
ಪಾಕಿಸ್ತಾನದಿಂದ ಮಾದಕ ವಸ್ತುಗಳನ್ನು ಭಾರತದೊಳಗೆ ಕಳ್ಳಸಾಗಣೆ ಮಾಡುವ ಪ್ರಯತ್ನವನ್ನು ಬಿಎಸ್ಎಫ್ ಪಡೆಗಳು ವಿಫಲಗೊಳಿಸಿದೆ.
ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲಾಯಲ್ಲಿ ಇಂದು ಮುಂಜಾನೆ ಭಾರತದೊಳಗೆ ನುಗ್ಗುತ್ತಿದ್ದ ಪಾಕಿಸ್ತಾನಿ ಒಳನುಸುಳುಕೋರನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಜಾನೆ ಅಂತಾರಾಷ್ಟ್ರೀಯ ಗಡಿಯ ಚಿಲ್ಲಿಯಾರಿ ಗಡಿ ಹೊರ ಠಾಣೆ ಬಳಿ ಚೀಲವನ್ನು ಹೊತ್ತುಕೊಂಡಿದ್ದ ವ್ಯಕ್ತಿಯೊಬ್ಬನ ಅನುಮಾನಾಸ್ಪದ ಚಲನವಲನಗಳನ್ನು ಗಮನಿಸಿ ಗಡಿ ರಕ್ಷಣಾ ಪಡೆ ಎಚ್ಚೆತ್ತು ಗುಂಡು ಹಾರಿಸಿದೆ.
ಗುಂಡೇಟಿನಿಂದ ನುಸುಳುತ್ತಿದ್ದ ವ್ಯಕ್ತಿಗೆ ಗಾಯಗಳಾಗಿವೆ ನಂತರ ಶೋಧ ಕಾರ್ಯಾಚರಣೆಯ ನಡೆಸಿದಾಗ ಸುಮಾರು ಎಂಟು ಕೆಜಿ ಮಾದಕವಸ್ತುಗಳನ್ನು ಹೊಂದಿರುವ ಎಂಟು ಪ್ಯಾಕೆಟ್‍ಗಳು ಪತ್ತೆಯಾಗಿದೆ.
ಅದು ಹೆರಾಯಿನ್ ಆಗಿರಬಹುದು ಎಂದು ಹೇಳಲಾಗುತ್ತಿದೆ. ಓಟ್ಟಾರೆ ಬಿಎಸ್‍ಎಫ್ ಪಡೆಗಳು ಮಾದಕ ದ್ರವ್ಯ ಕಳ್ಳಸಾಗಾಣಿಕೆಯನ್ನು ತಡೆದಿದೆ.