
ಮಹಾರಾಷ್ಟ್ರದ ಔರಂಗಾಬಾದ್‍ನಲ್ಲಿರುವ ಮೊಘಲ್ ಚಕ್ರವರ್ತಿ ಔರಂಗಜೇಬ್ ಸ್ಮಾರಕದ ಅಸ್ತಿತ್ವವನ್ನು ಪ್ರಶ್ನಿಸಿ ಅದನ್ನು ಧ್ವಂಶಗೊಳಿಸಬೇಕು ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‍ಎಸ್) ನಾಯಕರೊಬ್ಬರು ಹೇಳಿದ ಬಳಿಕ ಸಮಾಧಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.ಎಐಎಂಐಎಂ ನಾಯಕ ಅಕ್ಬರುದ್ದೀನ್ ಓವೈಸಿ ಇತ್ತೀಚಿಗೆ ಸಮಾಗೆ ಭೇಟಿ ನೀಡಿದ್ದರು. ಅದನ್ನು ಆಡಳಿತಾರೂಢ ಶಿವಸೇನೆ ಹಾಗೂ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ ನವನಿರ್ಮಾಣ ಸೇನೆ (ಎಂಎನ್‍ಎಸ್) ಟೀಕಿಸಿದ್ದವು. ಎಂಎನ್‍ಎಸ್ ವಕ್ತಾರ ಗಜಾನನ್ ಕಾಳೆ ಟ್ವೀಟ್‍ನಲ್ಲಿ ಮಹಾರಾಷ್ಟ್ರದಲ್ಲಿ ಔರಂಗಜೇಬ್ ಸಮಾಧಿಯ ಅವಶ್ಯಕತೆ ಏಕೆ ಎಂದು ಪ್ರಶ್ನಿಸಿದ್ದಲ್ಲದೆ, ಜನ ಅಲ್ಲಿಗೆ ಭೇಟಿ ನೀಡದಂತೆ ಅದನ್ನು ನಾಶಪಡಿಸಬೇಕು ಎಂದು ಒತ್ತಾಯಿಸಿದರು.
ಟ್ವೀಟ್ ಬಳಿಕ ಕೆಲವು ಸ್ಥಳೀಯರು ಆತಂಕಗೊಂಡು ಸಮಾದಿ ಇರುವ ಕಟ್ಟಡಕ್ಕೆ ಬೀಗ ಹಾಕಲು ಯತ್ನಿಸಿದ್ದರು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‍ಐ) ಸುಪರ್ದಿನಲ್ಲಿರುವ ಈ ಕಟ್ಟಡಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
ಎಎಸ್‍ಐನ ಔರಂಗಾಬಾದ್ ವೃತ್ತದ ಅೀಧಿಕ್ಷಕ ಮಿಲನ್ ಕುಮಾರ್ ಚೌಲೆ, ಎಎಸ್‍ಐಗೆ ಲಿಖಿತವಾಗಿ ಮಾಹಿತಿ ನೀಡದ ಹೊರತು, ನಾವು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಸದ್ಯಕ್ಕೆ ಸ್ಮಾರಕವನ್ನು ಜನರ ಪ್ರವೇಶಕ್ಕೆ ಮುಕ್ತವಾಗಿ ತೆರೆದಿಡಲಾಗಿದೆ. ಹೆಚ್ಚುವರಿಯಾಗಿ ನಾಲ್ವರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಪರಿಸ್ಥಿತಿಯ ಬಗ್ಗೆ ಪೊಲೀಸರಿಗೆ ತಿಳಿಸಿದ್ದೇವೆ. ಭದ್ರತೆಗಾಗಿ ವಾಹನವನ್ನು ನಿಲ್ಲಿಸಲಾಗಿದೆ ಎಂದು ಹೇಳಿದರು. ಓವೈಸಿ ಸಮಾಧಿಗೆ ಭೇಟಿ ನೀಡಿರುವುದರ ಹಿಂದೆ ಮಹಾರಾಷ್ಟ್ರದಲ್ಲಿ ಹೊಸ ವಿವಾದವನ್ನು ಸೃಷ್ಟಿಸಿ, ಶಾಂತಿ ಕದಡುವ ಉದ್ದೇಶ ಇರುವ ಬಗ್ಗೆ ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಶಂಕೆ ವ್ಯಕ್ತ ಪಡಿಸಿದರು.