ಮಾಂಸಸೇವಿಸಿ ದೇವಾಲಯಕ್ಕೆ ತೆರಳಿದ ಸಿದ್ದು

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗು ಭೇಟಿ ವೇಳೆಯಲ್ಲಿ ಮಾಂಸ ತಿಂದು ಬಳಿಕ ದೇವಸ್ಥಾನಕ್ಕೆ ಹೋಗಿದ್ದರು ಎಂಬ ಸುದ್ದಿ ವಿವಾದಕ್ಕೆ ಕಾರಣವಾಗಿದೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಡಿಕೇರಿಗೆ ಭೇಟಿ ನೀಡಿದ್ದ ವೇಳೆ ಮಾಜಿ ವಿಧಾನಸಭಾ ಸದಸ್ಯ ವೀಣಾ ಅಚ್ಚಯ್ಯ ಅವರು ನಾಟಿಕೋಳಿ ಸಾರು, ರಾಗಿ ಮುದ್ದೆ ಭೋಜನ ವ್ಯವಸ್ಥೆ ಮಾಡಿದ್ದರು.
ಅಂದು ಮಧ್ಯಾಹ್ನ ಸಿದ್ದರಾಮಯ್ಯರವರು ಕೋಳಿ ಸಾರಿನಲ್ಲಿ ಊಟ ಮಾಡಿ ಸಂಜೆ ಕೂಡ್ಲಿ ಪೇಟೆಯ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಫೋಟೊ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಹಿಂದೆ ಸಹ ಸಿದ್ದರಾಮಯ್ಯರವರು ಮಂಗಳೂರು ಭೇಟಿ ವೇಳೆ ಧರ್ಮ ಸ್ಥಳಕ್ಕೆ ಮೀನು ಸಾರು ತಿಂದು ದೇವಸ್ಥಾನಕ್ಕೆ ಹೋಗಿದ್ದು ವಿವಾದಕ್ಕೆ ಕಾರಣವಾಗಿತ್ತು.ಎಸ್‌ಟಿಎಸ್ ಟೀಕೆಕೊಡಗು ಭೇಟಿ ವೇಳೆ ಸಿದ್ದರಾಮಯ್ಯರವರು ಕೋಳಿ ತಿಂದು ದೇವಸ್ಥಾನಕ್ಕೆ ಭೇಟಿ ನೀಡಿರುವ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಯಾರು ಮಾಂಸ ತಿಂದು ಎಲ್ಲಿ ಬೇಕಾದರು ಹೋಗಲಿ ಹಿಂದೂ ಪದ್ಧತಿಯಲ್ಲಿ ಮಾಂಸ ತಿಂದು ಯಾರೂ ದೇವಸ್ಥಾನಕ್ಕೆ ಹೋಗಲ್ಲ.
ಅಷ್ಟೇ ಏಕೆ ದೇವಸ್ಥಾನದ ಕಾಂಪೌಂಡ್ ಬಳಿಯೂ ಹೋಗಲ್ಲ ಎಂದು ಸಿದ್ದರಾಮಯ್ಯರವರ ನಡೆಯನ್ನು ಟೀಕಿಸಿದ್ದಾರೆ.ಈ ಹಿಂದೆ ಸಹ ಸಿದ್ದರಾಮಯ್ಯರವರು ಧರ್ಮಸ್ಥಳದಲ್ಲಿ ಈ ರೀತಿ ನಡೆದುಕೊಂಡಿದ್ದರು.
ಏನಾಗುತ್ತದೆ ಎಂಬ ಭಾವನೆ ಅವರದು, ಎಲ್ಲವನ್ನೂ ದೇವರಿಗೆ ಬಿಡೋಣ ಎಂದರು.