
ವೈದ್ಯೋ ನಾರಾಯಣ ಹರಿ ಎಂದು ವೈದ್ಯರನ್ನು ದೇವರ ಸಮಾನರೆಂದು ನೋಡುತ್ತೇವೆ. ಆದರೆ, ಇಂದು ಕೆಲ ವೈದ್ಯರಲ್ಲಿ ಮಾನವೀಯತೆ ಮರೆಯಾಗುತ್ತಿದೆ. ಸತತ 12 ಗಂಟೆಗಳ ಕಾಲ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರೂ ರೋಗಿಯ ನೆರವಿಗೆ ಯಾವ ವೈದ್ಯರೂ ಬರದಿರುವುದು ವಿಪರ್ಯಾಸ.
ರಾಜ್ಯದ ನಾಲ್ಕು ಆಸ್ಪತ್ರೆಗಳಿಗೆ ಸುತ್ತಿದರೂ ಚಿಕಿತ್ಸೆ ಸಿಗದೆ ರೋಗಿ ಪರದಾಡಿದಂತಹ ಘಟನೆ ನಡೆದಿದೆ.
ಕೊಡಗಿನ ಕೆಂಪೆಬೆಲ್ಲೂರು ಬಳಿ ಕುಮಾರ್ (27) ಎಂಬುವವರಿಗೆ ಅಪಘಾತವಾಗಿ ಬ್ರೈನ್ ಡ್ಯಾಮೇಜ್ ಆಗಿತ್ತು. ಕೂಡಲೇ ಅವರನ್ನು ಕೊಡಗಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ರಾತ್ರಿ 1 ಗಂಟೆವರೆಗೂ ಕಾಯಿಸಿ ನಂತರ ಮೈಸೂರು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲು ವೈದ್ಯರು ಸೂಚಿಸಿದರು.ನಂತರ ಮೈಸೂರಿಗೆ ಕರೆದುಕೊಂಡು ಹೋದರು.
ಅಲ್ಲೂ ಕೂಡ ಚಿಕಿತ್ಸೆ ನೀಡದೆ ಬೆಂಗಳೂರಿನ ನಿಮ್ಹಾನ್ಸ್ಗೆ ಶಿಫ್ಟ್ ಮಾಡುವಂತೆ ವೈದ್ಯರು ತಿಳಿಸಿದರು.ನಿಮ್ಹಾನ್ಸ್ಗೆ ಕರೆದುಕೊಂಡು ಬಂದಾಗ ಇಲ್ಲಿ ಆಗುವುದಿಲ್ಲ, ಬ್ರೈನ್ ಡ್ಯಾಮೇಜ್ ಆಗಿದೆ.
ಹಾಗಾಗಿ ವಿಕ್ಟೋರಿಯಾ ಟ್ರಾಮಾ ಕೇರ್ಗೆ ಕರೆದುಕೊಂಡು ಹೋಗುವಂತೆ ಸೂಚನೆ ನೀಡಿದರು.ಅಲ್ಲಿಗೆ ಆ್ಯಂಬುಲೆನ್ಸ್ ಮುಖಾಂತರ ಕರೆದುಕೊಂಡ ಹೋದರೂ ಕೂಡ ಸೂಕ್ತ ಸಮಯಕ್ಕೆ ಚಿಕಿತ್ಸೆ ನೀಡದೆ ಸತಾಯಿಸಲಾಯಿತು.
ಬೆಳಗ್ಗೆ 7.30 ರಿಂದ ವಿಕ್ಟೋರಿಯಾ ಟ್ರಾಮಾ ಸೆಂಟರ್ ಮುಂದೆ ಆ್ಯಂಬುಲೆನ್ಸ್ನಲ್ಲೇ ಕುಮಾರ್ ಒತ್ತಾಡುತ್ತಿದ್ದರೂ ಚಿಕಿತ್ಸೆಗೆ ದಾಖಲು ಮಾಡಿಕೊಳ್ಳಲಿಲ್ಲ.
ವೈದ್ಯರ ನಡೆಗೆ ಭಾರೀ ಟೀಕೆಗಳು, ಆಕ್ರೋಶಗಳು ವ್ಯಕ್ತವಾಗುತ್ತಿದ್ದು, ವೈದ್ಯರನ್ನು ನಾವು ದೇವರೆಂದು ಭಾವಿಸಿದ್ದೇವೆ. ಅವರೇ ನಮ್ಮ ಕಷ್ಟಗಳಿಗೆ ಸ್ಪಂದಿಸದಿದ್ದರೆ ಹೇಗೆ ಎಂದು ಸಂಬಂಕರು ಆಕ್ರೋಶ ಹೊರಹಾಕಿದರು.