
ತಾವು ಪೊಲೀಸರೆಂದು ಹಣಕ್ಕಾಗಿ ರಿಯಲ್‍ಎಸ್ಟೇಟ್ ವ್ಯವಹಾರ ನಡೆಸುವ ಮಹಿಳೆ ಮತ್ತು ಮತ್ತೊಬ್ಬ ವ್ಯಕ್ತಿಯನ್ನು ಅಪಹರಣ ಮಾಡಿ ಹೈದರಾಬಾದ್‍ನಲ್ಲಿ ಅಕ್ರಮವಾಗಿ ಕೂಡಿಟ್ಟು ಹಣ ವಸೂಲಿ ಮಾಡಿ ಪ್ರಾಣ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಗರದ ಬ್ಯಾಟರಾಯನಪುರ ಠಾಣೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಳೆದ ಆ.19ರಂದು ಮಧ್ಯಾಹ್ನ ಕೆ.ಆರ್.ಪುರಂನ ವಿನಾಯನಕಲೇಔಟ್‍ನ ವಸಂತ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ತಾವು ಸಮಾಜ ಸೇವಕಿಯಾಗಿ ಕೆಲಸ ಮಾಡುತ್ತಿದ್ದು, ಶಿವಾರೆಡ್ಡಿ ಅವರು ಎರಡು ವರ್ಷಗಳಿಂದ ಪರಿಚಯಸ್ಥರು, ಮನೆ, ಜಮೀನು ಕೊಡಿಸುವ ಬ್ರೋಕರ್ ಕೆಲಸ ಮಾಡಿಕೊಂಡಿರುತ್ತಾರೆ.
ನಾನು ಅವರೊಂದಿಗೆ ಸೇರಿ ರಿಯಲ್‍ಎಸ್ಟೇಟ್ ವ್ಯವಹಾರ ಮಾಡುತ್ತಿದುದ್ದಾಗಿ ತಿಳಿಸಿದ್ದಾರೆ.ಹರೀಶ್ ಎಂಬುವರು ಪದೇ ಪದೇ ಫೋನ್ ಮಾಡಿ ಮಾತನಾಡುತ್ತಿದ್ದರು.
ಆ.16ರಂದು ಸಂಜೆ 6 ಗಂಟೆಗೆ ಕರೆ ಮಾಡಿ ಜಮೀನಿನ ವಿಷಯ ಮಾತನಾಡಬೇಕು ನೀವಿಬ್ಬರು ಬನ್ನಿ ಎಂದು ಮೈಸೂರು ರಸ್ತೆಯ ಉಪನಗರ ಬಸ್ ನಿಲ್ದಾಣದ ಹೋಟೆಲ್ ಒಂದಕ್ಕೆ ಕರೆದಿದ್ದರು.
7 ಗಂಟೆಗೆ ನಾವು ಹೋದಾಗ ಹೋಟೆಲ್ ಮುಂಭಾಗ ನಿಂತಿದ್ದ ಹರೀಶ್, ಆತನ ಸ್ನೇಹಿತರಾದ ಪ್ರಸಾದ್, ಸತ್ಯನಾರಾಯಣ ರಾಜು ಹಾಗೂ ಇತರ ಮೂವರು ಇಲ್ಲಿ ಬೇಡ ಬೇರೆ ಕಡೆ ಮಾತನಾಡೋಣ ಎಂದು ಹೇಳಿ ಅಲ್ಲಿಂದ ನಮ್ಮನ್ನು ಕಾರಿನಲ್ಲಿ ಕೂರಿಸಿಕೊಂಡು ದೇವನಹಳ್ಳಿ-ಚಿಕ್ಕಬಳ್ಳಾಪುರ ಕಡೆಗೆ ಹೋಗುತ್ತಿದ್ದರು.
ನಾವು ಪ್ರಶ್ನಿಸಿದಾಗ ನಿಮಗಾಗಿ ತುಂಬಾ ದಿನದಿಂದ ಕಾಯುತ್ತಿದ್ದೆವು. ಇಂದು ಸಿಕ್ಕಿದ್ದೀರಾ. ನಾವು ಕರೆದುಕೊಂಡು ಹೋಗುವ ಸ್ಥಳಕ್ಕೆ ಬರಬೇಕು. ಇಲ್ಲವಾದರೆ ಕೊಲ್ಲುತ್ತೇವೆ ಎಂದು ಬೆದರಿಸಿದರು.
ಮರು ದಿನ ಆಂಧ್ರಪ್ರದೇಶದ ಹೈಟೆಕ್ ಸಿಟಿಯಲ್ಲಿರುವ ಜಿಮ್‍ವೊಂದರ 11ನೆ ಮಹಡಿಯ ರೂಂಗೆ ಕರೆದುಕೊಂಡು ಹೋಗಿ ನಮ್ಮನ್ನು ಕೂಡಿಹಾಕಿದರು.
ತಮ್ಮನ್ನು ತಾವು ಪೆÇಲೀಸರು ಎಂದು ಪರಿಚಯಿಸಿಕೊಂಡ ಅವರು, ಶಿವಾರೆಡ್ಡಿ ಕೈಗೆ ಬೇಡಿ ಹಾಕಿದರು.50 ಲಕ್ಷ ಕೊಡಬೇಕೆಂದು ಬೆದರಿಸಿದರು. ಹಣ ಇಲ್ಲ ಎಂದಾಗ ಹೊಂದಿಸಿ ತರುವಂತೆ ನನ್ನನ್ನು ಬಸ್‍ನಲ್ಲಿ ಬೆಂಗಳೂರಿಗೆ ಕಳುಹಿಸಿದರು.
ನಾನು ಸ್ನೇಹಿತರ ಬಳಿ ಒಂದೂವರೆ ಲಕ್ಷ ಸಾಲ ಮಾಡಿ, ಚಿನ್ನಾಭರಣಗಳನ್ನು ಗಿರವಿ ಇಟ್ಟು 9.51 ಲಕ್ಷ ಹೊಂದಿಸಿದೆ.
ಒಟ್ಟು 11 ಲಕ್ಷ ರೂ.ಗಳನ್ನು ಹೋಗಿ ಕೊಟ್ಟು ಬಂದಿದ್ದೇನೆ. ಬಳಿಕ ನಮ್ಮನ್ನು ಬಿಡುಗಡೆ ಮಾಡಿ ವಿಷಯ ಯಾರಿಗೂ ತಿಳಿಸದಂತೆ ಪ್ರಾಣ ಬೆದರಿಕೆ ಹಾಕಲಾಗಿತ್ತು ಎಂದು ದೂರಿದರು.
ಪ್ರಕರಣ ಭೇದಿಸಿದ ಪೆÇಲೀಸರು ತನಿಖೆ ನಡೆಸಿ ಆರೋಪಿಗಳಾದ ಹೈದರಾಬಾದ್‍ನ ಪ್ರಸಾದ್, ಸತ್ಯ ನಾರಾಯಣರಾಜು, ಮಹಾರಾಷ್ಟ್ರದ ಶ್ರೀಧರ್, ಕಿರಣ್ ಮೋರೆ, ನಾಗೋರಾವ್‍ನನ್ನು ಬಂಸಿದ್ದಾರೆ. ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ.
ಈ ಆರೋಪಿಗಳ ತಂಡ ಇದೇ ರೀತಿ 2-3 ಪ್ರಕರಣಗಳನ್ನು ನಡೆಸಿದ್ದು, ತಮ್ಮನ್ನು ತಾವು ಪೊಲೀಸರು ಎಂದು ಪರಿಚಯಿಸಿಕೊಂಡು ಉದ್ಯಮಿಗಳು, ಶ್ರೀಮಂತರನ್ನು ಅಪಹರಣ ಮಾಡಿ ಹಣ ವಸೂಲಿ ಮಾಡಿರುವ ಆರೋಪಗಳಿವೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.