ಮಹಿಳೆಯರಿಗೆ ದೆಹಲಿ ಸುರಕ್ಷಿತವಲ್ಲ ಎಂಬ ಮತ್ತೊಮ್ಮೆ ಸಾಬೀತು

ರಾಷ್ಟ್ರ ರಾಜಧಾನಿ ದೆಹಲಿ ಮಹಿಳೆಯರಿಗೆ ಸುರಕ್ಷಿತವಲ್ಲ ಎನ್ನುವುದು ಮತ್ತೋಮ್ಮೆ ಸಾಬೀತಾಗಿದೆ.ಹೊಸ ವರ್ಷಾಚರಣೆ ಸಂದರ್ಭದಲ್ಲಿ ನಡೆದ ಅಪಘಾತದಲ್ಲಿ ಅಂಜಲಿ ಸಿಂಗ್ ಎನ್ನುವರ ದೇಹ ಕಾರಿಗೆ ಸಿಲುಕಿ ಆಕೆಯ ದೇಹವನ್ನು ಕಾರು 13 ಕಿ.ಮೀ ವರೆಗೆ ಎಳೆದೊಯ್ದಿರುವ ಘಟನೆ ಇಡಿ ರಾಜಧಾನಿಯನ್ನು ಬೆಚ್ಚಿ ಬೀಳಿಸಿದೆ.ತನ್ನ ಸ್ನೇಹಿತೆ ನಿಧಿ ಎಂಬಾಕೆಯೊಂದಿಗೆ ಅಂಜಲಿ ಬೈಕ್‍ನಲ್ಲಿ ತೆರಳುತ್ತಿದ್ದಾಗ ಬಲೆನೋ ಕಾರು ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಹಿಂಬದಿ ಸವಾರರಾಗಿದ್ದ ಅಂಜಲಿ ಸಿಂಗ್ ಅವರ ದೇಹ ಕಾರಿಗೆ ಸಿಲುಕಿಕೊಂಡಿದೆ. ಕುಡಿದ ಮತ್ತಿನಲ್ಲಿದ್ದ ಕಾರಿನಲ್ಲಿದ್ದವರಿಗೆ ಅದು ಗೊತ್ತಾಗದ ಹಿನ್ನಲೆಯಲ್ಲಿ ಆಕೆಯ ದೇಹವನ್ನು 13 ಕಿ.ಮೀ ವರೆಗೆ ಎಳೆದೊಯ್ದಿದೆ.ಹಿಂಬದಿ ಸವಾರರಾಗಿದ್ದ ಅಂಜಲಿ ಸಿಂಗ್ ದೇಹ ಎಳೆದೊಯ್ಯುತ್ತಿದ್ದಂತೆ ನಿ ಏನು ತಿಳಿಯದಂತ ಮನೆಗೆ ತೆರಳಿದ್ದು, ಆಕೆಯನ್ನು ಪೆÇಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಅಪಘಾತಕ್ಕಿಡಾದ ಬೈಕ್‍ನ್ನು ಮೊದಲು ನಿ ಚಲಾಯಿಸುತ್ತಿದ್ದರು ನಂತರ ಅಂಜಲಿಸಿಂಗ್ ಚಲಾಯಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಗೊತ್ತಾಗಿದೆ.ಅಪಘಾತ ಮಾಡಿದ ಕಾರಿನಲ್ಲಿದ್ದ ಐವರು ಪಾನಮತ್ತರಾಗಿದ್ದರು.
ಕಾರಿಗೆ ಮಹಿಳೆ ಸಿಲುಕಿಕೊಂಡಿರುವುದು ಅವರಿಗೆ ತಿಳಿದರಲೇ ಇಲ್ಲ. ಚಾಲಕ ಒಂದು ಬಾರಿ ಚಕ್ರಕ್ಕೆ ಏನೋ ಸಿಲುಕಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದಾಗ ಇತರರು ಏನು ಇಲ್ಲ ನಡಿ ಎಂದು ಆತನನ್ನು ಹುರಿದುಂಬಿಸಿದ ಪರಿಣಾಮವೇ ಅಂಜಲಿ ದೇಹ 13 ಕಿ.ಮೀ ದೂರದವರೆಗೆ ಎಳೆದೊಯ್ಯಲು ಕಾರಣ ಎನ್ನಲಾಗಿದೆ.13 ಕಿ.ಮೀ ಚಲಿಸಿದ ಕಾರು ಕಾಂಜವಾಲಾದಲ್ಲಿ ಯೂ ಟರ್ನ್ ತೆಗೆದುಕೊಳ್ಳುತ್ತಿದ್ದಾಗ ಚಕ್ರದಡಿ ಕೈ ಮಾದರಿಯ ವಸ್ತು ಕಂಡು ಗಾಬರಿಯಿಂದ ಕಾರು ನಿಲ್ಲಿಸಿ ನೋಡಿದಾಗ ಕಾರಿನಡಿ ಯುವತಿಯ ಶವ ಇರುವುದು ಕಂಡುಬಂದ ನಂತರ ಕಾರಿನಲ್ಲಿದ್ದವರು ಕಾರು ಬಿಟ್ಟು ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಂಜಲಿ ದೇಹವನ್ನು ಕಾರು ಎಳೆದೊಯ್ದಿರುವ ದೃಶ್ಯಗಳು ರಸ್ತೆಗಳಲ್ಲಿ ಅಳವಡಿಸಿರುವ ಸಿಸಿ ಟಿವಿಗಳಲ್ಲಿ ಸೆರೆಯಾಗಿದ್ದು ಆ ದೃಶ್ಯಗಳು ಇದೀಗ ಎಲ್ಲೆಡೆ ವೈರಲ್ ಆಗಿದೆ. ಕಾರು ಅಂಜಲಿ ದೇಹವನ್ನು ಎಳೆದೊಯ್ಯವುದನ್ನು ಗಮನಿಸಿದ ದಾರಿ ಹೋಕರು ಕಾರು ನಿಲ್ಲಿಸುವಂತೆ ಕೂಗಿಕೊಂಡರು ಪಾನಮತ್ತರಾಗಿದ್ದ ಐವರಿಗೆ ಅವರು ಕೂಗು ಕೇಳಿಸದಿರುವುದು ದುರಂತವೇ ಸರಿ.