ಮುರುಘಾ ಶರಣರು ವಿಚಾರಣೆ ಮುಗಿಸಿ ಮಧ್ಯಾಹ್ಮ ಮಠಕ್ಕೆ ವಾಪಸ್ಸಾಗಿದ್ದಾರೆ

ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಗುರಿಯಾಗಿದ್ದ ಮುರುಘಾ ಮಠದ ಶಿವಕೂರ್ತಿ ಮುರುಘಾ ಶರಣರು ವಿಚಾರಣೆ ಮುಗಿಸಿ ಮಧ್ಯಾಹ್ಮ ಮಠಕ್ಕೆ ವಾಪಸ್ಸಾಗಿದ್ದಾರೆ.
ಮಠಕ್ಕೆ ಮರಳಿದ ಸಮಯದಲ್ಲಿ ಅಪಾರ ಪ್ರಮಾಣದಲ್ಲಿ ಸೇರಿದ ಭಕ್ತರು ಮುರುಘಾ ಶರಣರು ಹಾಗೂ ಮಠದ ಪರಂಪರೆಗೆ ಘೋಷಣೆಗಳನ್ನು ಕೂಗಿ ಬರಮಾಡಿಕೊಂಡರು.
ಬೆಳ್ಳಗ್ಗೆ ಮುರುಘಾ ಶರಣರನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ವದಂತಿ ಹರಡಿತ್ತು. ಇದಕ್ಕೆ ಶರಣರು ಸ್ವಯಂ ಜನರ ಮುಂದೆ ಕಾಣಿಸಿಕೊಳ್ಳುವ ಮೂಲಕ ವದಂತಿಗಳಿಗೆ ತೆರೆ ಎಳೆದರು.
ಮಠದ ಆವರಣದಲ್ಲಿ ಭಕ್ತರನ್ನುದ್ದೇಶಿಸಿ ಮಾತನಾಡಿದ ಶರಣರು ಇದು ಸಂಕಷ್ಟದ ಕಾಲ ನಾವು ಧೈರ್ಯದಿಂದ ಇದನ್ನು ಎದುರಿಸಬೇಕು ಭಕ್ತರು ವಿಚಲಿತರಾಗುವ ಅವಶ್ಯಕತೆಯಿಲ್ಲ. ಇಂತಹ ಸಮಸ್ಯೆಗಳು ಕಳೆದ 15 ವರ್ಷಗಳಿಂದ ಮಠದ ಒಳಗೆ ಇದ್ದವು ಈಗ ಹೊರಗೆ ಬಿದಿದೆ ಎಂದಿದ್ದಾರೆ.
ಮಠದ ಕಾನೂನನ್ನು ಗೌರವಿಸುವ ಮಠಾಧೀಶರು ನಾವು ನಾವು ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ ಯಾರು ಊಹಾಪೋಹಗಳಿಗೆ ಕಿವಗೊಡಬೇಡಿ ಎಂದು ಹೇಳಿದ್ದಾರೆ.
ಇದೊಂದು ಅಹಿತಕರ ಹಾಗೂ ಅನಾರೋಗ್ಯಕರ ಬೆಳವಣಿಗೆ ಈ ಸಂಕಷ್ಟದಿಂದ ನಾನು ಸಂಪೂರ್ಣವಾಗಿ ಹೊರಬರುವ ವಿಶವಾಸವಿದೆ. ಇಂತಹ ಸಮಯದಲ್ಲು ಸಹ ಭಕ್ತರು ಸಮರೋಪಾದಿಯಲ್ಲಿ ಮಠಕ್ಕೆ ಆಗಮಿಸುತ್ತಿದ್ದಾರೆ ನೋವು ಹಾಗೂ ಸಂಕಷ್ಟದ ಜೊತೆಯಲ್ಲಿ ನಿಂತಿರುವ ಭಕ್ತರಿಗೆ ಸೆಲ್ಯೂಟ್ ಹೊಡೆಯಬೇಕು ಎಂದಾಗ ಭಕ್ತರು ಆಕ್ಷೇಪಿಸಿದ್ದರು ನಾವು ನಿಮ್ಮೊಂದಿಗೆ ಸದಾ ಇರುತ್ತೇವೆ ನೀವು ನಮ್ಮಗೆ ಸೆಲ್ಯೂಟ್ ಹೊಡೆಯುವ ಅವಶ್ಯಕತೆಯಿಲ್ಲ ಎಂದು ಒಕ್ಕೊರಲ ಧ್ವನಿಯಲ್ಲಿ ತಮ್ಮ ಅಭಿಪ್ರಾಯ ಮಂಡಿಸಿದ್ದರು.