ಮುರುಘಾ ಶ್ರೀಗಳಿಗೆ ಸೆ.೧೨ರವರೆಗೆ ಜೈಲೇ ಗತಿ

ಮುರುಘಾ ಮಠದ ಶಿವಮೂರ್ತಿಯ ವಿರುದ್ದದ ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ.ಪೋಕ್ಸೋ ಪ್ರಕರಣದ ಜಾಮೀನು ಅರ್ಜಿ ವಿಚಾರಣೆಯನ್ನು ಸೆ.೧೨ಕ್ಕೆ ಮುಂದೂಡಲಾಗಿದ್ದು ಅಲ್ಲಿಯವರೆಗೆ ಶ್ರೀಗಳಿಗೆ ಜೈಲೇ ಗಟ್ಟಿಯಾಗಿದೆ.
ನಗರದ ೨ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಕೋಮಲ ಅವರು ಅರ್ಜಿ ವಿಚಾರಣೆಯನ್ನು ಸೆ.೧೨ಕ್ಕೆ ಮುಂದೂಡಿದ್ದಾರೆ.ಶಿವಮೂರ್ತಿ ಶ್ರೀಗೆ ಹೃದಯ ಸಂಬಂಧಿ ಖಾಯಿಲೆ ಇರುವುದರಿಂದ ಜಾಮೀನು ಮಂಜೂರು ಮಾಡಬೇಕು ಎಂಬ ಅರ್ಜಿಗೆ ಆಕ್ಷೇಪಣೆ ಸಲ್ಲಿಕೆಯಾಗಿದ್ದು.
ಖಾಯಿಲೆಯ ವೈದ್ಯಕೀಯ ವರದಿಯನ್ನು ನೀಡುವಂತೆ ನ್ಯಾಯಲಯ ಸೂಚಿಸಿತ್ತು.ಸೆ.೭ರಂದು ಶ್ರೀಗೆ ಹೃದಯ ಸಂಬಂಧಿ ಸಮಸ್ಸೆ ಬಗ್ಗೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಗೆ ಸೇರಿಸಲು ಮನವಿ ಮಾಡಲಾಗಿತ್ತು.
ಇದಕ್ಕೆ ಸರ್ಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಕೆ ಮಾಡಿದ್ದರು.ಸಂತ್ರಸ್ತೆಯರ ವಿರೋಧ:ಸೆ.೭ ರಂದು ನ್ಯಾಯಾಲಯಕ್ಕೆ ಹಾಜರಾಗಿದ್ದ ಸಂತ್ರಸ್ತ ಅಪ್ರಾಪ್ತೆಯರು ಶಿವಮೂರ್ತಿ ಶ್ರೀಗಳಿಗೆ ಜಾಮೀನು ನೀಡುವುದಕ್ಕೆ ಆಕ್ಷೇಪವನ್ನು ವ್ಯಕ್ತ ಪಡಿಸಿದ್ದರು.ನ್ಯಾಯಾಂಗ ಬಂಧನ:ಪೋಕ್ಸೋ ಪ್ರಕರಣದ ಮತ್ತೊರ್ವ ಆರೋಪಿ ಹಾಸ್ಟಲ್ ವಾರ್ಡನ್ ರಶ್ಮಿ ನ್ಯಾಯಾಂಗ ಬಂಧನವನ್ನು ನೀಡಲಾಗಿದ್ದು.
ಆರೋಪಿ ರಶ್ಮಿಗೆ ಸೆಪ್ಟೆಂಬರ್ ೧೪ರ ವರೆಗೂ ನ್ಯಾಯಾಂಗ ಬಂಧನ ಮುಂದುವರೆದಿದೆ.ಜಾಮೀನು ಅರ್ಜಿ:ಪೋಕ್ಸೋ ಪ್ರಕರಣದ ಮತ್ತಿಬ್ಬರು ಆರೋಪಿಗಳಾದ ಪರಮಶಿವಯ್ಯ ಮತ್ತು ಬಸವಾದಿತ್ಯ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಸೆ.೧೨ ಕ್ಕೆ ಮುಂದೂಡಲಾಗಿದೆ.
೨ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಕೋಮಲರಿಂದ ಅರ್ಜಿಯ ವಿಚಾರಣೆಯನ್ನು ಮುಂದೂಡಿದ್ದಾರೆ.