ಮಾಸಿಕ 6 ಸಾವಿರ ಪಿಂಚಣಿಗೆ ಬೋಳುತಲೆ ಪುರುಷರ ಸಂಘ ಆಗ್ರಹ

ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯ ತಂಗಲ್ಲಪಲ್ಲಿ ಗ್ರಾಮದ ಬೋಳುತಲೆ ಪುರುಷರ ಸಂಘವೊಂದು ಪ್ರತಿ ತಿಂಗಳು 6 ಸಾವಿರ ಪಿಂಚಣಿ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದೆ.
ತಿಂಗಳಿಗೆ 6 ಸಾವಿರ ಪಿಂಚಣಿ ನೀಡಬೇಕು. ಪುರುಷರಿಗೆ ಸಂಕ್ರಾಂತಿ ಉಡುಗೊರೆಯಾಗಿ ಪಿಂಚಣಿ ಘೋಷಿಸಬೇಕು.
ಸರ್ಕಾರ ವೃದ್ಧರು, ವಿಧವೆಯರು, ದೈಹಿಕ ವಿಕಲಚೇತನರು ಮತ್ತು ಇತರರಿಗೆ ಪಿಂಚಣಿ ನೀಡುತ್ತಿದೆ. ಅದರಂತೆ ನಮ್ಮ ಮನವಿಯನ್ನೂ ಗಂಭೀರವಾಗಿ ಪರಿಗಣಿಸಬೇಕು ಎಂದು ಬೋಳುತಲೆ ಪುರುಷರ ಸಂಘ ತೆಲಂಗಾಣ ಸರ್ಕಾರಕ್ಕೆ ಮನವಿ ಮಾಡಿದೆ.
ತಲೆಯಲ್ಲಿ ಕೂದಲು ಇಲ್ಲದೇ ಸಾಕಷ್ಟು ಮುಜುಗರ ಅನುಭವಿಸುತ್ತಿದ್ದೇವೆ. ಕೆಲವರು ನಮ್ಮನ್ನ ನೋಡಿ ಅಪಹಾಸ್ಯ ಮಾಡ್ತಾರೆ. ಇದರಿಂದ ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದೇವೆ.
ಆದ್ದರಿಂದ ಸರ್ಕಾರ ನಮ್ಮ ಬಗ್ಗೆ ವಿಶೇಷವಾಗಿ ಗಮನಹರಿಸಬೇಕು ಎಂದು ಕೋರಿದೆ. ಜನವರಿ 5ರಂದೇ ಬೋಳುತಲೆ ಪುರುಷರ ಸಂಘ ಅನೌಪಚಾರಿಕ ಸಭೆ ನಡೆಸಿ ಈ ಬಗ್ಗೆ ಚರ್ಚಿಸಿದೆ. ಸಂಕ್ರಾಂತಿ ನಂತರ ಮತ್ತೊಂದು ಸಭೆ ನಡೆಸಲು ನಿರ್ಧರಿಸಿದೆ.