ದೇಹದಲ್ಲಿ ಉಷ್ಣಾಂಶ ಹೆಚ್ಚು ಮಾಡುವ ಎಳ್ಳು ಮುಂಬರುವ ದಿನಗಳಲ್ಲಿ ಆಸ್ಟಿಯೊಪೊರೋಸಿಸ್ ಮತ್ತು ಇನ್ನಿತರ ಮೂಳೆಗಳಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ದೂರ ಮಾಡಿ ಮೂಳೆಗಳ ಸಾಂದ್ರತೆಯನ್ನು ಹೆಚ್ಚು ಮಾಡುತ್ತದೆ.

ಬೇಸಿಗೆ ಕಾಲದಲ್ಲಿ ಅಥವಾ ಚಳಿಗಾಲದಲ್ಲಿ ಎಳ್ಳು ಸೇವನೆ ಮಾಡಬಹುದು. ಅದು ಹೇಗೆಂದರೆ ಒಂದು ಟೀ ಚಮಚ ಬಿಳಿ ಎಳ್ಳು ತೆಗೆದುಕೊಂಡು ಅದನ್ನು ನೀರಿನಲ್ಲಿ ನೆನೆ ಹಾಕಿ ಮರುದಿನ ಬೆಳಗ್ಗೆ ಸೇವನೆ ಮಾಡುತ್ತಾ ಬಂದರೆ ಆರೋಗ್ಯಕರವಾದ ಮೂಳೆಗಳು ನಿಮ್ಮದಾಗುತ್ತವೆ.

ಚಳಿಗಾಲದ ಈ ಸಂದರ್ಭದಲ್ಲಿ ಎಳ್ಳು ಬೆಲ್ಲ ಹಾಕಿ ಲಾಡು ತಯಾರು ಮಾಡಿ ಬೇಕೆಂದರೆ ಸವಿಯ ಬಹುದು. ಹಾಗೆ ಕೂಡ ಬಿಳಿ ಎಳ್ಳು ಸೇವನೆ ಮಾಡಬಹುದು.ಕೀಲು ನೋವು ಪರಿಹಾರವಾಗುತ್ತದೆ.ವಾರದಲ್ಲಿ ಒಂದು ಬಾರಿ ನಿಮ್ಮ ಕೀಲುಗಳಿಗೆ ಎಳ್ಳೆಣ್ಣೆಯಿಂದ ಮಸಾಜ್ ಮಾಡುವುದರಿಂದ ಹೆಚ್ಚಾದ ವಾತ ಸಮಸ್ಯೆಯನ್ನು ಸಮತೋಲನಕ್ಕೆ ತಂದು ನೋವು ನಿವಾರಣೆ ಮಾಡಿಕೊಳ್ಳಬಹುದು.

ಯಾರಿಗೆ ಕಫ ಸಮಸ್ಯೆ ಇರುತ್ತದೆ ಅಂತಹವರು ಎಳ್ಳು ತಿನ್ನಬಾರದು ಎಂದು ಹೇಳುತ್ತಾರೆ. ಅದರ ಬದಲು ಒಂದು ಲೋಟ ಹಾಲು ಕುಡಿಯುವುದರಿಂದ ಮೂಳೆಗಳಿಗೆ ಕ್ಯಾಲ್ಸಿಯಂ ಹೆಚ್ಚಾಗಿ ಸಿಗುತ್ತಾ ಹೋಗುತ್ತದೆ.

ಹಾಲಿನ ಜೊತೆಗೆ ಕೇಸರಿ, ಖರ್ಜೂರ, ಬಾದಾಮಿ, ಏಲಕ್ಕಿ, ದಾಲ್ಚಿನ್ನಿ, ಶುಂಠಿ, ಅರಿಶಿಣ ಇವುಗಳನ್ನು ಬೆರೆಸಿ ಕುಡಿಯಬಹುದು.

ಇದರ ಜೊತೆಗೆ ಹಸಿರು ಎಲೆ ತರಕಾರಿಗಳಾದ ಪಾಲಕ್ ಸೊಪ್ಪು, ಬ್ರೊಕೋಲಿ, ಎಲೆಕೋಸು, ಮೊಳಕೆ ಕಟ್ಟಿದ ಕಾಳುಗಳು, ಬೀನ್ಸ್, ಉದ್ದಿನ ಕಾಳು ಇವುಗಳನ್ನು ಸೇವನೆ ಮಾಡಿದರೆ ಆಸ್ಟಿಯೋಪೊರೋಸಿಸ್ ಸಮಸ್ಯೆಜೊತೆಗೆ ಇನ್ನಿತರ ಮೂಳೆಗಳಿಗೆ ಸಂಬಂಧಪಟ್ಟ ತೊಂದರೆಗಳು ದೂರವಾಗುತ್ತವೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button