ಮೀನುಗಾರರ ಬಲೆಗೆ ಬಿದ್ದ ಅಪರೂಪದ ಹಸಿರು ಆಮೆ

ತಮಿಳುನಾಡಿನ ರಾಮನಾಥಪುರಂನಲ್ಲಿ ಹಸಿರು ಆಮೆಯೊಂದು ಪತ್ತೆಯಾಗಿದೆ.ಪ್ಲಾಸ್ಟಿಕ್ ಮಾಲಿನ್ಯಕ್ಕೆ ಸಮುದ್ರ ಸಸ್ತನಿಗಳು ಸಾವನ್ನಪ್ಪುತ್ತಿದ್ದು, ಅದೇ ರೀತಿ ಮಾಲಿನ್ಯದಿಂದಾಗಿ ಪ್ರಾಣ ಕಳೆದುಕೊಳ್ಳುವ ಹಂತ ತಲುಪಿದ್ದ ಹಸಿರು ಆಮೆಯೊಂದನ್ನು ಮೀನುಗಾರರು ರಕ್ಷಿಸಿದ್ದಾರೆ.ಮೀನುಗಾರರು ಮೀನು ಹಿಡಿಯಲು ಬೀಸಿದ್ದ ಬಲೆಗೆ ಹಸಿರು ಆಮೆ ಸಿಲುಕಿಕೊಂಡಿತ್ತು.
ಸಾವಿನ ಅಂಚಿನಲ್ಲಿದ್ದ ಆಮೆಯನ್ನು ರಕ್ಷಿಸಿ ಮತ್ತೆ ಸಮುದ್ರಕ್ಕೆ ಬಿಡುತ್ತಿರುವ ವಿಡಿಯೋವನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.ರಾಮನಾಥಪುರಂ ಜಿಲ್ಲೆಯ ಮರಿಯೂರ್ ಪ್ರದೇಶದಲ್ಲಿ ತಮಿಳುನಾಡು ಅರಣ್ಯ ಸಿಬ್ಬಂದಿ ಮತ್ತು ಮೀನುಗಾರರಿಂದ ಹಸಿರು ಆಮೆಯನ್ನು ರಕ್ಷಿಸಿರುವ ಕಾರ್ಯವನ್ನು ಅವರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.ಸಾಹು ಅವರು ಹಂಚಿಕೊಂಡಿರುವ ವಿಡಿಯೋ ಇದೀಗ ಭಾರಿ ವೈರಲ್ ಆಗಿದ್ದು, ಮಿನುಗಾರರ ಕಾರ್ಯಕ್ಕೆ ಆಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ವಿಶ್ವ ವನ್ಯಜೀವಿ ನಿಧಿಯ ಪ್ರಕಾರ, ಹಸಿರು ಆಮೆ ಅತಿದೊಡ್ಡ ಸಮುದ್ರ ಆಮೆಗಳಲ್ಲಿ ಒಂದಾಗಿದೆ ಮತ್ತು ವಿವಿಧ ಜಾತಿಗಳಲ್ಲಿ ಏಕೈಕ ಸಸ್ಯಹಾರಿಯಾಗಿದೆ.
ಅವುಗಳ ಕಾರ್ಟಿಲೆಜï, ಕೊಬ್ಬು, ಮತ್ತು ಅವುಗಳ ಚಿಪ್ಪುಗಳ ಹಸಿರು ಬಣ್ಣದಿಂದಾಗಿ ಅವುಗಳನ್ನು ಹಸಿರು ಆಮೆ ಎಂದು ಕರೆಯಲಾಗುತ್ತದೆ.ಮುಖ್ಯವಾಗಿ ಉಷ್ಣವಲಯದ ಮತ್ತು ಉಪೋಷ್ಣವಲಯದ ನೀರಿನಲ್ಲಿ ಕಂಡುಬರುವ ಹಸಿರು ಆಮೆಗಳು ಆಹಾರದ ಮೈದಾನಗಳು ಮತ್ತು ಅವು ಮೊಟ್ಟೆಯೊಡೆದ ಕಡಲತೀರಗಳ ನಡುವೆ ಬಹಳ ದೂರಕ್ಕೆ ವಲಸೆ ಹೋಗುತ್ತವೆ.
‘ಅಳಿವಿನಂಚಿನಲ್ಲಿರುವ’ ಎಂದು ವರ್ಗೀಕರಿಸಲಾಗಿದೆ,ಅವುಗಳು ತಮ್ಮ ಮೊಟ್ಟೆಗಳನ್ನು ಅತಿಯಾಗಿ ಕೊಯ್ಲು ಮಾಡುವುದು, ವಯಸ್ಕರನ್ನು ಬೇಟೆಯಾಡುವುದು, ಮೀನುಗಾರಿಕೆ ಸಾಧನಗಳಲ್ಲಿ ಸಿಕ್ಕಿಹಾಕಿಕೊಳ್ಳುವುದು ಮತ್ತು ಗೂಡುಕಟ್ಟುವ ಕಡಲತೀರದ ತಾಣಗಳ ನಷ್ಟದಿಂದ ಬೆದರಿಕೆಗೆ ಒಳಗಾಗುತ್ತವೆ.