ಬೆಂಗಳೂರುರಾಜಕೀಯರಾಜ್ಯ

ಮುಂದಿನ ಬಾರಿ ರಾಜ್ಯದ ಮುಖ್ಯಮಂತ್ರಿ ಒಕ್ಕಲಿಗರೇ ಆಗಬೇಕು: ನಂಜಾವಧೂತ ಶ್ರೀ ಮಹಾಸ್ವಾಮಿಜೀ

ನೆಲಮಂಗಲ: ದೇಶ ಹಾಗೂ ರಾಜ್ಯದಲ್ಲಿ ಒಕ್ಕಲಿಗರು ಅಧಿಕಾರ ಪಡೆದಾಗ ಅಭಿವೃದ್ಧಿಯ ಇತಿಹಾಸವೇ ಸೃಷ್ಟಿಯಾಗಿರುವುದನ್ನು ಕಾಣಬಹುದಾಗಿದ್ದು, ಮುಂದಿನ ಬಾರಿ ಒಕ್ಕಲಿಗರೇ ಮುಖ್ಯಮಂತ್ರಿಯಾಗಬೇಕು ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜವಧೂತ ಮಹಾ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದ ಒಕ್ಕಲಿಗರ ಕ್ಷೇಮಾಭಿವೃದ್ಧಿ ಟ್ರಸ್ಟ್‌ ವತಿಯಿಂದ ಎಂವಿಎಂ ಕನ್ವೆನ್‌ಷನ್‌ ಹಾಲ್‌ನಲ್ಲಿ ಆಯೋಜಿಸಲಾಗಿದ್ದ 8ನೇ ವಾರ್ಷಿಕೋತ್ಸವ ಹಾಗೂ ಶೇ.90ಕ್ಕೂ ಹೆಚ್ಚು ಅಂಕ ಪಡೆದ 300ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳು, ಸಮುದಾಯದ ಸಾಧಕರಿಗೆ ಸನ್ಮಾನ ಮಾಡಿದ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜವಧೂತ ಮಹಾ ಸ್ವಾಮೀಜಿ, ಮುಂದಿನ ಬಾರಿ ಒಕ್ಕಲಿಗರೇ ಮುಖ್ಯಮಂತ್ರಿಯಾಗಬೇಕು ಅದಕ್ಕೆ ನಮ್ಮ ಬೆಂಬಲವಿದೆ. ಡಿಕೆ ಶಿವಕುಮಾರ್ ಹಾಗೂ ಎಚ್‌ಡಿ ಕುಮಾರಸ್ವಾಮಿ ಪರವಾಗಿ ಬೆಂಬಲ ಸೂಚಿಸಿದ್ದಾರೆ.

ವಿಧಾನಸೌಧ ನಿರ್ಮಾಣ ಮಾಡಿದ ಕೆಂಗಲ್‌ ಹನುಮಂತಯ್ಯ, ವಿಕಾಸಸೌಧ ನಿರ್ಮಾಣ ಮಾಡಿದ ಎಚ್‌.ಡಿ ಕುಮಾರಸ್ವಾಮಿ, ಅಧಿಕಾರದ ಕೊನೆಯ ಗಳಿಗೆಯಲ್ಲಿ ಎತ್ತಿನಹೊಳೆ ಯೋಜನೆಗೆ ಅನುದಾನ ನೀಡಿದ ಡಿವಿ ಸದಾನಂದ ಗೌಡ, ಎಸ್‌.ಎಂ ಕೃಷ್ಣ ಸೇರಿದಂತೆ ರಾಜ್ಯವನ್ನಾಳಿದ ಒಕ್ಕಲಿಗ ಮುಖ್ಯಮಂತ್ರಿಗಳ ಅವಧಿಯಲ್ಲಿ ಅಭಿವೃದ್ಧಿಯ ಪರ್ವವೇ ಆಗಿದೆ. ಎಚ್‌.ಡಿ ದೇವೇಗೌಡರು ಪ್ರಧಾನಿಯಾದಾಗ ದೇಶದಲ್ಲಿ ಎಂದೂ ಕಾಣದ ರೈತರ ಯೋಜನೆಗಳು ಜಾರಿಗೆ ಬಂದವು. ಡಿಕೆ ಶಿವಕುಮಾರ್ ವೇದಿಕೆಯಲ್ಲಿ ಒಕ್ಕಲಿಗರು ಬೆಂಬಲ ನೀಡಿ ಎಂದು ಹೇಳಿರುವುದು ತಪ್ಪೇನಿಲ್ಲ. ಡಿಕೆ ಶಿವಕುಮಾರ್, ಎಚ್‌ಡಿ ಕುಮಾರಸ್ವಾಮಿ ಮುಖ್ಯಮಂತ್ರಿಗಳಾದರೆ ಒಳ್ಳೆಯದು. ಯಾರೇ ಅಧಿಕಾರಕ್ಕೆ ಬಂದರೂ ಒಕ್ಕಲಿಗರೇ ಮುಖ್ಯಮಂತ್ರಿಗಳಾಗಬೇಕು ಎಂದು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button