ಮುರುಘಾಶ್ರೀ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಟ್ವಿಸ್ಟ್: ಪ್ರಧಾನಿಗೆ ಸಂತ್ರಸ್ತೆಯರಿಂದ ಪತ್ರ

ಮುರುಘಾ ಮಠದ ಶಿವಮೂರ್ತಿ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ದಿನದಿಂದ ದಿನಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆಯುತ್ತಿದ್ದು, ಇದೀಗ ಪ್ರಧಾನಿ ನರೇಂದ್ರ ಮೋದಿ ಅಂಗಳ ತಲುಪಿದೆ.ಹೌದುಇ, ಸಂತ್ರಸ್ತ ಬಾಲಕಿಯರು ಮಠದಲ್ಲಿನ ಕಿರುಕುಳದ ಬಗ್ಗೆ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.
ಮಠದ ಅಡುಗೆ ಸಹಾಯಕಿಯರ ಮಕ್ಕಳಿಂದ ಮೋದಿಗೆ ಪತ್ರ ಬರೆಯಲಾಗಿದೆ.ಕಿರುಕುಳದ ಬಗ್ಗೆ ಲೆಟರ್ನಲ್ಲಿ ಎಳೆಎಳೆಯಾಗಿ ಉಲ್ಲೇಖಿಸಲಾಗಿದೆ. ಶಿವಮೂರ್ತಿ ನಮ್ಮ ಜೊತೆ ಕೆಟ್ಟದಾಗಿ ನಡೆದುಕೊಳ್ತಿದ್ರು. ಈ ಬಗ್ಗೆ ನಮ್ಮ ಅಮ್ಮನಿಗೆ ವಿಷಯ ತಿಳಿಸಿದ್ದವು.
ನನ್ನ ಮಕ್ಕಳನ್ನು ಕಳಿಸಬೇಡ ಎಂದು ರಶ್ಮಿಗೆ ನಮ್ಮ ಅಮ್ಮ ಹೇಳಿದರು.ವಾರ್ಡನ್ ರಶ್ಮಿ ನಮ್ಮನ್ನ ಸ್ವಾಮಿ ಬಳಿ ಕರೆದೊಯ್ದರು. ನಾನು, ನನ್ನ ಅಕ್ಕ ಇಬ್ಬರು ಶಿವಮೂರ್ತಿ ಬಳಿ ಹೋಗಿದ್ವಿ. ನೀನು ಎಷ್ಟನೇ ತರಗತಿ ಓದುತ್ತಿದ್ದೀಯ ಎಂದು ನನ್ನನ್ನು ಕೇಳಿದ್ದರು. ಆಗ ನನಗೆ ಶಿವಮೂರ್ತಿ ತಿನ್ನಲು ಚಾಕೋಲೇಟ್ ಕೊಟ್ರು.
ಆವಾಗ ನಾನು ಮಠದಲ್ಲೇ ಮಲಗಿ ಬಿಟ್ಟೆ. ಮತ್ತೊಮ್ಮೆ ನನ್ನನ್ನು ಶಿವಮೂರ್ತಿ ಬಳಿ ಕರೆದೊಯ್ದರು.ಶಿವಮೂರ್ತಿ ನನ್ನನ್ನು ತೊಡೆಯ ಮೇಲೆ ಕೂರಿಸಿಕೊಂಡ್ರು. ನನ್ನ ಎದೆಯ ಭಾಗವನ್ನು ಮುಟ್ಟಿದರು.
ಐದಾರು ಸಾರಿ ನನ್ನನ್ನು ಸ್ವಾಮಿ ಬಳಿ ಕಳಿಸಿದ್ದರು. ಇದರಿಂದ ಗಾಬರಿಗೊಂಡು ನಾನು ಅಲ್ಲಿಂದ ಎದ್ದು ಬಂದೆ. ಅಮ್ಮನಿಗೆ ಈ ವಿಚಾರ ಹೇಳಿದೆ ಎಂದು ಮಕ್ಕಳಿಂದ ಮೋದಿಗೆ ಪತ್ರ ಬರೆಯಲಾಗಿದೆ.