ಮೂಗಿನ ಲಸಿಕೆಗೆ ದರ ನಿಗದಿ

ದೇಶದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಆತಂಕದ ನಡುವೆ ಸೋಂಕು ತಡೆಯಲು ಮೂಗಿನ ಮೂಲಕ ಲಸಿಕೆಗೆ ಅನುಮೋದನೆ ನೀಡಿದ್ದ ಕೇಂದ್ರ ಸರ್ಕಾರ, ಇಂದು ಬೆಲೆ ನಿಗದಿ ಮಾಡಿದ್ದು ಲಸಿಕೆ ಜನವರಿ ಕಡೆಯವಾರದಿಂದ ಲಭ್ಯವಾಗಲಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿ ಡೋಸ್ ಲಸಿಕೆಗೆ ೩೨೫ ಹಾಗು ಖಾಸಗಿ ಆಸ್ಪತ್ರೆಗಳಲ್ಲಿ ೮೦೦ ರೂಪಾಯಿ ಜೊತೆಗೆ ತೆರಿಗೆ ಪ್ರತ್ಯೇಕವಾಗಿ ನಿಗದಿ ಪಡಿಸುವ ಮೂಲಕ ಸೋಂಕು ವಿರುದ್ದದ ಹೋರಾಟಕ್ಕೆ ಸಿದ್ದತೆ ನಡೆಸಿದೆ.
ಭಾರತ್ ಬಯೋಟೆಕ್ ಸಂಸ್ಥೆ ಅಭಿವೃಧ್ದಿ ಪಡಿಸಿರುವ ಕೊರೊನಾ ಸೊಂಕು ತಡೆ ಲಸಿಕೆ ” ಇನ್ ಕೋ ವ್ಯಾಕ್” ಲಸಿಕೆಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ” ಕೋವಿನ್ ಪೋರ್ಟಲ್ ” ಮೂಲಕ ನೊಂದಾಯಿಸಬಹುದು ಎಂದು ತಿಳಿಸಲಾಗಿದೆ.
ಕೊರೊನಾ ಸೋಂಕು ತಡೆಗೆ ಮೂಗಿನ ಮೂಲಕ ಹಾಕುವ ಲಸಿಕೆ ಮುಂದಿನ ವರ್ಷ ಜನವರಿ ನಾಲ್ಕನೇ ವಾರದಿಂದ ಲಭ್ಯವಾಗಲಿದೆ ಎಂದು ಮಾಹಿತಿಯಲ್ಲಿ ಈ ವಿಷಯ ತಿಳಿಸಿದೆ.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚಿನ ಪ್ರಮಾಣದಲ್ಲಿ ಲಸಿಕೆಯನ್ನು ದಾಸ್ತಾನು ಮಾಡಲು ಅನುಕೂಲವಾಗುವಂತೆ ಸರ್ಕಾರಕ್ಕೆ ೩೨೫ ರೂಪಾಯಿ ದರದಲ್ಲಿ ನೀಡಲು ಉದ್ದೇಶಿಸಲಾಗಿದೆ ಎಂದು ತಿಳಿಸಲಾಗಿದೆ.
ಬೂಸ್ಟರ್ ಡೋಸ್ ಆಗಿ ನೀಡಿಕೆ೧೮ ವರ್ಷ ದಾಟಿದ ಮಂದಿಗೆ ಈಗಾಗಲೇ ಎರಡು ಡೋಸ್ ಲಸಿಕೆ ಪಡೆದ ಮಂದಿಗೆ ಬೋಸ್ಟರ್ ಡೋಸ್ ಆಗಿ ಇನ್ ಕೋ ವ್ಯಾಕ್ ಲಸಿಕೆ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.ಮೂಗಿನ ಮೂಲಕ ಪಡೆಯಬಹುದಾದ ಲಸಿಕೆ ಪಡೆಯುವ ಮಂದಿ ಈಗಾಗಲೇ ಕೋವಿ ಶೀಲ್ಡ್ ಅಥವಾ ಕೊವಾಕ್ಸಿನ್ ಸಲಿಕೆಯ ಎರಡೂ ಡೋಸ್ ಲಸಿಕೆ ಪಡೆದಿರಬೇಕೆನ್ನುವ ಷರತ್ತು ಹಾಕಲಾಗಿದೆ.
ಅಂತವರಿಗೆ ಮಾತ್ರ ಬೂಸ್ಟರ್ ಡೋಸ್ ಆಗಿ ಮೂಗಿನ ಮೂಲಕ ನೀಡುವ ಲಸಿಕೆ ನೀಡಲಾಗುತ್ತದೆ ಎಂದು ಭಾರತ್ ಬಯೋಟೆಕ್ ಸಂಸ್ಥೆ ತಿಳಿಸಿದೆ.ಭಾರತ್ ಬಯೊಟೆಕ್ ಸಂಸ್ಥೆ ದೇಶದ ೯ ಕಡೆ ಮೂರನೇ ಹಂತದ ಪ್ರಯೋಗ ನಡೆಸಲಾಗಿತ್ತು. ಅದರ ಫಲಿತಾಂಶ ಯಶಸ್ವಿಯಾದ ಹಿನ್ನೆಲೆಯಲ್ಲಿ ಮೂಗಿನ ಮೂಲಕ ಹಾಕುವ ಲಸಿಕೆ ನೀಡಲಾಗುತ್ತಿದೆ ಎಂದು ತಿಳಿಸಲಾಗಿದೆ.
ಮೂಗಿನ ಮೂಲಕ ಹಾಕುವ ಕೋವಿಡ್ ಲಸಿಕೆ ದೇಹದಲ್ಲಿ ಪ್ರತಿಕಾಯ ಶಕ್ತಿ ಹೊಂದಿದೆ.ಇದರಿಂದ ಕೋವಿಡ್ ತಡೆಗೆ ಸಹಕಾರಿಯಾಗಲಿದೆ ಎಂದು ತಿಳಿಸಲಾಗಿದೆ.ಮೂಗಿನ ಮೂಲಕ ಹಾಕುವ ಕೋವಿಡ್ ಲಸಿಕೆ ಬೆಲೆ ನಿಗದಿಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿ ಡೋಸ್ ಗೆ ೩೨೫ ರೂ ದರ ನಿಗದಿಖಾಸಗೀ ಅಸ್ಪತ್ರೆಗಳಲ್ಲಿ ಪ್ರತಿ ಡೋಸ್ ಗೆ ೮೦೦ ರೂಪಾಯಿ ಮತ್ತು ತೆರಿಗೆ ಒಳಗೊಂಡಿದೆ.
ಜನವರಿ ನಾಲ್ಕನೇ ವಾರದಿಂದ ಲಸಿಕೆ ಲಭ್ಯಕೋವಿನ್ ಪೋರ್ಟಲ್ ನಲ್ಲಿ ನೊಂದಾಯಿಸಲು ಅವಕಾಶಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ದಿ ಪಡಿಸಿದ ಇನ್‌ಕೋ ವ್ಯಾಕ್ ಲಸಿಕೆ