ಮುಸ್ಲಿಂ ಬಾಲಕಿ 16 ವರ್ಷಕ್ಕೆ ಮದುವೆಗೆ ಸಮರ್ಥಳಿದ್ದಾಳೆ : ಹೈಕೋರ್ಟ್ ತೀರ್ಪು
Muslim girls can marry at 16: Punjab and Haryana HC

ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಬಾಲಕಿ 16 ವರ್ಷಕ್ಕೆ ಮದುವೆಯ ಕರಾರಿಗೆ ಒಳಪಡಲು ಸಮರ್ಥಳಿದ್ದಾಳೆ ಎಂದು ಪಂಜಾಬ್-ಹರ್ಯಾಣ ಹೈಕೋರ್ಟ್ ತೀರ್ಪು ನೀಡಿದೆ. ಪಠಾಣ್‍ಕೋಟ್ ಮೂಲದ 16 ಬಾಲಕಿ ಮತ್ತು 21 ವರ್ಷದ ಯುವಕ 2022ರ ಜೂನ್ 8ರಂದು ಇಸ್ಲಾಂ ಧರ್ಮದ ಸಂಪ್ರದಾಯದಂತೆ ನಡೆದಿತ್ತು. ಆದರೆ ಈ ವಿವಾಹವನ್ನು ಕುಟುಂಬಸ್ಥರು ವಿರೋಸಿದ್ದರು. ನವದಂಪತಿಗೆ ಕುಟುಂಬಸ್ಥರು ಬೆದರಿಕೆ ಹಾಕಿದ್ದರು. ರಕ್ಷಣೆ ನೀಡುವಂತೆ ನವಜೋಡಿ ನ್ಯಾಯಾಲಯದ ಮೆಟ್ಟಿಲೇರಿತ್ತು.
ವಿಚಾರಣೆ ನಡೆಸಿದ ಹೈಕೋರ್ಟ್‍ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಜಸ್ಜಿತ್ ಸಿಂಗ್ ಬೇಡಿ, ಮಹತ್ವದ ಆದೇಶ ನೀಡಿದ್ದಾರೆ. ಕುಟುಂಬಸ್ಥರು ವಿರೋಧ ಮಾಡುತ್ತಾರೆ ಎಂಬ ಕಾರಣಕ್ಕೆ ನವಜೋಡಿಯ ಸಂವಿಧಾನ ಬದ್ಧ ಮೂಲಭೂತ ಹಕ್ಕುಗಳನ್ನು ಹತ್ತಿಕ್ಕಲಾಗದು.
ಇಸ್ಲಾಂ ಶರಿಯಾ ಕಾನೂನನ್ನು ಉಲ್ಲೇಖಿಸಿರುವ ನ್ಯಾಯಮೂರ್ತಿಯವರು, ಸರ್ ದಿನ್ಶಹ್ ಫರ್ದುಂಜಿ ಮುಲ್ಲಾ ಅವರ ಪ್ರಿನಿಪಲ್ಸ್ ಆಫ್ ಮೊಹಮ್ಮದನ್ ಲಾ ಪುಸ್ತಕರ ಆರ್ಟಿಕಲ್ 195 ಪ್ರಕಾರ, ಹುಡುಗಿ 16 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ. ಹುಡುಗನ ವಯಸ್ಸು 21 ವರ್ಷ ಮೀರಿದೆ. ಹೀಗಾಗಿ ಇಬ್ಬರು ಮದುವೆಗೆ ಪ್ರಾಪ್ತರಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ದಂಪತಿಯ ಪರವಾಗಿ ವಾದಿಸಿದ ವಕೀಲರು, ಮುಸ್ಲಿಂ ಕಾನೂನಿನ ಪ್ರಕಾರ ಹುಡುಗ ಅಥವಾ ಹುಡುಗಿ ಪ್ರೌಢಾವಸ್ಥೆಗೆ ತಲುಪಿದ ಬಳಿಕ ಮದುವೆಗೆ ಪ್ರಾಪ್ತರಾಗಿರುತ್ತಾರೆ. ಬಹುತೇಕ 15 ವರ್ಷಕ್ಕೆ ಹೆಣ್ಣುಮಕ್ಕಳು ಪ್ರೌಢಾವಸ್ಥೆಗೆ ತಲುಪುತ್ತಾರೆ ಎಂದು ಹೇಳಿದ್ದರು.
ವಾದ ಆಲಿಸಿದ ಬಳಿಕ ತೀರ್ಪು ನೀಡಿರುವ ಹೈಕೋರ್ಟ್, ಪಠಾಣ್‍ಕೋರ್ಟ್ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಅವರು ನವಜೋಡಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ನ್ಯಾಯಾಲಯ ಸೂಚಿಸಿದೆ.ಪ್ರಸ್ತುತ ಜಾರಿಯಲ್ಲಿರುವ ಕಾನೂನಿನ ಪ್ರಕಾರ ಹುಡುಗಿಗೆ 18, ಹುಡುಗರಿಗೆ 21 ವರ್ಷ ಮದುವೆಗೆ ಪ್ರಾಪ್ತ ವಯಸ್ಸಾಗಿದೆ.
ಕೇಂದ್ರ ಸರ್ಕಾರ ಇತ್ತೀಚೆಗೆ ಕಾನೂನು ಬದಲಾವಣೆ ಮಾಡಿ, ಹುಡುಗಿಯರ ಮದುವೆಯ ವಯಸ್ಸನ್ನು 18 ರಿಂದ 21 ವರ್ಷಕ್ಕೆ ಹೆಚ್ಚಿಸಿದೆ. ಆದರೆ ಅದಿನ್ನೂ ಜಾರಿಗೆ ಬಂದಿಲ್ಲ. ಈ ನಡುವೆ ಪಂಜಾಬ್ ನ್ಯಾಯಾಲಯದ ತೀರ್ಪು ಚರ್ಚೆಗೆ ಗ್ರಾಸವಾಗಿದೆ.