ಮಾಸಾಶನ ೫ ಲಕ್ಷ ಅನರ್ಹರ ರದ್ದು

ಮಾಸಾಶನ ಯೋಜನೆಯಲ್ಲಿ ಕಳೆದ ಎರಡು ವರ್ಷದಲ್ಲಿ ೫ ಲಕ್ಷ ಅನರ್ಹರನ್ನು ಗುರುತಿಸಿ, ರದ್ದು ಪಡಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿಂದು ಸದಸ್ಯ ಶಶೀಲ್ ನಮೋಶಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರ ವೃದ್ಧಾಪ್ಯ, ವಿಧವಾವೇತನ, ವಿಶೇಷ ಚೇತನರು ಸೇರಿ ಹಲವು ವರ್ಗಗಳಿಗೆ ವಿವಿಧ ಯೋಜನೆಗಳಡಿ ಸುಮಾರು ೯ ಸಾವಿರ ಕೋಟಿ ರೂಪಾಯಿಗಳಷ್ಟು ಮಾಶಾಸನ ನೀಡುತ್ತಿದೆ.
ಈ ಮೊದಲು ಅಂಚೆ ಇಲಾಖೆ ಸಿಬ್ಬಂದಿಗಳ ಮೂಲಕ ಮಾಸಾಶನ ತಲುಪಿಸಲಾಗುತ್ತಿತ್ತು. ಈಗ ಆ ಪದ್ಧತಿಯನ್ನು ಬದಲಾವಣೆ ಮಾಡಲಾಗಿದೆ ಎಂದರು.ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪ್ರತಿ ತಿಂಗಳ ೨೫ರಿಂದ ಹಣ ವರ್ಗಾವಣೆ ಮಾಡಲಾಗುತ್ತಿದೆ.
ಎಂಟು ತಿಂಗಳ ಒಳಗೆ ಖಾತೆಯಲ್ಲಿ ವಹಿವಾಟು ನಡೆಯದ್ದಿದ್ದರೆ ಅದನ್ನು ನಿಷ್ಕ್ರೀಯ ಖಾತೆ ಎಂದು ಪರಿಗಣಿಸಲಾಗುವುದು ಎಂದು ಹೇಳಿದರು.ಫಲಾನುಭವಿಗಳ ಆಧಾರ್ ಸಂಖೆಯನ್ನು ಯೋಜನೆಗೆ ಸಂಪರ್ಕಿಸಲಾಗಿದೆ. ಐದು ಲಕ್ಷ ನಕಲಿ ಫಲಾನುಭವಿಗಳನ್ನು ತೆಗೆದು ಹಾಕಿದ್ದರಿಂದ ಸರ್ಕಾರಕ್ಕೆ ೪೫೦ ಕೋಟಿ ರೂಪಾಯಿಯ? ಹಣ ಉಳಿತಾಯವಾಗಿದೆ.
ಅದರ ಪರಿಣಾಮ ೫೭೯೫೭ ಜನರಿಗೆ ಹೊಸದಾಗಿ ಮಾಸಾಶನ ನೀಡಲಾಗುತ್ತಿದೆ ಎಂದು ತಿಳಿಸಿದರು.ಕಂದಾಯ ಇಲಾಖೆ ಮಾಸಾಶನಕ್ಕಾಗಿಯೇ ಪ್ರತ್ಯೇಕ ಸಹಾಯವಾಣಿ ಆರಂಭಿಸಿದೆ. ಅಲ್ಲಿಗೆ ಕರೆ ಮಾಡಿದರೆ ಸಾಕು ಗ್ರಾಮ ಲೆಕ್ಕಿಗರು ಸ್ಥಳಕ್ಕೆ ಹೋಗಿ ಫಲಾನುಭವಿಯ ಭಾವಚಿತ್ರ ತೆಗೆದುಕೊಂಡು, ಆಧಾರ್ ಸಂಖ್ಯೆ ಪಡೆದು ಮಾಸಾಶನ ಮಂಜೂರು ಮಾಡುತ್ತಾರೆ.
ಅಧಿಕಾರಿಗಳು ತಪ್ಪು ಮಾಡಿದರೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.ಇದಕ್ಕೂ ಮುನ್ನ ಶಶೀಲ್ ನಮೋಶಿ ಪ್ರಸ್ತಾಪಿಸಿ, ೨೦೨೦ರ ಮೇ ತಿಂಗಳ ೧೫ರಿಂದ ಹೊಸ ನಿಯಮಗಳಿಂದ ಕೆಲವರಿಗೆ ಮಾಸಾಶನ ಸಿಗುತ್ತಿಲ್ಲ. ಅಕಾರಿಗಳು ಫಲಾನುಭವಿಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆಕ್ಷೇಪಿಸಿದರು.