
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್‍ನ 55ನೇ ವಾರ್ಡ್‍ಗೆ ಕರ್ನಾಟಕ ರತ್ನ ಪುನೀತ್ ರಾಜ್‍ಕುಮಾರ್ ಹೆಸರಿಟ್ಟಿರೋದು ಸಂತೋಷ ತಂದಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಶಂಕರಮಠ ವಾರ್ಡ್‍ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮಕ್ಕೆ ಬೊಮ್ಮಾಯಿ, ಸಚಿವರಾದ ಗೋಪಾಲಯ್ಯ, ಮುನಿರತ್ನ, ಭೈರತಿ ಬಸವರಾಜ್ ಭಾಗಿಯಾಗಿದ್ದರು. ಬೊಮ್ಮಾಯಿ ಅವರು ಮೇಲ್ಸೇತುವೆ ಕಾಮಗಾರಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿ, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಸ್ಲಂ-ಬೋರ್ಡ್ ಅಡಿ ನಿರ್ಮಿಸಿರುವ ಮನೆಗಳ ಹಕ್ಕು ಪತ್ರ ವಿತರಿಸಿದರು.

ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೈಸೂರು ರಸ್ತೆ ಮತ್ತು ತುಮಕೂರು ರಸ್ತೆ ಜೋಡಿಸುವ 11 ಕಿ.ಮೀ ಉದ್ದದ ಎಲಿವೇಟೆಡ್ ಕಾರಿಡಾರ್ ನಿರ್ಮಿಸಲಾಗುತ್ತಿದೆ. ಅಲ್ಲದೇ ಬಹಳ ದಿನಗಳಿಂದ ಅಭಿಮಾನಿಗಳ ಬೇಡಿಕೆ ಮೇರೆಗೆ 55ನೇ ವಾರ್ಡ್‍ಗೆ ಪುನೀತ್ ರಾಜ್‍ಕುಮಾರ್ ಹೆಸರು ಇಡಲಾಗಿದೆ. ಈ ವಾರ್ಡ್‍ಗೆ ಅಪ್ಪು ಹೆಸರಿಟ್ಟಿರೋದು ಸಂತೋಷ ತಂದಿದೆ. ಬೆಂಗಳೂರಿಗೆ ಅಮೃತ ನಗರೋತ್ಥಾನ ಯೋಜನೆಯಡಿ 6 ಸಾವಿರ ಕೋಟಿ ರೂ. ಅನುದಾನ ಕೊಡಲಾಗಿದೆ. ನಗರದ ಮೂಲಭೂತ ಸೌಕರ್ಯಗಳಿಗೆ ನಮ್ಮ ಸರ್ಕಾರ ಅನುದಾನದ ಕೊರತೆ ಮಾಡಿಲ್ಲ ಎಂದು ವಿವರಿಸಿದರು.
ಮೆಟ್ರೋ ಮೂರನೇ ಫೇಸ್ ಮುಂದಿನ ವರ್ಷ ಶುರು ಮಾಡುತ್ತೇವೆ. ಬೆಂಗಳೂರಿನ ಹೊರ ಪಟ್ಟಣಗಳಿಗೆ ಮೂರನೇ ಫೇಸ್ ಮೆಟ್ರೋ ಸಂಪರ್ಕ ಕಲ್ಪಿಸಲಾಗುತ್ತಿದೆ. 15 ಸಾವಿರ ಕೋಟಿ ರೂ. ನಲ್ಲಿ ಸಬರ್ಬನ್ ರೈಲು ಯೋಜನೆ ಮಾಡ್ತಿದೀವಿ. ಈ ಯೋಜನೆಗೆ ಪ್ರಧಾನಿ ಮೋದಿ ಅವರು ಬಂದು ಚಾಲನೆ ಕೊಟ್ಟಿದ್ರು. ಮಹಾಲಕ್ಷ್ಮಿ ಲೇಔಟ್ ನಲ್ಲಿ ಗೋಪಾಲಣ್ಣ ಉತ್ತಮ ಕೆಲಸ ಮಾಡಿದ್ದಾರೆ. ಅವರ ದೇಹ ಎಷ್ಟು ದೊಡ್ಡದಿದೆಯೋ ಅಷ್ಟೇ ಅವರ ಹೃದಯವೂ ದೊಡ್ಡದಿದೆ ಎಂದು ತಮಾಷೆ ಮಾಡಿದರು.
ಪ್ರತಿ ವಾರ್ಡ್‍ನಲ್ಲಿ ‘ನಮ್ಮ ಕ್ಲಿನಿಕ್’ ಮಾಡ್ತೇವೆ. ಮುಂದಿನ ತಿಂಗಳಿಂದ ‘ನಮ್ಮ ಕ್ಲಿನಿಕ್’ 243 ವಾರ್ಡ್‍ಗಳಲ್ಲೂ ಬಡವರಿಗಾಗಿ ಆರಂಭ ಮಾಡಲಾಗುತ್ತೆ ಎಂದು ಭರವಸೆ ಕೊಟ್ಟರು.