ಮುರುಘಾ ಮಠಕ್ಕೆ ಪೀಠಾಧ್ಯಕ್ಷರ ನೇಮಕಕ್ಕೆ ಖಂಡನೆ

ಮುರುಘಾ ಮಠಕ್ಕೆ ಫೋಕ್ಸೋ ಪ್ರಕರಣದಲ್ಲಿ ಬಂಧಿತರಾಗಿರುವ ಮುರುಘಾ ಶ್ರೀಗಳು ಪ್ರಭಾರ ಪೀಠಾದ್ಯಕ್ಷರನ್ನು ನೇಮಕ ಮಾಡಿರುವುದನ್ನು ವೀರಶೈವ ಮಹಾಸಭಾದ ರಾಜ್ಯ ಪ್ರತಿನಿಧಿ ಶಾಮಲಾ ಶಿವಪ್ರಕಾಶ್ ಖಂಡಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುರುಘಾ ಮಠ ತನ್ನದೇ ಆದ ಐತಿಹಾಸಿಕ ಪರಂಪರೆಯನ್ನು ಹೊಂದಿದೆ. ಇಲ್ಲಿ ಪೀಠಾಧ್ಯಕ್ಷರಾಗಿದ್ದ ಡಾ.ಶಿವಮೂರ್ತಿ ಮುರುಘಾ ಶರಣರು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಮುರುಘಾಶ್ರೀ ಮೊದಲು ಪೀಠ ತ್ಯಾಗ ಮಾಡಬೇಕು. ಪೀಠಾ ತ್ಯಾಗ ಮಾಡದೇ, ಜೈಲುವಾಸದಲ್ಲಿರುವ ಮುರುಘಾ ಶ್ರೀಗಳು ಹೇಗೆ ಪ್ರಭಾರ ಪೀಠಾದ್ಯಕ್ಷರನ್ನು ಹೇಗೆ ನೇಮಕ ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.ರಾಜಕೀಯ ನಾಯಕರುಗಳೇ ಆರೋಪ ಬಂದಾಗ ಹುದ್ದೆಗೆ ರಾಜೀನಾಮೆ ನೀಡುತ್ತಾರೆ.
ಅಂತಹುದರಲ್ಲಿ ಮುರುಘಾಶ್ರೀಗಳು ಬಂಧನವಾಗಿ ಒಂದೂವರೆ ತಿಂಗಳು ಕಳೆದರೂ ಪೀಠತ್ಯಾಗ ಮಾಡಿಲ್ಲ ಎಂದು ಕಿಡಿಕಾರಿದರು. ಮುರುಘಾ ಶ್ರೀಗಳು ಮೊದಲು ಪೀಠ ತ್ಯಾಗ ಮಾಡಬೇಕು.
ನಂತರ ವೀರಶೈವ ಲಿಂಗಾಯತ ಸಮಾಜ ಹೊಸ ಪೀಠಾದ್ಯಕ್ಷರನ್ನು ನೇಮಿಸುತ್ತದೆ ಎಂದು ತಿಳಿಸಿರುವ ಅವರು, ಮುರುಘಾಶ್ರೀಗಳು ಆರೋಪ ಮುಕ್ತರಾಗಿ ಬಂದರೆ ಮುಂದಿನ ವಿಚಾರ ನೊಡೋಣ ಎಂದು ಹೇಳಿದ್ದಾರೆ.