ಮುರುಘಾ ಮಠದಲ್ಲಿ ಲೈಂಗಿಕ ದೌರ್ಜನ್ಯ: ಮಾಜಿ ಆಡಳಿತಾಧಿಕಾರಿ ಪೊಲೀಸರಿಗೆ ಶರಣು

ಶಿವಮೂರ್ತಿ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿದ್ದ ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ S.K. ಬಸವರಾಜನ್ ಚಿತ್ರದುರ್ಗ ಪೊಲೀಸರಿಗೆ ಶರಣಾಗಿದ್ದಾರೆ.
ಬುಧವಾರ ತಡರಾತ್ರಿ 1 ಗಂಟೆಗೆ ಪೊಲೀಸರಿಗೆ ಶರಣಾಗಿದ್ದು, ಬಸವಪ್ರಭು ನೀಡಿದ ದೂರಿನ ಆಧಾರದಲ್ಲಿ ಇವರ ವಿರುದ್ಧ ಎಫ್ ಐಆರ್ ದಾಖಲಾಗಿತ್ತು.ಶಿವಮೂರ್ತಿ ವಿರುದ್ಧ ಪೋಕ್ಸೋ ಕೇಸ್ ಕುರಿತ ಚಾರ್ಜ್ಶೀಟ್ನಲ್ಲಿ ಆರೋಪಿಗಳ ಹೇಳಿಕೆಯನ್ನು ದಾಖಲು ಮಾಡಲಾಗಿದೆ. ಬಾಲಕಿಯರ ಆರೋಪ ಸುಳ್ಳು ಎಂದು ಆರೋಪಿಗಳು ಹೇಳಿಕೆ ನೀಡಿದ್ದಾರೆ.
ಚಾರ್ಜ್ಶೀಟ್ನಲ್ಲಿ ಶಿವಮೂರ್ತಿಯ ಸಂಪೂರ್ಣ ಹೇಳಿಕೆ ದಾಖಲಾಗಿದ್ದು, ಅತ್ಯಾಚಾರ ಆರೋಪವನ್ನು ಅಲ್ಲಗಳೆಯಲಾಗಿದೆ. ಬಾಲಕಿಯರನ್ನು ಲೈಂಗಿಕವಾಗಿ ಬಳಸಿಕೊಂಡಿಲ್ಲ. ನನ್ನ ಕೊಠಡಿಗೆ ಯಾರಿಗೂ ಪ್ರವೇಶವಿಲ್ಲ.ಭೇಟಿಗೆ ಬರುವ ಬಾಲಕಿಯರಿಗೆ ಸೇಬು, ಮಾವು ನೀಡ್ತಿದ್ದೆ.
ಚಾಕೊಲೇಟ್ಗಳನ್ನು ಪ್ರಸಾದ ರೂಪದಲ್ಲಿ ನೀಡಿದ್ದೇನೆ. ಆದರೆ ಯಾವುದರಲ್ಲೂ ಮತ್ತು ಬರುವ ಪದಾರ್ಥ ಬೆರೆಸಿಲ್ಲ ಎಂದು ಹೇಳಿದ್ದಾರೆ.