ಮಹಿಳಾ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಕುಡುಕ

ಏರ್ ಇಂಡಿಯಾ ವಿಮಾನದ ಬ್ಯುಸಿನೆಸ್ ಕ್ಲಾಸ್ ಪ್ರಯಾಣಿಕರೊಬ್ಬರು ಕುಡಿದ ಮತ್ತಿನಲ್ಲಿ ಮಹಿಳಾ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಕಳೆದ ನವೆಂಬರ್‍ನಲ್ಲಿ 26 ರಂದು ನ್ಯೂಯಾರ್ಕ್‍ನಿಂದ ದೆಹಲಿಗೆ ಬರುತ್ತಿದ್ದ ವಿಮಾನದ ಬ್ಯುಸಿನೆಸ್ ಕ್ಲಾಸ್‍ನಲ್ಲಿ ಪ್ರಯಾಣಿಸುತ್ತಿದ್ದ 70 ವರ್ಷದ ಪ್ರಯಾಣಿಕರೊಬ್ಬರು ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ್ದಾರೆ.
ಈ ಕುರಿತಂತೆ ಮಹಿಳೆ ನೀಡಿದ ದೂರಿನ ಮೇರೆಗೆ ಅಸಭ್ಯ ಧೋರಣೆ ತೋರಿದ ಪ್ರಯಾಣಿಕನನ್ನು ನೋ ಫ್ಲೈ ಲಿಸ್ಟ್‍ಗೆ ಸೇರಿಸಬಹುದಾಗಿದೆ ಎಂದು ಏರ್‍ಲೈನ್ಸ್ ತಿಳಿಸಿದೆ.ವಿಮಾನದಲ್ಲಿ ಊಟದ ನಂತರ ಮಂದ ಬೆಳಕಿನಲ್ಲಿ ಕುಡಿದ ಮತ್ತಿನಲ್ಲಿದ್ದ 70 ವರ್ಷದ ಪ್ರಯಾಣಿಕ ಟಾಯ್ಲೆಟ್‍ಗೆ ಹೋಗುವ ಬದಲು ಮಹಿಳ ಪ್ರಯಾಣಿಕರಿದ್ದ ಸ್ಥಳಕ್ಕೆ ತೆರಳಲಿಳಿ ಜಿಪ್ ತೆಗೆದು ಮೂತ್ರ ವಿಸರ್ಜನೆ ಮಾಡಿದ್ದಾನೆ.
ಘಟನೆಯಲ್ಲಿ ಆಕೆಯ ಬಟ್ಟೆ, ಬೂಟುಗಳು ಮತ್ತು ಬ್ಯಾಗ್‍ಗಳು ಮೂತ್ರದಿಂದ ತೋಯ್ದು ಹೋಗಿತ್ತು.ಮೂತ್ರ ವಿರ್ಸಜನೆ ಮಾಡಿದ ನಂತರವೂ ಕದಲದೆ ನಿಂತಿದ್ದ ಕುಡುಕ ಪ್ರಯಾಣಿಕನನ್ನು ಬೇರೆ ಪ್ರಯಾಣಿಕರು ಬಲವಂತವಾಗಿ ಆತನ ಆಸನಕ್ಕೆ ಕಳುಹಿಸಬೇಕಾಯಿತು.ಮೂತ್ರ ಸಿಂಪಡಣೆ ಮಾಡಿಸಿಕೊಂಡ ಮಹಿಳೆ ಟಾಟಾ ಗ್ರೂಪ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರಿಗೆ ಪತ್ರ ಬರೆದ ನಂತರ ಕುಡುಕ ಪ್ರಯಾಣಿಕನನ್ನು ನೊ ಫ್ಲೈ ಲಿಸ್ಟ್‍ಗೆ ಸೇರಿಸಲು ವಿಮಾನಯಾನ ಸಂಸ್ಥೆ ಕ್ರಮ ಕೈಗೊಂಡಿದೆ ಎಂದು ತಿಳಿದು ಬಂದಿದೆ.
ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಯ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ಆತನ ವಿರುದ್ಧ ಕೈಗೊಂಡಿರುವ ನೋ ಫ್ಲೈ ಲಿಸ್ಟ್‍ಗೆ ಸೇರಿಸುವ ಅಂತೀಮ ತೀರ್ಮಾನವನ್ನು ಸರ್ಕಾರ ಇನ್ನಷ್ಟೆ ನಿರ್ಧರಿಸಬೇಕಿದೆ.
ಮೂತ್ರ ಸಿಂಪಡಣೆ ಮಾಡಿಸಿಕೊಂಡ ಮಹಿಳೆಗೆ ಬೇರೆ ಆಸನ ಕೊಡಿಸುವಲ್ಲಿ ವಿಫಲರಾಗಿದ್ದ ಸಿಬ್ಬಂದಿಗಳು ಹಾಗೂ ಕುಡುಕ ಪ್ರಯಾಣಿಕ ವಿಮಾನದಿಂದ ಇಳಿದ ನಂತರ ಆತನ ವಿರುದ್ಧ ಯಾವುದೆ ಕ್ರಮ ಕೈಗೊಳ್ಳದೆ ಹಾಗೇ ಹೋಗಲು ಬಿಟ್ಟವರ ವಿರುದ್ಧವೂ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ.