ಮಹಾರಾಷ್ಟ್ರದ ವಿಧಾನ ಪರಿಷತ್ತಿನ 10 ಸ್ಥಾನಗಳಿಗೆ ಇಂದು ಮತದಾನ

ಮಹಾರಾಷ್ಟ್ರ ವಿಧಾನ ಪರಿಷತ್ತಿನ 10 ಸ್ಥಾನಗಳಿಗೆ ಇಂದು ಬೆಳಗ್ಗೆ ಮತದಾನ ಆರಂಭವಾಗಿದೆ.
ಬೆಳಗ್ಗೆ 9 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 4 ಗಂಟೆಗೆ ಮುಕ್ತಾಯವಾಗಲಿದ್ದು, ರಾತ್ರಿ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ.
10 ಸ್ಥಾನಗಳಿಗೆ ಒಟ್ಟು 11 ಅಭ್ಯರ್ಥಿಗಳು ಕಣದಲ್ಲಿದ್ದು, ಆಡಳಿತಾರೂಢ ಮಹಾ ವಿಕಾಸ್ ಅಘಾಡಿ (ಎಂವಿಎ) ಮಿತ್ರಪಕ್ಷಗಳಾದ ಶಿವಸೇನೆ, ಎನ್‍ಸಿಪಿ ಮತ್ತು ಕಾಂಗ್ರೆಸ್ ತಲಾ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ರಾಜ್ಯದಲ್ಲಿ ಪ್ರತಿಪಕ್ಷ ಬಿಜೆಪಿ ಐದು ಅಭ್ಯರ್ಥಿಗಳನ್ನು ಅಕಡಾದಲ್ಲಿರವುದು ಕುತೂಹಲ ಕೆರಳಿಸಿದೆ.
ವಿಧಾನ ಪರಿಷತ್ತಿನ ಪ್ರಸ್ತುತ ಎನ್‍ಸಿಪಿಯ ರಾಮರಾಜೇ ನಾಯಕ್ ನಿಂಬಾಳ್ಕರ್ ಮತ್ತು ಸಂಜಯ್ ದೌಂಡ್ ಬಿಜೆಪಿಯ ವಿರೋಧ ಪಕ್ಷದ ನಾಯಕ ಪ್ರವೀಣ್ ದಾರೆಕರ್, ಸುಜಿತ್ಸಿಂಗ್ ಠಾಕೂರ್, ಪ್ರಸಾದ್ ಲಾಡ್ ಮರಾಠ ನಾಯಕ ವಿನಾಯಕ ಮೇಟೆ ಮತ್ತು ಮಾಜಿ ಸಚಿವ ಸದಾಭಾವು ಖೋಟ್ , ರಾಜ್ಯ ಕೈಗಾರಿಕಾ ಸಚಿವ ಸುಭಾಷ್ ದೇಸಾಯಿ ಮತ್ತು ದಿವಾರ್ಕ ರಾವುಟೆ (ಇಬ್ಬರೂ ಶಿವಸೇನೆ).
ಅವರ ಮೇಲ್ಮನೆ ಅವಧಿ ಜುಲೈ 7 ಕ್ಕೆ ಅಂತ್ಯಗೊಳ್ಳಲಿದೆ.ಬಿಜೆಪಿ ಆರ ಎನ್ ಸಿಂಗ್ ನಿಧನದ ನಂತರ ಹತ್ತನೇ ಸ್ಥಾನ ತೆರವಾಗಿತ್ತು. ಶರದ್ ಪವಾರ್ ನೇತೃತ್ವದ ಎನ್‍ಸಿಪಿ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಬಿಜೆಪಿ ತೊರೆದಿದ್ದ ರಾಮರಾಜೇ ನಾಯಕ್ ನಿಂಬಾಳ್ಕರ್ ಮತ್ತು ಮಾಜಿ ಸಚಿವ ಏಕನಾಥ್ ಖಡ್ಸೆ ಅವರನ್ನು ಎನ್‍ಸಿಪಿ ಕಣಕ್ಕಿಳಿಸಿದೆ.
ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ನಂದೂಬಾರ್ ಜಿಲ್ಲಾಯಿಂದ ಶಿವಸೇನೆಯು ಸಚಿನ್ ಅಹಿರ್ ಮತ್ತು ಪದ್ವಿ ಅವರನ್ನು ಕಣಕ್ಕಿಳಿಸಿದೆ.ಮುಂಬೈ ಕಾಂಗ್ರೆಸ್ ಮುಖ್ಯಸ್ಥ ಭಾಯಿ ಜಗತಾಪ್ ಮತ್ತು ಮಾಜಿ ಸಚಿವ ಚಂದ್ರಕಾಂತ್ ಹಂದೋರೆ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.
ಬಿಜೆಪಿಯು ದಾರೆಕರ್ ಮತ್ತು ಲಾಡ್ ಅವರಿಗೆ ಮತ್ತೆ ಅವಕಾಶ ನೀಡಿದೆ ಮತ್ತು ರಾಮ್ ಶಿಂಧೆ, ಉಮಾ ಖಾಪ್ರೆ ಮತ್ತು ಶ್ರೀಕಾಂತ್ ಸ್ಪರ್ಧೆಗಿಳಿದ್ದಾರೆ.ಹಾಲಿ 285 ಶಾಸಕರಿಗೆ ಮತದಾನದ ಹಕ್ಕು ಯದ್ದು ಅಡಳಿತಾರೂಢ ಸರ್ಕಾರಕ್ಕೆ ಇಬ್ಬರು ಶಾಸಕರು ಜೈಲಿನಲ್ಲಿರುವ ಕಾರಣ ಮತದಾನಕ್ಕೆ ಅವಕಾಶ ಸಿಕ್ಕಿಲ್ಲ .
ಒಟ್ಟ ಹತ್ತು ಸ್ಥಾನಕ್ಕೆ 11 ಜನ ರ್ಸಗಳಿದ್ದು ಅಡ್ಡ ಮತದಾನ ಜಿದ್ದಾಜಿದ್ದಿ ಹೊರಾಟ ಕಂಡುಬಂದಿದೆ.ಪರಿಸ್ತಿತಿ ಲಾಭ ಪಡೆದು 5 ಸ್ತಾನ ಗೆಲ್ಲುವ ಅವಕಾಶವಿದೆ.ಆಡಳಿತಾರೂಢ ಮಹಾ ವಿಕಾಸ್ ಅಘಾಡಿ ಯಲ್ಲಿ ಶವಸೇನೆ-56, ಎನ್‍ಸಿಪಿ-50,ಕಾಂಗ್ರೆಸ್-44,ಎಸ್‍ಪಿ -2.ಬಿವಿಎ-3 ಪಿಜೆಪಿ.1ಪವಪ-1 ಪಕ್ಷೇತರರು 8ಪ್ರತಿಪಕ್ಷ.ಬಿಜೆಪಿ -106.ಪಕ್ಷೇತರರು-7 ತಟಸ್ಥ-5