Weatherಬೆಂಗಳೂರುಹವಾಮಾನ

ಮಳೆಗೆ ಕುಸಿದ ೩ ಮಹಡಿ ಕಟ್ಟಡ

ನಗರದ ಅವಿನ್ಯೂ ರಸ್ತೆಯ ಬೆಳ್ಳಿ ಬಸವ ದೇವಸ್ಥಾನದ ಬಳಿ ನೆಲಕ್ಕೆ ಉರುಳಿ ಬಿದ್ದಿರುವ ಮೂರಂತಸ್ತಿನ ಕಟ್ಟಡ.ಬೆಂಗಳೂರು, ಆ.೬- ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆ ಅವಾಂತರ ಮುಂದುವರೆದಿದ್ದು, ಈ ನಡುವೆ ಮೂರು ಅಂತಸ್ತಿನ ಕಟ್ಟಡ ದಿಢೀರ್ ಕುಸಿದೆ.

ನಗರದ ಅವೆನ್ಯೂ ರಸ್ತೆಯ ಬೆಳ್ಳಿ ಬಸವ ದೇವಸ್ಥಾನ ಬಳಿಯ ಭಂಡಾರಿ ಎಂಬುವರಿಗೆ ಸೇರಿದ ಮೂರು ಅಂತಸ್ತಿನ ಕಟ್ಟಡ ಇಂದು ಮುಂಜಾನೆ ೩ ಗಂಟೆ ಸುಮಾರಿಗೆ ನೆಲಕ್ಕೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ಹಾನಿಯಾಗಿಲ್ಲ.

ನಗರದಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಈ ಅವಘಡ ಸಂಭವಿಸಿದ್ದು, ಪ್ಲಾಸ್ಟಿಕ್ ಮತ್ತು ಗಿಫ್ಟ್ ಮಳಿಗೆಗಳು ಈ ಕಟ್ಟಡದಲ್ಲಿದ್ದವು. ಘಟನೆ ಹಿನ್ನೆಲೆ ಅಗ್ನಿಶಾಮಕ ವಾಹನ ಸ್ಥಳಕ್ಕೆ ದೌಡು, ಪರಿಶೀಲನೆ ನಡೆಸಿದರು.

ಈ ಸಂಬಂಧ ಸಿಟಿ ಮಾರ್ಕೆಟ್ ಠಾಣಾ ವ್ಯಾಪ್ತಿಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.ಈ ಕುರಿತು ಪ್ರತಿಕ್ರಿಯಿಸಿದ ಮಳಿಗೆ ಮಾಲಕ ಅಖಿಲ್, ಈ ಕಟ್ಟಡ ಮೂವರು ಅಣ್ಣ ತಮ್ಮಂದಿರಿಗೆ ಸೇರಿದ್ದಾಗಿದೆ.

ಮೇಲಿನ ಎರಡು ಅಂತಸ್ತಿನಲ್ಲಿ ಯಾರು ವಾಸವಾಗಿರಲಿಲ್ಲ. ಮಳೆ ಬಂದಾಗ ನೀರು ಸೋರುತಿತ್ತು. ಮೇಲಿನ ಕಟ್ಟಡ ಕಳೆದ ಇಪ್ಪತ್ತು ವರ್ಷಗಳಿಂದ ಖಾಲಿ ಇದೆ. ಬೆಳಗ್ಗೆ ಮೂರುವರೇ ಸುಮಾರಿಗೆ ಈ ಘಟನೆ ನಡೆದಿದೆ ಎಂದರು.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button