ಮುಲಾಜಿಲ್ಲದೆ ರಾಜಕಾಲುವೆ ಒತ್ತುವರಿ ತೆರವು : ಬೈರತಿ ಭರವಸೆ

ರಾಜಕಾಲುವೆಗಳ ಒತ್ತುವರಿಯಿಂದಾಗಿ ಬೆಂಗಳೂರಿನಲ್ಲಿ ಮಳೆಹಾನಿ ಉಂಟಾಗುತ್ತಿದ್ದು, ಅಧಿಕಾರಿಗಳು ಯಾರ ಪ್ರಭಾವಕ್ಕು ಒಳಗಾಗದೆ ಮುಲಾಜಿಲ್ಲದೆ ರಾಜಕಾಲುವೆಗಳ ಒತ್ತುವರಿಯನ್ನು ತೆರವುಗೊಳಿಸಬೇಕೆಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರು ತಿಳಿಸಿದರು.
ಪ್ರಧಾನಿ ಮೋದಿ ಅವರ ೭೨ ನೇ ಹುಟ್ಟುಹಬ್ಬದ ಅಂಗವಾಗಿ ಕೆ.ಆರ್.ಪುರ ಕ್ಷೇತ್ರದ ರಾಮಮೂರ್ತಿನಗರದಲ್ಲಿ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ರವರು ಬಡಜನರಿಗೆ ದಿನಸಿ ಕಿಟ್ ಗಳನ್ನು ವಿತರಿಸಿ ಮಾತನಾಡಿದರು.
ಕ್ಷೇತ್ರದಲ್ಲಿ ಒತ್ತುವರಿಯನ್ನು ಯಾರೇ ಮಾಡಿದ್ದರು,ಯಾವುದೇ ಮುಲಾಜಿಲ್ಲದೆ ತೆರವು ಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ರಾಮಮೂರ್ತಿನಗರ ಬೋವಿ ಕಾಲೇನಿಯ ಶ್ರೀ ವೆಂಕಟರಮ ಸ್ವಾಮೀ ದೇವಾಲಯದಲ್ಲಿ ಪ್ರಧಾನಿ ನರೇಂದ್ರ ಮೋದಿ ರವರ ಹೆಸರಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ತಮ್ಮ ಮುಖಂಡರ ಜೋತೆ ಕೇಕ್ ಕತ್ತರಿಸಿ ಮೋದಿರವರ ಹುಟ್ಟುಹಬ್ಬ ಆಚರಿಸಿದರು, ಇದೇ ಸಂದರ್ಭದಲ್ಲಿ ಬಡಜನರಿಗೆ ದಿನಸಿಕಿಟ್ ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆಯೋಜಕ ಎಂಎಲ್ ಡಿಸಿ ಮುನಿರಾಜು ಅವರು ನೆಚ್ಚಿನ ಪ್ರಧಾನಿಗಳಾದ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೇವಾ ಕಾರ್ಯಗಳನ್ನು ಹಮ್ಮಿಕೊಂಡಿದ್ದೆವೆಂದು ನುಡಿದರು.
ಕ್ಷೇತ್ರ ಅಧ್ಯಕ್ಷರಾದ ಶಿವರಾಜ್, ವಾರ್ಡನ ಅಧ್ಯಕ್ಷರಾದ ಗೊವಿಂದಪ್ಪ, ಸತೀಶ್ ಮುಖಂಡರಾದ ದಮೋದರ್ ರಾಜು, ರಮೇಶ್, ಮಂಜುನಾಥ್ ಇದ್ದರು.