ಮರಿಕೋಳಿಗಳ ಮೇಲೆ ದಾಳಿ ಇಟ್ಟ ನಾಗರ ಹಾವು, ಮರಿಗಳ ರಕ್ಷಣೆಗೆ ಪ್ರಾಣವನ್ನೇ ಪಣಕ್ಕಿಟ್ಟ ತಾಯಿ ಕೋಳಿ

ತಾಯಿ ಮನುಷ್ಯರ ತಾಯಿಯಾಗಿರಲಿ ಅಥವಾ ಪಶು ಪಕ್ಷಿಗಳ ತಾಯಿಯೇ ಆಗಿರಲಿ, ತನ್ನ ಮಕ್ಕಳನ್ನು ತಾಯಿ ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾಳೆ.
ಒಂದು ಮಕ್ಕಳ ಪ್ರಾಣಕ್ಕೆ ಕುತ್ತು ಬಂದರೆ, ತಾಯಿ ತನ್ನ ಪ್ರಾಣವನ್ನೇ ಪಣಕ್ಕಿಡಲು ಒಂದು ಕ್ಷಣ ಕೂಡ ಹಿಂದೆ ಮುಂದೆ ನೋಡುವುದಿಲ್ಲ.
ತನ್ನ ಮಕ್ಕಳಿಗೆ ಯಾವುದೇ ಧಕ್ಕೆಯಾಗದಂತೆ ತಾಯಿ ನೋಡಿಕೊಳ್ಳುತ್ತಾಳೆ.ತಾಯಿಯೋರ್ವಳು ತನ್ನ ಮಕ್ಕಳ ರಕ್ಷಣೆಗೆ ಪ್ರಾಣವನ್ನೇ ಪನಕ್ಕಿಟ್ಟಿರುವುದನ್ನು ನೀವು ಗಮನಿಸಬಹುದು.
ಈ ತಾಯಿ ಒಂದು ಕೋಳಿಯಾಗಿದೆ ಮತ್ತು ತನ್ನ ಮರಿಗಳನ್ನು ಒಂದು ಅಪಾಯಕಾರಿ ಹಾವಿನಿಂದ ರಕ್ಷಿಸಲು ತನ್ನ ಪ್ರಾಣದ ಜೊತೆಗೆ ಆಟವಾಡುತ್ತಿದೆ. ಇದಾದ ಬಳಿಕ ತಾಯಿ ಕೋಳಿ ಹಾವನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗುತ್ತಿದೆ ಎಂಬಂತೆ ತೋರುತ್ತಿದೆ.
ತಾಯಿ ಕೋಳಿ ತನ್ನ ಮರಿಗಳ ಜೊತೆಗೆ ಕುಳಿತಿರುವುದನ್ನು ನೀವು ನೋಡಬಹುದು. ಆಗಲೇ ಅದಕ್ಕೆ ಒಂದು ಅಪಾಯದ ಸಂಕೇತ ಸಿಗುತ್ತದೆ ಮತ್ತು ಕೋಳಿ ಎಚ್ಚೆತ್ತುಕೊಳ್ಳುತ್ತದೆ.ತಾಯಿ ಕೋಳಿ ತನ್ನ ಮಕ್ಕಳ ಬಳಿ ಕುಳಿತಿರುವುದನ್ನು ನೀವು ವೀಡಿಯೊದಲ್ಲಿ ಗಮನಿಸಬಹುದು.
ಇದ್ದಕ್ಕಿದ್ದಂತೆ ಅಲ್ಲೊಂದು ನಾಗರ ಹಾವು ಪ್ರತ್ಯಕ್ಷವಾಗುತ್ತದೆ. ಹಾವು ಮರಿ ಕೋಳಿಗಳ ಪ್ರಾಣವನ್ನು ತೆಗೆಯಲು ಹಾತೊರೆಯುತ್ತಿರುವುದನ್ನು ನೀವು ವಿಡಿಯೋದಲ್ಲಿ ಗಮನಿಸಬಹುದು. ನಂತರ ಹಾವು ಮೆಲ್ಲಗೆ ತೆವಳುತ್ತ ಮರಿ ಕೋಳಿಗಳ ಬಳಿಗೆ ಹೋಗುವುದನ್ನು ನೀವು ಗಮನಿಸಬಹುದು.
ತನ್ನ ಮರಿಗಳತ್ತ ಹಾವು ಬರುತ್ತಿರುವುದನ್ನು ಗಮನಿಸಿದ ತಾಯಿ ಕೋಳಿ, ಬಂಡೆಗಲ್ಲಿನಂತೆ ಹಾವಿನ ಮುಂದೆ ನಿಂತುಕೊಳ್ಳುತ್ತದೆ.ಹಾವು ಮರಿಗಳತ್ತ ತಲುಪುತ್ತಲೇ ತಾಯಿ ಕೋಳಿ ಹಾವಿನ ಮೇಲೆ ದಾಳಿ ಇಡುತ್ತದೆ.
ಇನ್ನೇನು ಹಾವು ಒಂದಾದರು ಮರಿ ಕೋಳಿಯ ಬೇಟೆ ಮಾಡಲಿದೆ ಎನ್ನುವಷ್ಟರಲ್ಲಿ ತಾಯಿ ಕೋಳಿ ಒಂದರ ಮೇಲೊಂದರಂತೆ ಹಲವು ಬಾರಿ ತನ್ನ ಚೂಪಾದ ಕೊಕ್ಕಿನಿಂದ ಕುಕ್ಕುತ್ತದೆ ಮತ್ತು ಮರಿಗಳನ್ನು ಅಲ್ಲಿಂದ ರಕ್ಷಿಸುವಲ್ಲಿ ಯಶಸ್ವಿಯಾಗುತ್ತದೆ.
ಈ ವಿಡಿಯೋವನ್ನು WILD COBRA ಹೆಸರಿನ ಯುಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮ ಬಳಕೆದಾರರ ಹೃದಯವನ್ನು ಗೆಲ್ಲುವಲ್ಲಿ ಭಾರಿ ಯಶಸ್ವಿಯಾಗಿದೆ.