ರಾಜ್ಯ

ಮಹಿಳೆಯ ಮೇಲಾಯ್ತಾ ನಾಗದೇವರ ಆಹ್ವಾವನೆ? ಇಲ್ಲೊಂದು ಅಚ್ಚರಿಯ ಘಟನೆ

ಶಿವಮೊಗ್ಗ: ಇವತ್ತು ಸ್ನೇಕ್​ ಕಿರಣ್​ ಸರ್ಪವೊಂದನ್ನ ಹಿಡಿಯಲು ಹೋಗಿದ್ದರು, ಈ ವೇಳೆ ನಡೆದ ಘಟನೆ ನಿಜಕ್ಕೂ ಅಚ್ಚರಿ ಮೂಡಿಸುತ್ತಿದೆ.

ಶಿವಮೊಗ್ಗದ ಹೊನ್ನಾಳಿ ರಸ್ತೆಯ ಬಳಿ ಬರುವ ನರ್ಸರಿವೊಂದರಲ್ಲಿ ಮರಿನಾಗರ ಕಾಣಿಸಿಕೊಂಡಿತ್ತು ಎಂಬ ಸುದ್ದಿಯೊಂದು ಸ್ನೇಕ್​​ ಕಿರಣ್​ಗೆ ಇವತ್ತು ಬೆಳಗ್ಗೆ ಹನ್ನೊಂದು ಗಂಟೆ ಸುಮಾರಿಗೆ ಬಂದಿತ್ತು.

ಈ ವೇಳೆ ತಡಮಾಡದೇ ಅಲ್ಲಿಗೆ ತೆರಳಿದ ಸ್ನೇಕ್​ ಕಿರಣ್​ ಗೆ ಆದ ಅನುಭವವೇ ಬೇರೆಯಾಗಿತ್ತು. ಸ್ನೇಕ್​ ಕಿರಣ್​ ಜನರು ತೋರಿಸಿದ್ದ ದಾರಿಯಲ್ಲಿ ಹೋಗಿ ಅಲ್ಲಿದ್ದ ಮರಿನಾಗರವನ್ನು ಹಿಡಿದಿದ್ದರು.

ಅದನ್ನು ವಿಡಿಯೋದಲ್ಲಿ ತೋರಿಸಿ ಜನರ ಖಾತರಿಯನ್ನು ಪಡೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಅಲ್ಲಿದ್ದ ಕೂಲಿಕಾರ್ಮಿಕೆಯೊಬ್ಬರ ಮೈಮೇಲೆ ದೇವರು ಬಂದಿದೆ.

ಇದಕ್ಕಿದ್ದಂತೆ ಕಿರುಚುತ್ತಾ ಆವೇಷ ಭರಿತವಾಗಿ ಆಡಿದ ಮಹಿಳೆ ತನ್ನನ್ನು ಮುಟ್ಟುಲು ಸಹ ಯಾರಿಗೂ ಬಿಟ್ಟಿಲ್ಲ.

ಇದರ ಬೆನ್ನಲ್ಲೆ ಆಕೆಯ ಬಳಿ ಹೋಗಿದ್ದ ಮತ್ತೊಬ್ಬ ಮಹಿಳೆಯ ಮೇಲೂ ನಾಗದೇವರು ಆಹ್ವಾವನೆ ಆದಂತೆ ಕಂಡಿದೆ.

ಇಬ್ಬರು ಮಹಿಳೆಯರು ಕೆಲಕಾಲ ಆವೇಷದಲ್ಲಿಯೇ ಮಾತನಾಡಿದ್ದಾರೆ. ಅವರನ್ನು ಸಂತೈಸಲು ಅಲ್ಲಿದ್ದವರಿಗೆ ಸಾಧ್ಯವಾಗಲಿಲ್ಲ.

ಈ ವೇಳೆ ಆ ಮಹಿಳೆಯೇ ಹಾವನ್ನು ತೆಗೆದುಕೊಂಡು ಹೋಗಬೇಡಿ, ಅಲ್ಲಿಯೇ ಬಿಡಿ ಎಂದಾಗ, ಸ್ನೇಕ್​ ಕಿರಣ್​ ತಕ್ಷಣ ಹತ್ತಿರದಲ್ಲಿಯೇ ಇದ್ದ ಅರಣ್ಯದ ಜಾಗದಲ್ಲಿ ಹಾವನ್ನು ಬಿಟ್ಟಿದ್ದಾರೆ.

ಹಾವನ್ನು ಬಿಟ್ಟು ಬಂದು, ಆವೇಷದಲ್ಲಿದ್ದ ಮಹಿಳೆಯ ಬಳಿ ಹಾವನ್ನು ಸುರಕ್ಷಿತವಾಗಿ ಅದಕ್ಕೇನು ತೊಂದರೆ ಕೊಟ್ಟಿಲ್ಲ. ಜನರು ಕರೆದಿದ್ದರು, ಹಾವಿನ ರಕ್ಷಣೆ ನನ್ನ ಕರ್ತವ್ಯ ಎಂದಿದ್ದಾರೆ.

ಆಗ ಮಹಿಳೆ ಕರ್ಪೂರವೊಂದನ್ನು ಕೊಡಲು ಹೇಳಿ, ಅದಕ್ಕೆ ಬೆಂಕಿ ಬೆಳಗಿಸಿಕೊಂಡು ನುಂಗಿ, ಕೆಳಕ್ಕೆ ಬಿದ್ದಿದ್ದಾರೆ. ಇದಿಷ್ಟು ಘಟನೆಯನ್ನು ನೋಡಿದ ಸ್ನೇಕ್​ ಕಿರಣ್​ ಗೆ ಅಚ್ಚರಿಯಾಗಿದೆ.

ಅಲ್ಲದೆ ಅಲ್ಲಿದ್ದವರು ಸಹ ಅಚ್ಚರಿ ಪಟ್ಟು ಹಾವನ್ನು ಹಿಡಿಯಬಾರದು ಎಂದೇ ನಾಗ ದೇವರು ಅಡ್ಡಗಟ್ಟಿದೆ ಎಂದು ಮಾತನಾಡಿಕೊಂಡಿದ್ದಾರೆ.

ದೈವಿಕ ಮಹಿಮೆಯ ರೀತಿಯಲ್ಲಿ ನೋಡುವುದಾದರೆ, ಅದು ಶಕ್ತಿಸ್ಥಳವೂ ಆಗಿದೆ. ಏಕೆಂದರೆ ಕೋಟೆ ಮಾರಿಕಾಂಬಾ ದೇವಿಯ ವನ ಅಲ್ಲಿಯೇ ಇದೆ.

ಇದನ್ನ ಅರಿಯುತ್ತಲೇ ಸ್ನೇಕ್​ ಕಿರಣ್​ ಕೋಟೆ ಮಾರಿಕಾಂಬಾ ದೇವಿ ಜಾಗವಿರುವ ಸ್ಥಳಕ್ಕೆ ಹೋಗಿ, ಕೈಮುಗಿದು ಆಶೀರ್ವಾದ ಪಡೆದಿದ್ದಾರೆ.

ಇದಿಷ್ಟು ಘಟನೆಗಳ ಬಗ್ಗೆ ಮಾತನಾಡಿದ ಸ್ನೇಕ್​ ಕಿರಣ್​, ನವರಾತ್ರಿಯ ಸಮಯವಿದು. ನಿಜಕ್ಕೂ ನನಗೆ ಅಮ್ಮನವರೇ ದರ್ಶನ ಕೊಟ್ಟಂತಹ ಅನುಭವವಾಗಿದೆ.

ಸರ್ಪವನ್ನು ನಾವೆಲ್ಲಾ ದೇವರೆಂದು ನಂಬುತ್ತೇವೆ. ಆ ಭಕ್ತಿಯು ಜೊತೆಗಿದ್ದರಷ್ಟೆ, ಅವುಗಳನ್ನು ಸುರಕ್ಷಿತವಾಗಿ ಸಂರಕ್ಷಿಸಬಹುದು. ಇಂತಹದ್ದೊಂದು ಅನುಭವ ಈ ಮೊದಲು ಆಗಿಲಿರಲ್ಲ.

ಎಂದಿನಂತೆ ಎಲ್ಲಾಕಡೆಯಲ್ಲಿಯು ಬರುವ ಕರೆಗಳಂತೆ ಇಲ್ಲಿಗೂ ಬಂದು ಹಾವನ್ನು ಹಿಡಿದಿದ್ದೇನೆ. ಆದರೆ ದೇವರು ಬಂದ ರೀತಿಯಲ್ಲಿ ನಡೆದ ಘಟನೆಗಳು ಎಲ್ಲಾ ತರ್ಕಗಳಿಗೂ ಮೀರಿದ್ದು.ನಮ್ಮ ಅನುಭವಕ್ಕೆ ಎದುರಾಗಿದ್ದನ್ನು ಕಂಡು ಮೂಕವಿಸ್ಮಿತವಾಗಿದ್ದೇನೆ.

ಎಲ್ಲರಿಗೂ ಹೇಳುವುದು ಒಂದೆ, ಹಾವಿನ ಜೊತೆ ಚೆಲ್ಲಾಟ ಬೇಡ. ಅವುಗಳನ್ನು ಸಂರಕ್ಷಿಸಿದರೆ, ದೇವರು ನಮ್ಮನ್ನೂ ಕಾಪಾಡುತ್ತಾನೆ ಎಂಬುದಕ್ಕೆ ಇವತ್ತಿನ ಘಟನೆ ಸಾಕ್ಷಿ ಎಂದಿದ್ದಾರೆ.

ಕೋಟೆ ಮಾರಿಕಾಂಬಾ ವನದ ಗದ್ದಿಗೆ ಸುತ್ತಮುತ್ತಲಿನ ಭಾಗದಲ್ಲಿ ಹಾವಿನ ಆಳ್ವಿಕೆಯಿದೆ. ಅದನ್ನುಆಳಿಕೆ ಹಾವು ಎಂದೇ, ಈ ಭಾಗದಲ್ಲಿ ಕರೆಯುತ್ತಾರೆ.

ನೂರಾರು ವರ್ಷಗಳಿಂದಲು ಒಂದರ ನಂತರ ಅದರ ಸಂತತಿಯ ಹಾವುಗಳು ಇಲ್ಲಿಯೇ ಇವೆ ಎಂಬುದು ಕೋಟೆ ಮಾರಿಕಾಂಬಾ ವಿಸರ್ಜನಾ ವನದ ಬಗ್ಗೆ ತಿಳಿದುಕೊಂಡವರು ಹೇಳುವ ಸತ್ಯ.

ಇನ್ನೂ ಕೋಟೆ ಶ್ರೀ ಮಾರಿಕಾಂಬಾ ದೇವಸ್ಥಾನದ ಸೇವಾಸಮಿತಿಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್​ರವರನ್ನು ಟುಡೆ ತಂಡ ಸಂಪರ್ಕಿಸಿದಾಗ ಕೋಟೆ ಮಾರಿಕಾಂಬಾ ವಿಸರ್ಜನಾ ವನ ಅದು ಪವಿತ್ರ ಸ್ಥಳ.

ಅಲ್ಲಿ ಹಾವುಗಳ ಸರ್ವೆ ಸಾಮಾನ್ಯವಾಗಿ ಇರುತ್ತವೆ. ಅಲ್ಲಿ ಗದ್ದಿಗೆ ಬಳಿ ಸಾಕಷ್ಟು ಜನರು, ರಕ್ತ ಬಲಿ ನೀಡಲು ಸಹ ಹೋಗುತ್ತಾರೆ.

ಆ ಸಂಧರ್ಭದಲ್ಲಿಯು ಹಾವುಗಳು ಕಾಣಸಿಕ್ಕಿವೆ. ಮತ್ತು ಅವುಗಳು ಯಾರಿಗೂ ತೊಂದರೆಕೊಟ್ಟಂತಹ ಉದಾಹರಣೆಗಳಿಲ್ಲ. ಸುತ್ತಮುತ್ತಲಿನ ಜನರು ಕೂಡ ಅಲ್ಲಿರುವ ಗದ್ದಿಗೆ ನಡೆದುಕೊಳ್ಳುತ್ತಾರೆ.

ಆ ಸಂಪ್ರದಾಯ ಮೊದಲಿನಿಂದಲೂ ಅಲ್ಲಿದೆ.ಕೋಟೆ ಮಾರಿಕಾಂಬೆ ದೇವರಿಯ ಮೂರ್ತಿಯನ್ನು ವಿಸರ್ಜನೆ ಮಾಡಿದ ಸ್ಥಳದಲ್ಲಿಯು ಹಾವುಗಳು ಅವುಗಳ ಮೇಲೆ ಕುಳಿತಿರುತ್ತಿದ್ದನ್ನು ಕಂಡಿದ್ದೇವೆ.

ತಲೆಮಾರುಗಳಿಂದ ಪವಿತ್ರ ಸ್ಥಳವಾಗಿದ್ದು, ಅಲ್ಲಿ ದೈವಿಕ ಮಹಿಮೆ ಅಪಾರವಾಗಿದೆ. ಇವತ್ತು ನಡೆದ ಘಟನೆ ಇದಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button